ಬೆಂಗಳೂರು: ರೈತರಿಂದ ಜನಗಣರಾಜ್ಯೋತ್ಸವ ಪರೇಡ್

ಬೈರಮಂಗಲ ಕ್ರಾಸ್‌, ಬಿಡದಿ(ಮೈಸೂರು ಮಾರ್ಗ), ನೈಸ್‌ ರೋಡ್‌ ಜಂಕ್ಷನ್‌ (ತುಮಕೂರು ರಸ್ತೆ), ನಂದಿ ಕ್ರಾಸ್‌ ದೇವನಹಳ್ಳಿ(ಚಿಕ್ಕಬಳ್ಳಾಪುರ ಮಾರ್ಗ), ಹೊಸಕೋಟೆ ಟೋಲ್‌ ಜಂಕ್ಷನ್ (ಕೋಲಾರ ಮಾರ್ಗ) ದಿಂದ ರೈತರು ತಮ್ಮ ಪರೇಡನ್ನು ಆರಂಭಿಸಿದ್ದಾರೆ
ಬೆಂಗಳೂರು: ರೈತರಿಂದ ಜನಗಣರಾಜ್ಯೋತ್ಸವ ಪರೇಡ್

ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡಿಗೆ ಪರ್ಯಾಯವಾಗಿ ಜನಗಣರಾಜ್ಯೋತ್ಸವ ಪರೇಡ್‌ ನಡೆಸುತ್ತಿರುವ ರೈತ ಹೋರಾಟಗಾರರಿಗೆ ಬೆಂಬಲ ಸೂಚಿಸಿ ಕರ್ನಾಟಕದ ರೈತ ಸಂಘಟನೆಗಳು ಕೂಡಾ ಬೆಂಗಳೂರಿನಲ್ಲಿ ಟ್ರಾಕ್ಟರ್‌ ಪರೇಡ್‌ ಅನ್ನು ನಡೆಸಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರಿಗೆ ಪ್ರವೇಶಿಸುವ ಮುಖ್ಯ ದಾರಿಗಳಲ್ಲಿ ರೈತರು ತಮ್ಮ ಟ್ರಾಕ್ಟರ್‌ ಪರೇಡನ್ನು ಆರಂಭಿಸಿದ್ದಾರೆ. ಬೈರಮಂಗಲ ಕ್ರಾಸ್‌, ಬಿಡದಿ(ಮೈಸೂರು ಮಾರ್ಗ), ನೈಸ್‌ ರೋಡ್‌ ಜಂಕ್ಷನ್‌ (ತುಮಕೂರು ರಸ್ತೆ), ನಂದಿ ಕ್ರಾಸ್‌ ದೇವನಹಳ್ಳಿ(ಚಿಕ್ಕಬಳ್ಳಾಪುರ ಮಾರ್ಗ), ಹೊಸಕೋಟೆ ಟೋಲ್‌ ಜಂಕ್ಷನ್ (ಕೋಲಾರ ಮಾರ್ಗ) ದಿಂದ ರೈತರು ತಮ್ಮ ಪರೇಡನ್ನು ಆರಂಭಿಸಿದ್ದಾರೆ. ಈ ಎಲ್ಲಾ ಜಾಥಾಗಳು ಬೆಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಬಂದು ಸೇರಲಿದೆ.

ಹೋರಾಟಕ್ಕೆ ಬಂದು ಸೇರುವ ರೈತರಿಗೆ ಊಟ-ತಿಂಡಿ ವ್ಯವಸ್ಥೆಯನ್ನು ಹೋರಾಟದ ಸಂಘಟಕರು ಆಯೋಜಿಸಿದ್ದರು. ಧ್ವಜಾರೋಹನ ಮಾಡುವ ಮೂಲಕ ಜಾಥಾವನ್ನು ಪ್ರಾರಂಭಿಸಲಾಯಿತು.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com