ಟ್ರಾಲ್‌ಗೆ ಆಹಾರವಾಗುತ್ತಿರುವ ʼಮಾಜಿ ಖಡಕ್ ಅಧಿಕಾರಿʼ ಅಣ್ಣಾಮಲೈ..!

ಈ ಹಿಂದೆ ಸಿಂಗಮ್‌ (ಸಿಂಹ) ಆಗಿದ್ದವರು ಇದೀಗ ಅಸಿಂಗಂ (ಅವಮಾನ) ಆಗಿದ್ದಾರೆ ಎಂದು ಒಬ್ಬರು ಬರೆದಿದ್ದಾರೆ.
ಟ್ರಾಲ್‌ಗೆ ಆಹಾರವಾಗುತ್ತಿರುವ ʼಮಾಜಿ ಖಡಕ್ ಅಧಿಕಾರಿʼ ಅಣ್ಣಾಮಲೈ..!

ತಮ್ಮ ಅಧಿಕಾರಾವಧಿಯಲ್ಲಿ ನೇರ, ದಿಟ್ಟ, ಖಡಕ್‌ ಅಧಿಕಾರಿಯೆಂದು ಖ್ಯಾತಿ ಹೊಂದಿದ್ದ, ಅನೇಕ ಯುವ ಜನತೆಗೆ ರೋಲ್‌ ಮಾಡೆಲ್‌ ಅಂತಿದ್ದ ತಮಿಳುನಾಡು ಮೂಲದ ಐಪಿಎಸ್‌ ಅಧಿಕಾರಿ ಕೆ ಅಣ್ಣಾಮಲೈ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್‌ಗಳಿಗೆ ಒಳಗಾಗುತ್ತಿದ್ದಾರೆ.

ಕರ್ನಾಟಕ ಐಪಿಎಸ್‌ ಕೇಡರ್‌ ಆಗಿದ್ದ ಅಣ್ಣಾಮಲೈ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳ ಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಪರಿಗೆ ಅಪಾರ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದರು. ಒಬ್ಬ ಸಾರ್ವಜನಿಕ ಅಧಿಕಾರಿಗೆ ಸಿಗಬೇಕಿದ್ದ ಮಾನ್ಯತೆಗಳಿಗಿಂತಲೂ ಹೆಚ್ಚು ಮಾನ್ಯತೆಯನ್ನು ಅಣ್ಣಾಮಲೈ ಸಾರ್ವಜನಿಕ ವಲಯದಿಂದ ಪಡೆದಿದ್ದರು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಣ್ಣಾಮಲೈ ಯಾವ ಕಾರ್ಯಕ್ರಮಕ್ಕೆ ಹೋದರೂ, ಯುವ ಅಭಿಮಾನಿಗಳು ಸೆಲ್ಫಿಗಾಗಿ ಮುತ್ತಿಕೊಳ್ಳುತ್ತಿದ್ದರು. ಅಂತಹಾ ಅಣ್ಣಾಮಲೈ ಇದೀಗ ಅತ್ಯಂತ ಹೀನಾಯವಾಗಿ ಸಾರ್ವಜನಿಕರಿಂದ ವ್ಯಂಗ್ಯಕ್ಕೆ ಒಳಗಾಗುತ್ತಿದ್ದಾರೆ.

