4 ಕ್ಲಬ್‌ಗಳನ್ನು RTI ವ್ಯಾಪ್ತಿಗೆ ಒಳಪಡಿಸುವಂತೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು ಟರ್ಫ್‌ ಕ್ಲಬ್‌, ಮೈಸೂರು ರೇಸ್‌ ಕ್ಲಬ್‌, ಲೇಡೀಸ್‌ ಕ್ಲಬ್‌ ಮತ್ತು ಇನ್ಸ್ಟಿಟ್ಯೂಷನ್‌ ಆಫ್‌ ಇಂಜಿನಿಯರ್ಸ್ ಸರ್ಕಾರದಿಂದ ಭೂಮಿಯನ್ನು ಪಡೆದುಕೊಂಡಿವೆ. ಅವು ಬೇರೆ ಸಂಸ್ಥೆಗಳಾಗಿದ್ದಿದ್ದರೆ, ಕೋಟ್ಯಾಂತರ ರೂಪಾಯಿ ಹಣವನ್ನು ಸರ್ಕಾರಕ್ಕೆ ನೀಡಬೇಕಿತ್ತು.
4 ಕ್ಲಬ್‌ಗಳನ್ನು RTI ವ್ಯಾಪ್ತಿಗೆ ಒಳಪಡಿಸುವಂತೆ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

ಬೆಂಗಳೂರು ಟರ್ಫ್‌ ಕ್ಲಬ್‌, ಮೈಸೂರು ರೇಸ್‌ ಕ್ಲಬ್‌, ಲೇಡೀಶ್‌ ಕ್ಲಬ್‌ ಮತ್ತು ಇನ್ಸ್ಟಿಟ್ಯೂಷನ್‌ ಆಫ್‌ ಇಂಜಿನಿಯರ್ಸ್‌ಗಳನ್ನು ಆರ್‌ಟಿಐ ವ್ಯಾಪ್ತಿಗೆ ಒಳಪಡಿಸುವಂತೆ ರಾಜ್ಯ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಕಳೆದ ಸುಮಾರು ಒಂದು ದಶಕದಿಂದ ವಕೀಲರಾದ ಉಮಾಪತಿ ಅವರು ಮಾಡುತ್ತಿರುವ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.

ಸುಮಾರು ಹತ್ತು ವರ್ಷಗಳಿಂದ ಈ ವಿಚಾರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಬೆಂಗಳೂರು ಟರ್ಫ್‌ ಕ್ಲಬ್‌, ಗಾಲ್ಫ್‌ ಕ್ಲಬ್‌, ಲೇಡೀಸ್‌ ಕ್ಲಬ್‌ ಹೀಗೆ ಮುಂತಾದ ಕ್ಲಬ್‌ಗಳನ್ನು ಆರ್‌ಟಿಐ ವ್ಯಾಪ್ತಿಗೆ ತರಬೇಕೆಂದು ಬಹಳ ಪ್ರಯತ್ನ ಪಡುತ್ತಾ ಇದ್ದೇವೆ. ಐದು – ಆರು ವರ್ಷ ನಾವು ಮಾಹಿತಿ ಆಯೋಗದಲ್ಲಿ ಹೋರಾಟ ನಡೆಸಿದ ನಂತರ ಕ್ಲಬ್‌ಗಳು, ಹೈಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಾ ಇದ್ದರು, ಎಂದು ಉಮಾಪತಿ ಅವರು ಪ್ರತಿಧ್ವನಿಯೊಂದಿಗೆ ಮಾತನಾಡುವಾಗ ತಿಳಿಸಿದ್ದಾರೆ.

