ಜನವರಿ 16ರಂದು ವಿಶ್ವದ ಅತಿದೊಡ್ಡ ಕೋವಿಡ್ ಲಸಿಕೆ ಅಭಿಯಾನ –ಪ್ರಧಾನಿ ಮೋದಿ

ರಾಜ್ಯದಲ್ಲಿ ಲಸಿಕೆ ಶೇಖರಣೆ, ವಿತರಣೆಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೊದಲ ಹಂತ ಜನವರಿ 16 ರಿಂದ ಆರಂಭವಾಗಲಿದ್ದು, 235 ಕೇಂದ್ರಗಳಲ್ಲಿ 16 ಲಕ್ಷ ಕರೋನಾ ಯೋಧರಿಗೆ ಲಸಿಕೆ ನೀಡಲಾಗುವುದು
ಜನವರಿ 16ರಂದು ವಿಶ್ವದ ಅತಿದೊಡ್ಡ ಕೋವಿಡ್ ಲಸಿಕೆ ಅಭಿಯಾನ –ಪ್ರಧಾನಿ ಮೋದಿ

ಕರೋನಾ ಲಸಿಕೆ ಬಳಕೆ ಕುರಿತು ಪ್ರಧಾನಿ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್‌ ನಡೆಸಿದ್ದಾರೆ. ದೇಶದಲ್ಲಿ ಜನವರಿ 16 ರಂದು ಕೊವಿಡ್‌ ಲಸಿಕೆ ನೀಡುವ ಮೂಲಕ ವಿಶ್ವದ ಅತಿ ದೊಡ್ಡ ಅಭಿಯಾನ ಮಾಡಲಾಗುತ್ತಿದೆ ಎಂದಿದ್ದಾರೆ. ಮೊದಲಿಗೆ ಮೂರು ಕೋಟಿ ಕರೋನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಗುತ್ತದೆ.

ಭಾರತ್‌ ಬಯೋಟೆಕ್‌ ಮತ್ತು ಸೀರಂ ಇಂಸ್ಟಿಟೂಟ್‌ ಅಭಿವೃದ್ಧಿ ಪಡಿಸಿದ ಕೋವಿಶೀಲ್ಡ್‌ ಮತ್ತು ಬಾರತ್‌ ಬಯೋಟೆಕ್‌ನ ಕೋವ್ಯಾಕ್ಸಿನ್‌ ಸಾರ್ವಜನಿಕ ಬಳಕೆಗೆ ಸಂಪೂರ್ಣ ಅನುಮೋದನೆ ನೀಡಲಾಗಿದೆ. ಮೊದಲಿಗೆ ಮೂರು ಕೋಟಿ ಕರೋನಾ ವಾರಿಯರ್ಸ್‌ಗೆ ಮತ್ತು ಕಾರ್ಮಿಕರಿಗೆ ವ್ಯಾಕ್ಸಿನ್‌ ನೀಡಲಾಗುವುದು ಇದರ ವೆಚ್ಚವನ್ನು ಕೇಂದ್ರ ಸರ್ಕಾರ ಬರಿಸಲಿದೆ ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ತಜ್ಞರ ಸಮಿತಿಯೊಂದಿಗೆ ಈಗಾಗಲೇ ಚರ್ಚಿಸಿದ್ದು, ಯಾವುದೇ ರೀತಿಯ ಪರಿಣಾಮ ಬೀರದಂತೆ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. ಈ ಹಿಂದೆ ಕೋವಿಡ್‌ನ ಸ್ಥಿತಿಗತಿ ಮತ್ತು ಲಸಿಕೆ ಸಿದ್ಧತೆಯ ಕುರಿತಂತೆ ರಾಜ್ಯ ಮತ್ತು ಕೇಂದ್ರಾಡಳಿತ ಮಟ್ಟದಲ್ಲಿ ಸಭೆ ನಡೆಸಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ.

ತುರ್ತು ಬಳಕೆಗಾಗಿ ಎರಡು ಮೇಡ್‌ ಇನ್ ಇಂಡಿಯಾ ಲಸಿಕೆ ಬಳಸಲಾಗುತ್ತಿದೆ. ನಂತರದ ದಿನ ಇನ್ನು ಹೊಸ ಮಾದರಿಯ ವ್ಯಾಕ್ಸಿನ್‌ ಬರಲಿವೆ ಎಂದು ದೇಶದ ಜನತೆಗೆ ಸಂದೇಶ ಕೊಟ್ಟಿದ್ದಾರೆ. ಈ ಸಂಬಂಧ ಭಾರತ್‌ ಬಯೋಟೆಕ್‌ ಮತ್ತು ಸೀರಂ ಇಂಸ್ಟಿಟೂಟ್‌ ಜೊತೆ ಲಸಿಕೆ ಖರೀದಿಗೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಸೇರಂ ಇಂಸ್ಟಿಟೂಟ್‌ನಿಂದ 1 ಕೋಟಿ 10 ಲಕ್ಷ ಡೋಸ್‌ಗೆ ಕೊಂಡುಕೊಳ್ಳಲಾಗುತ್ತಿದೆ. ಒಂದು ಡೋಸ್‌ಗೆ 200 ರೂ ನಿಗದಿ ಪಡಿಸಲಾಗಿದೆ.

ಜನವರಿ 16ರಂದು ವಿಶ್ವದ ಅತಿದೊಡ್ಡ ಕೋವಿಡ್ ಲಸಿಕೆ ಅಭಿಯಾನ –ಪ್ರಧಾನಿ ಮೋದಿ
ಮೊದಲ ಹಂತದ ಕೋವಿಡ್-19 ಲಸಿಕೆ ವೆಚ್ಚವನ್ನು ಕೇಂದ್ರ ಭರಿಸಲಿದೆ: PM ಮೋದಿ

ಪ್ರಧಾನಿ ಮೋದಿಯೊಂದಿಗೆ ಸಭೆ ನಡೆಸಿದ ನಂತರ ಸಿಎಂ ಯಡಿಯೂರಪ್ಪ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕರೋನಾ ಲಸಿಕೆ ಬಳಕೆ ಕುರಿತು ಪ್ರಧಾನಿ ಮೋದಿ ನಡೆಸಿದ ವಿಡಿಯೋ ಕಾನ್ಪರೆನ್ಸ್‌ ಸಭೆಯಲ್ಲಿ ಪಾಲ್ಗೊಳ್ಳಲಾಯಿತು. ಈ ಸಂಬಂಧ ರಾಜ್ಯದಲ್ಲಿ ಲಸಿಕೆ ಶೇಖರಣೆ, ವಿತರಣೆಗೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೊದಲ ಹಂತ ಜನವರಿ 16 ರಿಂದ ಆರಂಭವಾಗಲಿದ್ದು, 235 ಕೇಂದ್ರಗಳಲ್ಲಿ 16 ಲಕ್ಷ ಕರೋನಾ ಯೋಧರಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com