ಕೃಷಿಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿರೀಕ್ಷೆಗೆ ತಕ್ಕಂತಹ ಬಜೆಟ್‌ ಮಂಡನೆ ಆಗಿಲ್ಲ – ಕುರುಬೂರು ಶಾಂತಕುಮಾರ್‌

ಸರ್ಕಾರ ಬೆಳೆ ವಿಮೆಯನ್ನು ಜಾರಿಗೆ ತರುತ್ತದೆ. ಆದರೆ ಬೆಳೆ ವಿಮೆ ನಷ್ಟ ಕೊಡುವ ವೇಳೆ ಖಾಸಗಿ ಕಂಪನಿಗಳು ಚೌಕಾಸಿ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆಯೂ ಕೂಡ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಆಗ ಮಾತ್ರಾ ಬೆಳೆ ವಿಮೆಯಿಂದ ರೈತರಿಗೆ ಅನುಕೂಲವಾಗಲು ಸಾಧ್ಯವಿದೆ ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಕೃಷಿಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿರೀಕ್ಷೆಗೆ ತಕ್ಕಂತಹ ಬಜೆಟ್‌ ಮಂಡನೆ ಆಗಿಲ್ಲ – ಕುರುಬೂರು ಶಾಂತಕುಮಾರ್‌

ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಿಂದ ರೈತರಿಗೆ ಹೆಚ್ಚು ಉಪಯೋಗವಾಗದಿರುವುದು ಕಂಡುಬಂದಿದೆ. ಕೇಂದ್ರ ಸರ್ಕಾರ ರೈತರ ಮೂಗಿಗೆ ತುಪ್ಪ ಸವರುವಂತಹ ಕೆಲಸ ಮಾಡಿದೆಯೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಬೆಂಬಲ ಬೆಲೆಯನ್ನು ಏರಿಕೆ ಮಾಡುತ್ತೇವೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಶಾಸನ ಮತ್ತು ಖಾತರಿ ಬದ್ದವಾಗಿ ರೈತರಿಗೆ ಸಿಗುವಂತಹ ವ್ಯವಸ್ಥೆಯನ್ನು ಜಾರಿ ಮಾಡುತ್ತೇವೆ ಎಂಬ ಮಾತು ಪ್ರಸ್ತಾಪಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬೆಂಬಲ ಬೆಲೆಯ ಮಾನದಂಡವೇ ಸರಿಯಿಲ್ಲ ಎಂದು ದೇಶಾದ್ಯಂತ ರೈತರು ಹೋರಾಟ ಮಾಡುತ್ತಿದ್ದಾರೆ. ಅದನ್ನು ಬದಲು ಮಾಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಕೃಷಿ ಕಾನೂನುಗಳನ್ನು ಹಿಂಪಡೆಯ ಬೇಕೆಂದು ರೈತರು ಹೋರಾಟ ಮಾಡುತ್ತಿದ್ದೇವೆ. ಇವೆಲ್ಲದರ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಿದರೆ. ಸ್ವಲ್ಪಮಟ್ಟಿಗೆ ಅನುಕೂಲವಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ಫೆಬ್ರವರಿ 01 ರಂದು ಕೇಂದ್ರ ಸರ್ಕಾರ ಬಜೆಟ್‌ ಮಂಡನೆಯ ವೇಳೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದರ ಬಗ್ಗೆ ಚಿಂತನೆ ಮಾಡುತ್ತೇವೆ ಎಂದಿದ್ದಾರೆ. ಕಳೆದ ವರ್ಷವೂ ಹೀಗೆ ಹೇಳಿದ್ದರು. ಆದರೆ ಯಾವುದೇ ರೀತಿಯ ಯೋಜನೆಯನ್ನು ರೂಪಿಸಿಲ್ಲ,ಆದ್ದರಿಂದ ಬಜೆಟ್‌ ಬಗ್ಗೆ ನಮಗೆ ಭರವಸೆಯೇ ಹೊರಟೋಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಳೆ ವಿಮೆಯನ್ನು ಜಾರಿ ಮಾಡಬೇಕು, ಬೆಳೆ ವಿಮೆ ವ್ಯಾಪ್ತಿಯನ್ನು ವಿಸ್ತರಿಸಬೇಕು, ಮತ್ತು ಬೆಳೆ ನಷ್ಟವಾದರೆ ಬೆಳೆ ವಿಮೆ ಬರುವಂತಹ ವ್ಯವಸ್ಥೆ ಜಾರಿಯಾಗ ಬೇಕು ಎಂದಿದ್ದಾರೆ.

ಸರ್ಕಾರ ಬೆಳೆ ವಿಮೆಯನ್ನು ಜಾರಿಗೆ ತರುತ್ತದೆ. ಆದರೆ ಬೆಳೆ ವಿಮೆ ನಷ್ಟ ಕೊಡುವ ವೇಳೆ ಖಾಸಗಿ ಕಂಪನಿಗಳು ಚೌಕಾಸಿ ಮಾಡಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆಯೂ ಕೂಡ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಆಗ ಮಾತ್ರಾ ಬೆಳೆ ವಿಮೆಯಿಂದ ರೈತರಿಗೆ ಅನುಕೂಲವಾಗಲು ಸಾಧ್ಯವಿದೆ ಎಂದು ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಆದರೆ ಫೆಬ್ರವರಿ 1 ರಂದು ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ಹೊರೆಯಿಲ್ಲದ ಬಜೆಟ್‌ ಮಂಡಿಸಬೇಕೆಂದು ಯೋಚನೆ ಮಾಡಿ ಮಂಡಿಸಿದಂತಿದೆ. ಕೃಷಿಕ್ಷೇತ್ರದ ರೈತರ ಪಾಲಿಗೆ ಇದು ನಿರಾಸೆತಂದಿದೆ. ರೈತರ ಹೋರಾಟವನ್ನು ಗಮನದಲ್ಲಿಟ್ಟುಕೊಂಡು ಇನ್ನಾದರು ಕಾಯ್ದೆಗಳನ್ನು ವಾಪಾಸ್‌ ಪಡೆಯಬೇಕು. ಎಂಎಸ್‌ಪಿಯನ್ನು ಶಾಸನ ಬದ್ದ ಖಾತರಿಕೊಡುವ ವ್ಯವಸ್ಥೆಯನ್ನು ಜಾರಿಮಾಡಲ ಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com