ಗಾಂಧಿ ಹುತಾತ್ಮ ದಿನ: ಮಹಾತ್ಮನ ನೆನಪಿನಲ್ಲಿ ರೈತರ ಉಪವಾಸ ಸತ್ಯಾಗ್ರಹ

ಸಂಘ ಪರಿವಾರ ಶಕ್ತಿಗಳನ್ನು ಸ್ಥಳೀಯರು ಎನ್ನುವ ಹೆಸರಿನಲ್ಲಿ ಎತ್ತಿಕಟ್ಟುವ ಮೂಲಕ ಪೊಲೀಸರನ್ನು ಮತ್ತು ಅರೆಸೇನಾ ಪಡೆಯನ್ನು ಬಳಸಿ ಶಾಂತಿಯುತ ಹೋರಾಟ ಮಾಡುತ್ತಿರುವ ರೈತರ ಮೇಲೆ ದೈಹಿಕ ದಾಳಿ ಮಾಡಲಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.
ಗಾಂಧಿ ಹುತಾತ್ಮ ದಿನ: ಮಹಾತ್ಮನ ನೆನಪಿನಲ್ಲಿ ರೈತರ ಉಪವಾಸ ಸತ್ಯಾಗ್ರಹ

ರಾಷ್ಟ್ರೀಯ ಹುತಾತ್ಮರ ದಿನದಂದು ದೇಶದಾದ್ಯಂತ ರೈತರು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದಾರೆ. ದೆಹಲಿಯಲ್ಲಿ ಸುಮಾರು 63 ದಿನಗಳಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ರೈತ ಒಕ್ಕೂಟದ ಮುಖಂಡರು ನೀಡಿರುವ ಉಪವಾಸ ಸತ್ಯಾಗ್ರಹಕ್ಕೆ ಕರೆಗೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿಯೂ ಜನವರಿ 30 ಶನಿವಾರ ಬೆಳಗ್ಗೆಯಿಂದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಕರೆಕೊಟ್ಟ ಉಪವಾಸ ಸತ್ಯಗ್ರಹಕ್ಕೆ ಬೆಂಬಲ ಸೂಚಿಸಿ, ಕಾಂಗ್ರೆಸ್‌ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯದ ಮೈಸೂರು, ಶಿವಮೊಗ್ಗ ಮತ್ತು ಇತರ ಭಾಗಗಳಲ್ಲಿಯೂ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಸತ್ಯಾಗ್ರಹದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾಗಿರುವ ಕೋಡಿಹಳ್ಳಿ ಚಂದ್ರಶೇಖರ್ ಅವರು, ದೇಶದಲ್ಲಿ ರೈತರು ನಡೆಸುತ್ತಿರುವ ಚಳವಳಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ರೈತರು ದುಡಿಯುವ ಜನರು. ಅವರು ಒಮ್ಮೆ ಎದ್ದು ನಿಂತರೆ ನೀವು ಯಾರೂ ಲೆಕ್ಕಕ್ಕೇ ಇರಲ್ಲ, ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಗಾಂಧಿ ಹುತಾತ್ಮ ದಿನ: ಮಹಾತ್ಮನ ನೆನಪಿನಲ್ಲಿ ರೈತರ ಉಪವಾಸ ಸತ್ಯಾಗ್ರಹ
ರೈತರ ಹೋರಾಟ; ಜ. 30ರಂದು ರಾಜ್ಯದಲ್ಲೂ ಉಪವಾಸ ಸತ್ಯಾಗ್ರಹ

ರೈತ ಹಾಗೂ ಕೃಷಿ ಕ್ಷೇತ್ರದ ವಿರೋಧಿ ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿ ನಡೆಯುತ್ತಿರುವ ಈ ಪ್ರತಿಭಟನೆ, ಅಭೂತಪೂರ್ವ ಯಶಸ್ಸನ್ನು ಪಡೆಯುತ್ತಿದೆ. ಗಣರಾಜ್ಯೋತ್ಸವ ದಿನದಂದು ನಡೆದ ಅಹಿತಕರ ಘಟನೆಯಿಂದಾಗಿ ಈ ಹೋರಾಟದ ಶಕ್ತಿ ಕುಂದುವುದು ಎಂದು ಅಂದಾಜಿಸಿದ್ದ ಪ್ರಭುತ್ವಶಾಹಿ ವರ್ಗದವರಿಗೆ ನಿರಾಸೆಯಾಗಿದೆ. ಏಕೆಂದರೆ, ಅಂದಿನ ಘಟನೆಯ ನಂತರ ದೆಹಲಿಯ ಗಡಿ ಭಾಗಗಳಿಗೆ ಜನ ಸಾಗರವೇ ಹರಿದು ಬರುತ್ತಿದೆ ಎಂದು ದೆಹಲಿಯ ಪರಿಸ್ಥಿಯನ್ನು ವಿವರಿಸಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಾಪಾಸ್‌ ಪಡೆಯುವವರೆಗೂ ಹೋರಾಟವನ್ನು ಮುಂದುವರೆಸುತ್ತೇವೆ. ಜನವರಿ 26 ರಂದು ರೈತರ ಟ್ರ್ಯಾಕ್ಟರ್‌ ಮೆರವಣಿಗೆಯ ವೇಳೆ ದೆಹಲಿಯಲ್ಲಿ ನಡೆದ ಅಹಿತಕರ ಘಟನೆಯನ್ನು ಮುಂದಿಟ್ಟುಕೊಂಡು ಕಾರ್ಪೋರೇಟ್‌ ಮಾಧ್ಯಮಗಳ ಮೂಲಕ ರೈತ ಹೋರಾಟಕ್ಕೆ ಕಪ್ಪು ಮಸಿ ಬಳಿಯಲು ಪ್ರಯತ್ನಿಸಿದ್ದಾರೆಂದು ಸರ್ಕಾರದ ನಡೆಯನ್ನು ರೈತ ಮುಖಂಡರು ಟೀಕಿಸಿದ್ದಾರೆ.

ಸಂಘ ಪರಿವಾರ ಶಕ್ತಿಗಳನ್ನು ಸ್ಥಳೀಯರು ಎನ್ನುವ ಹೆಸರಿನಲ್ಲಿ ಎತ್ತಿಕಟ್ಟುವ ಮೂಲಕ ಪೊಲೀಸರನ್ನು ಮತ್ತು ಅರೆಸೇನಾ ಪಡೆಯನ್ನು ಬಳಸಿ ಶಾಂತಿಯುತ ಹೋರಾಟ ಮಾಡುತ್ತಿರುವ ರೈತರ ಮೇಲೆ ದೈಹಿಕ ದಾಳಿ ಮಾಡಲಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com