ಸಿದ್ದರಾಮಯ್ಯರನ್ನು ಕುರುಬ ಸಮುದಾಯದಿಂದ ಬಹಿಷ್ಕರಿಸಬೇಕಾಗುತ್ತೆ– H‌ ವಿಶ್ವನಾಥ್ ಎಚ್ಚರಿಕೆ

ಸಿದ್ದರಾಮಯ್ಯರವರು ಸ್ವಾಮಿಜಿಯನ್ನು ಅವಮಾನಿಸಿದ್ದು ಮನಸಿಗೆ ಬಹಳ ನೋವುಂಟು ಮಾಡಿದೆ. ಸ್ವಾಮಿಜಿಯ ನಡೆನುಡಿಯ ಬಗ್ಗೆ ಸಮುದಾಯದ ಜನರಿಗೆ ಒಳ್ಳೆಯ ಗೌರವವಿದೆ. ಅದೇ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಸ್ವಾಮಿಜಿ ಮೇಲೆ ಹಣದ ಆರೋಪ ಮಾಡಿರುವುದು ದುರಂತ ಸಂಗತಿ ಎಂದಿದ್ದಾರೆ.
ಸಿದ್ದರಾಮಯ್ಯರನ್ನು ಕುರುಬ ಸಮುದಾಯದಿಂದ ಬಹಿಷ್ಕರಿಸಬೇಕಾಗುತ್ತೆ– H‌ ವಿಶ್ವನಾಥ್ ಎಚ್ಚರಿಕೆ

ಕುರುಬರ ಮೀಸಲಾತಿ ಹೋರಾಟಕ್ಕೆ ಮೈಸೂರು ಸಂಸ್ಥಾನದ ಕನಕಗುರು ಪೀಠದ ಗುರುಗಳು ಆರ್‌ಎಸ್‌ಎಸ್‌ ನಿಂದ ಹಣ ತೆಗೆದುಕೊಂಡಿದ್ದಾರೆಂಬ ಸಿದ್ದರಾಮಯ್ಯ ಆರೋಪಕ್ಕೆ ವಿಧಾನಪರಿಷತ್‌ ಸದಸ್ಯ ವಿಶ್ವನಾಥ್‌ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯರವರು ಸ್ವಾಮಿಜಿಯನ್ನು ಅವಮಾನಿಸಿದ್ದು ಮನಸಿಗೆ ಬಹಳ ನೋವುಂಟು ಮಾಡಿದೆ. ಸ್ವಾಮಿಜಿಯ ನಡೆನುಡಿಯ ಬಗ್ಗೆ ಸಮುದಾಯದ ಜನರಿಗೆ ಒಳ್ಳೆಯ ಗೌರವವಿದೆ. ಅದೇ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಸ್ವಾಮಿಜಿ ಮೇಲೆ ಹಣದ ಆರೋಪ ಮಾಡಿರುವುದು ದುರಂತ ಸಂಗತಿ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದೇ ಮಠದ ಬೆಂಬಲದಿಂದ ಈಗ ಮಠದ ವಿರುದ್ಧನೇ ತಿರುಗಿ, ಕನಕಗುರು ಪೀಠಕ್ಕೆ ಸ್ವಲ್ಪವೂ ಗೌರವ ಕೊಡದೆ, ಇಲ್ಲಸಲ್ಲದ ಹೇಳಿಕೆಯನ್ನು ನೀಡುವ ಮುಖೇನ ಸ್ವಾಮೀಜಿಯ ಮಾನ ಹರಾಜು ಮಾಡುತ್ತಿದ್ದಾರೆ. ಸಿದ್ದರಾಮಯ್ಯರವರನ್ನು ಕುರುಬ ಸಮಾಜದಿಂದಲೇ ಬಹಿಷ್ಕರಿಸಬೇಕಾಗುತ್ತದೆ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಇಂತಹ ಹೇಳಿಕೆಯಿಂದ ಸ್ವಾಮೀಜಿಯವರು ನೊಂದಿದ್ದಾರೆ. ಮಾತಿಗೆ ಲಗಾಮಿಲ್ಲದೆ ಮಾತನಾಡುವ ಸಿದ್ದರಾಮಯ್ಯನವರಿಗೇನು ಗೊತ್ತು ಉತ್ತರ ಕರ್ನಾಟಕ ಭಾಗದ ಕುರುಬ ಸಮುದಾಯದವರ ಸಮಸ್ಯೆ, ಕುರುಬ ಸಮುದಾಯದ ಎಸ್‌ಸಿಎಸ್‌ಸ್ಟಿ ಮೀಸಲಾತಿ ಹೋರಾಟಕ್ಕೆ ಭಾಗಿಯಾಗುವ ಇಷ್ಟವಿದ್ದರೆ ಬನ್ನಿ ಇಲ್ಲದಿದ್ದರೆ ಸುಮ್ಮನಿರಿ ಸಮುದಾಯದ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡಬೇಡಿ ಎಂದು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com