72 ನೇ ಗಣರಾಜೋತ್ಸವದ ಹಿನ್ನಲೆ, ಬೆಳಗಾವಿ ರೈತರು ಸುವರ್ಣಸೌಧದ ಮುಂದೆ ಟ್ರ್ಯಾಕ್ಟರ್ನಲ್ಲಿಯೇ ಧ್ವಜಾರೋಹಣವನ್ನು ನೆರವೇರಿಸಿ ಭಾರತಾಂಬೆಗೆ ಗೌರವ ಸಲ್ಲಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಜನವರಿ26 ರಂದು ಟ್ರ್ಯಾಕ್ಟರ್ ಮೆರವಣಿಗೆ ನಡೆಸುವುದಾಗಿ ಕರೆಕೊಟ್ಟಿದ್ದರು. ಇದಕ್ಕೆ ರಾಜ್ಯಗಳ ರೈತರು ಒಕ್ಕೊರಳಿನಿಂದ ಬೆಂಬಲ ನೀಡಿದ್ದರು. ಇದೀಗ ಕರ್ನಾಟಕದ ಬೆಳಗಾವಿಯ ರೈತರು ಟ್ರ್ಯಾಕ್ಟರ್ ಮೆರವಣಿಗೆ ಹೊರಡುವ ಮುಂಚೆ ಟ್ರ್ಯಾಕ್ಟರ್ನಲ್ಲಿಯೇ ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿ ದೇಶಕ್ಕೆ ಗೌರವ ಸಲ್ಲಿಸಿದ್ದಾರೆ.
ಈ ವೇಳೆ ನೂರಾರು ರೈತರು ಪಾಲ್ಗೊಂಡಿದ್ದರು.ಧ್ವಜಾರೋಹಣದ ಬಳಿಕ ಟ್ರ್ಯಾಕ್ಟರ್ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸುವರ್ಣಸೌಧದಿಂದ ಬೆಳಗಾವಿ ನಗರಕ್ಕೆ ಮೆರವಣಿಗೆ ಹೊರಟಿದೆ. ಟ್ರ್ಯಾಕ್ಟರ್ ಮೆರವಣಿಗೆಯ ಬಳಿಕ ರೈತರು ನಗರದ ಚನ್ನಮ್ಮ ವೃತ್ತದ ಬಳಿ ಬೃಹತ್ ಸಭೆ ನಡೆಸುವ ಸಾಧ್ಯತೆಯಿದೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಿನ್ನಲೆಯಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ.