ಜಿಎಸ್ಟಿ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೆ ನಷ್ಟ

ಜಿಎಸ್‌ಟಿ ಪರಿಹಾರ ನಿಗದಿಯ ವಿಚಾರದಲ್ಲಿ ಕರ್ನಾಟಕಕ್ಕೆ ನಷ್ಟವಾಗಿದ್ದು, 2019-20 ರ ಬಜೆಟ್‌ನಲ್ಲಿ 38,000 ಕೋಟಿ ನಿಗದಿ ಪಡಿಸಲಾಗಿತ್ತು. 2020-21 ರ ಬಜೆಟ್‌ನಲ್ಲಿ ರೂ 28,000 ಕೋಟಿ ಕುಸಿದಿತ್ತು. ಕಡಿತಗೊಂಡ ಮೊತ್ತಕ್ಕೆ ಪರಿಹಾರವಾಗಿ ರೂ 5,495 ಕೋಟಿ ವಿಶೇಷ ಅನುದಾನ ಮತ್ತು ಕೇಂದ್ರದ ನೆರವಿನ ಯೋಜನೆಗಳ ಅನುದಾನವನ್ನು ಈವರೆಗೂ ಬಿಡುಗಡೆ ಮಾಡಿಲ್ಲ.
ಜಿಎಸ್ಟಿ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಮತ್ತೆ ನಷ್ಟ

ಕೇಂದ್ರದ ಜಿಎಸ್‌ಟಿ ಪರಿಹಾರ ನಿಗದಿಯಲ್ಲಿ ಮತ್ತೆ ಕರ್ನಾಟಕಕ್ಕೆ ನಷ್ಟವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬಜೆಟ್‌ ಅಂದಾಜು ಮತ್ತು ಪರಿಷ್ಕೃತ ಅಂದಾಜುಗಳ ಪ್ರಕಾರ ಕರ್ನಾಟಕಕ್ಕೆ ಒಟ್ಟು ಜಿಎಸ್‌ಟಿ ಪರಿಹಾರದಲ್ಲಿ ರೂ 16,814 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

2020-21 ರಲ್ಲಿ ನಿಗದಿಯಾಗಿದ್ದಕ್ಕಿಂತ ಕಡಿಮೆ ಮೊತ್ತದ ಪರಿಹಾರ ದೊರಕಿದೆ. ಅಂದರೆ ಶೇಕಡಾ 14 ರಷ್ಟು ಕಡಿತ ಮಾಡಲಾಗಿದೆ.ಈ ಬಾರಿಯ ಜಿಎಸ್‌ಟಿ ಪರಿಹಾರ ಮೊತ್ತವನ್ನು ರಾಜ್ಯಕ್ಕೆ ರೂ 24,573 ಕೋಟಿ ನಿಗದಿ ಮಾಡಲಾಗಿದೆ. 2020-21 ಕ್ಕೆ ಹೋಲಿಸಿದರೆ ರೂ 3,427 ಕೋಟಿಯಷ್ಟು ಕಡಿಮೆ ಮೊತ್ತವನ್ನು ನಿಗದಿ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜಿಎಸ್‌ಟಿ ಪರಿಹಾರ ನಿಗದಿಯ ವಿಚಾರದಲ್ಲಿ ಕರ್ನಾಟಕಕ್ಕೆ ನಷ್ಟವಾಗಿದ್ದು, 2019-20 ರ ಬಜೆಟ್‌ನಲ್ಲಿ 38,000 ಕೋಟಿ ನಿಗದಿ ಪಡಿಸಲಾಗಿತ್ತು. 2020-21 ರ ಬಜೆಟ್‌ನಲ್ಲಿ ರೂ 28,000 ಕೋಟಿ ಕುಸಿದಿತ್ತು. ಕಡಿತಗೊಂಡ ಮೊತ್ತಕ್ಕೆ ಪರಿಹಾರವಾಗಿ ರೂ 5,495 ಕೋಟಿ ವಿಶೇಷ ಅನುದಾನ ಮತ್ತು ಕೇಂದ್ರದ ನೆರವಿನ ಯೋಜನೆಗಳ ಅನುದಾನವನ್ನು ಈವರೆಗೂ ಬಿಡುಗಡೆ ಮಾಡಿಲ್ಲ.

ಈ ಬಾರಿಯಾದರು ಜಿಎಸ್‌ಟಿ ಪರಿಹಾರ ರೂಪದಲ್ಲಿ ರೂ 28,000 ಕೋಟಿ ದೊರೆಯಬೇಕಿತ್ತು. ಈ ಮೊತ್ತದಲ್ಲಿ 7,900 ಕೋಟಿ ನಷ್ಟವಾಗಲಿದೆ. ಪರಿಷ್ಕೃತ ಅಂದಾಜುಗಳ ಪ್ರಕಾರ ರಾಜ್ಯಕ್ಕೆ ರೂ 20,073 ಕೋಟಿ ಮಾತ್ರ ಜಿಎಸ್‌ಟಿ ಪರಿಹಾರ ರೂಪದಲ್ಲಿ ದೊರಕಲಿದೆ ಎಂದು ಹಣಕಾಸು ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com