ಸದಾ ಒಂದಿಲ್ಲೊಂದು ತೀಕ್ಷ್ಣ ಪ್ರತಿಕ್ರಿಯೆ ನೀಡುವ ಸಾಮಾಜಿಕ ಹೋರಾಟಗಾರ, ನಟ ಚೇತನ್ ಈ ಬಾರಿ ಸ್ಟಾರ್ ಕಲ್ಚರ್ ವಿರುದ್ಧ ದನಿಯೆತ್ತಿದ್ದಾರೆ.
ಸ್ಟಾರ್ ಕಲ್ಚರ್ ಅನ್ನು ಆಧುನಿಕ ಶತ್ರು ಎಂದು ಬಣ್ಣಿಸಿರುವ ಚೇತನ್, ಸ್ಟಾರ್ ಕಲ್ಚರ್ ಅನ್ನು ಬಂಡವಾಳ ಶಾಹಿ ವ್ಯವಸ್ಥೆ ಮತ್ತು ಬ್ರಾಹ್ಮಣ್ಯ ರಚನೆಗೆ ಹೋಲಿಸಿದ್ದಾರೆ.
ಚಲನಚಿತ್ರ ನಟರು ಅಸಮಾನ ವಾಣಿಜ್ಯ ವ್ಯವಸ್ಥೆಯ ಅನಗತ್ಯ ಫಲಾನುಭವಿಗಳು ಎಂದು ಚೇತನ್ ತೀಕ್ಷ್ಣವಾಗಿ ಟೀಕಿಸಿದ್ದಾರೆ. ಈ ವ್ಯವಸ್ಥೆಯು ಪರದೆಯ ಹಿಂದಿರುವ ಮಿದುಳುಗಳಿಗಿಂತ ಪರದೆಯ ಮುಂದೆ ಇರುವ ಮುಖಗಳನ್ನು ತಪ್ಪಾಗಿ ಮೌಲ್ಯೀಕರಿಸುತ್ತದೆ ಎಂದು ಸ್ಟಾರ್ ಸಂಸ್ಕೃತಿಯ ವಿರುದ್ಧ ಮಾತನಾಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ವತಃ ಚಲನಚಿತ್ರ ತಾರೆಯೂ ಆಗಿರುವ ಚೇತನ್, 'ಯಾವುದೇ ಚಲನಚಿತ್ರ ನಟ ಅಥವಾ ನಟಿ ಅವರ ಖ್ಯಾತಿಗೆ ‘ಅರ್ಹರಾಗಿಲ್ಲ’ ಎಂದು ಖಾರವಾಗಿ ಹೇಳಿದ್ದಾರೆ.
ಅಲ್ಲದೆ 'ನಾವೆಲ್ಲರೂ 'ಸ್ಟಾರ್ ಸಂಸ್ಕೃತಿಯನ್ನು' ವಿರೋಧಿಸಬೇಕು' ಎಂದು ಕರೆ ನೀಡಿದ್ದಾರೆ.
ಸಾಮಾಜಿಕ, ರಾಜಕೀಯ ತಲ್ಲಣಗಳಿಗೆ ತಕ್ಷಣ ಸ್ಪಂದಿಸುವ ಕನ್ನಡದ ಯುವನಟರ ಸಾಲಿನಲ್ಲಿ ಚೇತನ್ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಈ ಹಿಂದೆಯೂ ಸ್ಯಾಂಡಲ್ ವುಡ್ ಒಳಗಿನ ಅವ್ಯವಹಾರ, ಅಕ್ರಮಗಳ ವಿರುದ್ಧ ದನಿಯೆತ್ತಿರುವ ಚೇತನ್ ಮೀಟೂ ಪರವಾಗಿ ಫೈರ್ ಸಂಸ್ಥೆಯನ್ನೂ ಶುರು ಮಾಡಿದ್ದರು. ಅಲ್ಲದೆ, ಆನ್ಲೈನ್ ರಮ್ಮಿ ಮೊದಲಾದ ಜಾಹಿರಾತುಗಳಲ್ಲಿ ನಟಿಸುವ ನಟರ ವಿರುದ್ಧವೂ ಚೇತನ್ ಟೀಕಾಪ್ರಹಾರ ನಡೆಸಿದ್ದರು.