ತಮ್ಮ ಸೇವೆಯಿಂದ ಸ್ವಯಂ ನಿವೃತ್ತಿ ಘೋಷಿಸಿ ಕುಟುಂಬದೊಂದಿಗೆ ಕಾಲ ಕಳೆಯುತ್ತೇನೆಂದು ಹೇಳಿ ಹೊರಟ ಅಣ್ಣಾಮಲೈ, ಬಳಿಕ ತಮಿಳುನಾಡು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ನಿವೃತ್ತಿ ಘೋಷಿಸಿದಾಗಲೇ, ಅಣ್ಣಾಮಲೈ ರಾಜಕೀಯ ಸೇರುತ್ತಾರೆ ಎಂಬ ವದಂತಿಗಳು ಕೇಳಿ ಬಂದಿತ್ತಾದರೂ ಅದನ್ನೆಲ್ಲಾ ನಿರಾಕರಿಸಿದ್ದ ಅಣ್ಣಾಮಲೈ ತಾನು ಯಾವುದೇ ರಾಜಕೀಯ ಪಕ್ಷಗಳಿಗೂ ಸೇರುವುದಿಲ್ಲ ಎಂದು ಹೇಳಿದ್ದರು. ಬಳಿಕ ಬಿಜೆಪಿಯೊಂದಿಗೆ ಹಲವು ಸಭೆಗಳಲ್ಲಿ ಗುರುತಿಸಿಕೊಂಡಾಗ ಸಾಕಷ್ಟು ಟೀಕೆಗೆ ಒಳಗಾದರು.

ಇದೀಗ ಬಿಜೆಪಿ ನಾಯಕರೆದುರು ಕೈಕಟ್ಟಿ ನಿಂತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅಣ್ಣಾಮಲೈ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ನಿರಾಸೆ ಉಂಟಾಗಿದೆ. ಐಪಿಎಸ್‌ ಹುದ್ದೆ ಅಲಂಕರಿಸಿದವರು ಅವಿದ್ಯಾವಂತ ರಾಜಕಾರಣಿಗಳ ಎದುರು ಹೀಗೆ ಕೈಕಟ್ಟಿ ನಿಲ್ಲುವಂತಹ ಪರಿಸ್ಥಿತಿ ಎದುರಾಗಿಬಿಟ್ಟಿತಲ್ಲಾ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಈ ಹಿಂದೆ ಸಿಂಗಮ್‌ (ಸಿಂಹ) ಆಗಿದ್ದವರು ಇದೀಗ ಅಸಿಂಗಂ (ಅವಮಾನ) ಆಗಿದ್ದಾರೆ ಎಂದು ಒಬ್ಬರು ಬರೆದಿದ್ದಾರೆ.

ಒಟ್ಟಿನಲ್ಲಿ, ಈ ಚಿತ್ರದ ಸತ್ಯಾಸತ್ಯತೆಯ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ನೆಟ್ಟಿಗರ ಪಾಲಿಗೆ ಅಣ್ಣಾಮಲೈ ಸದ್ಯಕ್ಕೆ ಹಾಸ್ಯದ ವಸ್ತುವಾಗಿ ಸಿಕ್ಕಿರುವುದು ನಿಜಕ್ಕೂ ದುರ್ದೈವ. ಈ ಹಿಂದೆ ಪ್ರಾಮಾಣಿಕ ಅಧಿಕಾರಿಯೆಂದು ಹೆಸರುವಾಸಿಯಾಗಿದ್ದ, ಅನೇಕ ಯುವಜನರಿಗೆ ಆದರ್ಶರಾಗಿದ್ದ ಅಣ್ಣಾಮಲೈ ಅವರಂತಹ ಅಧಿಕಾರಿಯೊಬ್ಬರು ರಾಜಕೀಯಕ್ಕೆ ಸೇರಿದ ಕೂಡಲೇ ʼಮೀಮ್‌ʼಗಳಿಗೆ ಆಹಾರವಾಗಿರುವುದು ಕೂಡಾ ಆಶ್ಚರ್ಯ ಹುಟ್ಟಿಸುತ್ತಿದೆ.

ಖಾಕಿ ತೊಟ್ಟು ಸಿಂಗಂ ತರ ಘರ್ಜಿಸುತ್ತಿದ್ದ ಅಣ್ಣಾಮಲೈ ಈಗ ಅವಿದ್ಯಾವಂತರ ನಡುವಲ್ಲಿ ಕೈಕಟ್ಟಿ ನಿಂತಿರುವ ದೃಶ್ಯವಿದು... ಹಣ, ಅಧಿಕಾರ...

Posted by Shiva Kcn on Wednesday, January 27, 2021

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com