ಎಷ್ಟೇ ಪ್ರಯತ್ನ ಪಟ್ಟರೂ, ಹೈಕೋರ್ಟ್‌ ಪೀಠದ ಎದುರು ಈ ವಿಚಾರವನ್ನು ತರಲು ಸಾಧ್ಯವಾಗಿರಲಿಲ್ಲ. ಇಂತಹುದೇ ವಿಚಾರದಲ್ಲಿ ಸುಪ್ರಿಂಕೋರ್ಟ್‌ ಕೂಡಾ ಹಲವು ತೀರ್ಪುಗಳನ್ನು ನೀಡಿದೆ. ಆ ತೀರ್ಪುಗಳ ಆಧಾರದಲ್ಲಿ ನಾವು ಮುಂದುವರೆಯಲು ಸಾಧ್ಯವಾಯಿತು. ಸುಪ್ರಿಂಕೋರ್ಟ್‌ ಸ್ಪಷ್ಟವಾಗಿ ಏನು ಹೇಳಿದೆ ಎಂದರೆ, ಯಾವುದೇ ಸಂಸ್ಥೆ ಇರಲಿ, ಅದಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ದೇಣಿಗೆ ದೊರೆಯುತ್ತಿದ್ದರೆ, ಅಂತಹ ಸಂಸ್ಥೆಗಳನ್ನು ಆರ್‌ಟಿಐ ಅಡಿಯಲ್ಲಿ ತರಲು ಸುಪ್ರಿಂ ಆದೇಶ ನೀಡಿತ್ತು, ಎಂದು ವಕೀಲರಾದ ಉಮಾಪತಿ ಅವರು ತಿಳಿಸಿದ್ದಾರೆ.

ಸದ್ಯಕ್ಕೆ ನಾಲ್ಕು ಕ್ಲಬ್‌ಗಳ ಬಗ್ಗೆ ಕರ್ನಾಟಕ ಹೈಕೋರ್ಟ್‌ ತೀರ್ಪು ನೀಡಿದೆ. ಬೆಂಗಳೂರು ಟರ್ಫ್‌ ಕ್ಲಬ್‌, ಮೈಸೂರು ರೇಸ್‌ ಕ್ಲಬ್‌, ಲೇಡೀಸ್‌ ಕ್ಲಬ್‌ ಮತ್ತು ಇನ್ಸ್ಟಿಟ್ಯೂಷನ್‌ ಆಫ್‌ ಇಂಜಿನಿಯರ್ಸ್‌ ಕ್ಲಬ್‌ಗಳು ಸರ್ಕಾರದಿಂದ ಭೂಮಿಯನ್ನು ಪಡೆದುಕೊಂಡಿವೆ. ಅವು ಬೇರೆ ಸಂಸ್ಥೆಗಳಾಗಿದ್ದಿದ್ದರೆ, ಕೋಟ್ಯಾಂತರ ರೂಪಾಯಿ ಹಣವನ್ನು ಸರ್ಕಾರಕ್ಕೆ ನೀಡಬೇಕಿತ್ತು. ಆದರೆ, ಈಗ ಅಷ್ಟು ಹಣ ಆಯಾ ಕ್ಲಬ್‌ಗಳಿಗೆ ಆದಾಯವಾಗಿದೆ. ಹಾಗಾಗಿ ಅವರ ಆಡಳಿತ ಪಾರದರ್ಶಕವಾಗಿರಬೇಕು, ಎಂದು ವಕೀಲರು ವಾದ ಮಂಡಿಸಿದ್ದರು.

ಈ ವಾದವನ್ನು ಆಲಿಸಿದ ನ್ಯಾಯಾಲಯವು ಕ್ಲಬ್‌ಗಳ ಪ್ರಕರಣವನ್ನು ವಜಾಗೊಳಿಸಿದೆ. ಜೊತೆಗೆ, ಕ್ಲಬ್‌ಗಳು ಆರ್‌ಟಿಐ ವ್ಯಾಪ್ತಿಗೆ ಒಳಪಡುವಂತೆ ಮಹತ್ವದ ಆದೇಶವನ್ನು ನೀಡಿದೆ.

Click here to follow us on Facebook , Twitter, YouTube, Telegram

No stories found.
Pratidhvani
www.pratidhvani.com