ಕೇಂದ್ರ ಸರ್ಕಾರದ ಕಛೇರಿಯಲ್ಲಿ ʼಕನ್ನಡ ಬಳಕೆ ಕಡ್ಡಾಯವಲ್ಲʼ: ಕೇಂದ್ರ ಸ್ಪಷ್ಟನೆ

ತ್ರೀ ಭಾಷಾ ಸೂತ್ರ ಪಾಲನೆಯಾಗದಿರುವುದನ್ನು ಗೃಹ ಸಚಿವಾಲಯ ಗಮನಿಸಬೇಕೆಂದು ಹಾಸನದ ಎಂಜಿನಿಯರಿಂಗ್‌ ವಿದ್ಯಾರ್ಥಿ ಎಂ ಹೆಚ್‌ ಗೌತಮ್‌ ಗಣೇಶ್‌ ಆರ್‌ಟಿಐ ಮೂಲಕ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಶ್ನೆ ಕಳುಹಿಸಿ, ಉತ್ತರ ತಿಳಿಸುವಂತೆ ಕೋರಿದ್ದರು. ಅದಕ್ಕೀಗಾ ಗೃಹ ಸಚಿವಾಲಯ ಸ್ಪಷ್ಟತೆಯನ್ನು ನೀಡಿದೆ.
ಕೇಂದ್ರ ಸರ್ಕಾರದ ಕಛೇರಿಯಲ್ಲಿ ʼಕನ್ನಡ ಬಳಕೆ ಕಡ್ಡಾಯವಲ್ಲʼ: ಕೇಂದ್ರ ಸ್ಪಷ್ಟನೆ

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಜನವರಿ 16 ರಂದು ನಡೆದ "ಕ್ಷಿಪ್ರ ಕಾರ್ಯ ಪಡೆ" (Rapid Action Force) ಘಟಕದ ಶಂಕುಸ್ಥಾಪನೆಯನ್ನು ಅಮಿತ್ ಶಾ ನೆರವೇರಿಸಿದ್ದರು. ಕಾರ್ಯಕ್ರಮದ ಪೋಸ್ಟರ್‌ಗಳಲ್ಲಿ ಹಿಂದಿ ಮತ್ತು ಇಂಗ್ಗಿಷ್‌ ಬಳಕೆ ಮಾಡಲಾಗಿತ್ತು. ಕರ್ನಾಟಕದಲ್ಲಿ ಕನ್ನಡ ಬಳಸದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಬರಹಗಾರರು, ರಾಜಕೀಯ ಮುಖಂಡರುಗಳು, ಪ್ರಜ್ಞಾವಂತ ಸಮುದಾಯದವರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು.

ತ್ರೀ ಭಾಷಾ ಸೂತ್ರ ಪಾಲನೆಯಾಗದಿರುವುದನ್ನು ಗೃಹ ಸಚಿವಾಲಯ ಗಮನಿಸಬೇಕೆಂದು ಹಾಸನದ ಇಂಜೀನಿಯರಿಂಗ್‌ ವಿದ್ಯಾರ್ಥಿ ಎಂ ಹೆಚ್‌ ಗೌತಮ್‌ ಗಣೇಶ್‌ ಆರ್‌ಟಿಐ ಮೂಲಕ ಕೇಂದ್ರ ಗೃಹ ಸಚಿವಾಲಯಕ್ಕೆ ಪ್ರಶ್ನೆ ಕಳುಹಿಸಿ, ಉತ್ತರ ತಿಳಿಸುವಂತೆ ಕೋರಿದ್ದರು. ಅದಕ್ಕೀಗಾ ಗೃಹ ಸಚಿವಾಲಯ ಸ್ಪಷ್ಟತೆಯನ್ನು ನೀಡಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆಡಳಿತ ಭಾಷೆ ಕಾಯ್ದೆ(1963) ಹಾಗು 1976 ರ ಆಡಳಿತ ಭಾಷೆಗಳ ನಿಯಮಗಳ ಪ್ರಕಾರ ಕೇಂದ್ರ ಸರ್ಕಾರದ ಕಛೇರಿಯಲ್ಲಿ ದ್ವಿಭಾಷಾ ಸೂತ್ರ ಮಾತ್ರಾ ಅನ್ವಯವಾಗುತ್ತದೆ. ಶಿವಮೊಗ್ಗದಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ ಆಯೋಜಿಸಿದ್ದ ಕ್ಷಿಪ್ರ ಕಾರ್ಯ ಪಡೆ ಘಟಕದ ಶಂಕುಸ್ಥಾಪನೆ ಕಾರ್ಯಕ್ರಮ ಕೇಂದ್ರ ಗೃಹ ಸಚಿವಾಲಯದ ಅಡಿಗೆ ಬರುತ್ತದೆ.

ಅಂದರೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್) ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿರುವುದರಿಂದ ಇಲ್ಲಿ ತ್ರೀಭಾಷಾ ಸೂತ್ರ ಅನ್ವಯವಾಗುವುದಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

ಗೃಹ ಸಚಿವಾಲಯದ ಉತ್ತರಕ್ಕೆ ಮಾಹಿತಿ ಕೋರಿದ ಹಾಸನದ ಎಂಜಿನಿಯರಿಂಗ್ವಿ‌ ದ್ಯಾರ್ಥಿ ಎಂ.ಹೆಚ್‌ ಗೌತಮ್‌ ಗಣೇಶ್‌ ಪ್ರತಿಕ್ರಿಯಿಸಿ “ ತ್ರೀಭಾಷಾ ಸೂತ್ರ ಕೇವಲ ಹಿಂದಿಯೇತರ ರಾಜ್ಯಗಳಿಗೆ ಮಾತ್ರಾ, ಕೇಂದ್ರ ಸರ್ಕಾರ ಪಾಲಿಸ ಬೇಕಿಲ್ಲವಂತೆ”, ಇದು ವಿಪರ್ಯಾಸದ ಸಂಗತಿ, ಹಿಂದಿ ಹೇರಿಕೆ ನಡೆಯುತ್ತಿಲ್ಲ ಎಂಬುವವರು, ಕೇಂದ್ರ ಸರ್ಕಾರ ಈಗ ನೀಡಿದ ಉತ್ತರ ಓದಿಕೊಳ್ಳಿ, ಕರ್ನಾಟಕದಲ್ಲಿ ಕನ್ನಡಕ್ಕೆ ಮನ್ನಣೆ ಇಲ್ಲ ಅಂದರೆ ಏನರದ ಅರ್ಥ..? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲು ತ್ರಿಭಾಷಾ ಸೂತ್ರವನ್ನು ಕಿತ್ತೊಗೆಯಬೇಕು, ವಿಧಿ 343 ತಿದ್ದುಪಡಿಯಾಗಿ ಕನ್ನಡಕ್ಕೂ ಆಡಳಿತ ಭಾಷೆ ಸ್ಥಾನ ನೀಡಬೇಕು. ವಸಾಹತು ಶಾಹಿ ಹಿಂದಿಯನ್ನು ಕರ್ನಾಟಕದಲ್ಲಿ ಬಳಸಲು ಅವಕಾಶ ಕೊಡಬಾರದು ಎಂದು ಕರ್ನಾಟಕ ರಕ್ಷಣ ವೇದಿಕೆಯ ಸಂಘಟನಾ ಕಾರ್ಯದರ್ಶಿಯಾದ ಅರುಣ್‌ ಜಾವಗಲ್‌ ಕೇಂದ್ರದ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಕರ್ನಾಟಕದಲ್ಲಿ‌ ಕನ್ನಡ ಬಳಕೆಗೆ ಕಾನೂನು ನಿಯಮಗಳು ಅಡ್ಡಬರುತ್ತದೆ ಎಂದಾದರೆ ಮೊದಲು ಅವುಗಳನ್ನು ಕಿತ್ತೆಸೆಯಬೇಕು. ಕರ್ನಾಟಕದಲ್ಲಿ‌ ನಡೆಯುವ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕೆಂದು ಕಾಂಗ್ರೆಸ್‌ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com