ಸದಸ್ಯರ ನೇಮಕಾತಿ ಪ್ರಕ್ರಿಯೆ ಆದೇಶವನ್ನು ಗಾಳಿಗೆ ತೂರಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ನೇಮಕಾತಿ ಆದೇಶ ದೊರಕಿದೆ. ಕೋರ್ಟ್‌ ನೀಡಿರುವ ಆದೇಶದ ಕುರಿತಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ನನ್ನ ನೇಮಕಾತಿಯ ವಿರುದ್ದ ಯಾರಾದರೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಸಲ್ಲಿಸಲಿ, ಅದನ್ನು ಕೊರ್ಟ್‌ನಲ್ಲಿಯೇ ನೋಡಿಕೊಳ್ಳುತ್ತೇವೆ
ಸದಸ್ಯರ ನೇಮಕಾತಿ ಪ್ರಕ್ರಿಯೆ ಆದೇಶವನ್ನು ಗಾಳಿಗೆ ತೂರಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಎಡವಟ್ಟುಗಳಿಗೆ ಕೊನೆಯೇ ಇಲ್ಲದಂತಾಗಿದೆ. ಮಂಡಳಿಗೆ ಸದಸ್ಯರ ನೇಮಕಾತಿಗೆ ಹೊಸ ನಿಯಮಗಳನ್ನು ರೂಪಿಸದೇ ಯಾರನ್ನೂ ನೇಮಕ ಮಾಡಬಾರದು ಎಂಬ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ನೀಡಿದ್ದರೂ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್‌ ಅಧ್ಯಕ್ಷರಾದ ಜಿ ಮರಿಸ್ವಾಮಿ ಅವರನ್ನು ಡಿಸೆಂಬರ್‌ ಅಂತ್ಯದಲ್ಲಿ ನೇಮಕ ಮಾಡಲಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬಂದಿದೆ. ಈ ಹಿಂದೆ ಡಾ. ಸುಧೀಂದ್ರ ಅವರು ಅಧ್ಯಕ್ಷರಾಗಿ ನೇಮಕವಾದಾಗ, ಅವರ ನೇಮಕಾತಿ ಕಾನೂನುಬಾಹಿರ ಎಂದು ಕಮಿಟಿ ಫಾರ್‌ ಪಬ್ಲಿಕ್‌ ಅಕೌಂಟೆಬಿಲಿಟಿ (Committee for Public Accountability) ಕೋರ್ಟ್‌ ಮೆಟ್ಟಿಲೇರಿತ್ತು. ನಂತರ ಸುಧೀಂದ್ರ ಅವರು ರಾಜಿನಾಮೆಯನ್ನೂ ಸಲ್ಲಿಸಿದ್ದರು.

ಪ್ರಸ್ತುತ ಆಂಜನೇಯ ರೆಡ್ಡಿ ಎಂಬುವವರು ಮಾಲಿನ್ಯ ನಿಯಂತ್ರಣ ಮಂಡಳಿಯ ನೇಮಕಾತಿ ಪ್ರಕ್ರಿಯೆಯ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ್ದು, ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ. ಈ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್‌ ನೀಡಿದ ಆದೇಶದ ಪ್ರಕಾರ, ಹೊಸ ನಿಯಮಗಳು ರೂಪಿಸುವವರೆಗೂ ಯಾರನ್ನೂ ನೇಮಕಾತಿ ಮಾಡಿಕೊಳ್ಳಬಾರದು ಎಂದು ಆದೇಶ ನೀಡಿತ್ತು.

ಆದರೆ, ಈ ಆದೇಶವನ್ನು ಗಾಳಿಗೆ ತೂರಿ ಮರಿಸ್ವಾಮಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ನೇಮಕಾತಿಯನ್ನು ಹೈಕೊರ್ಟ್‌ನಲ್ಲಿ ಪ್ರಶ್ನಿಸಿಲಾಗುವುದು ಎಂದು ಆಂಜನೇಯ ರೆಡ್ಡಿ ಪರ ವಕೀಲ ಪ್ರಿನ್ಸ್‌ ಐಸಾಕ್‌ ಅವರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಕೋರ್ಟ್‌ ಈ ಹಿಂದೆ ಆದೇಶ ನೀಡುವಾಗ ಮುಂದಿನ ವಿಚಾರಣೆಯ ವರೆಗೂ ಯಾವುದೇ ನೇಮಕಾತಿ ಮಾಡಬಾರದು ಎಂದು ಆದೇಶ ನೀಡಿತ್ತು. ಸದಸ್ಯರ ನೇಮಕಾತಿಗೆ ಹೊಸ ನಿಯಮಗಳನ್ನೂ ರೂಪಿಸಬೇಕೆಂದು ಆದೇಶಿಸಿತ್ತು. ಈಗ ಈ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕೆ ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸುತ್ತೇವೆ,” ಎಂದು ಪ್ರಿನ್ಸ್‌ ಅವರು ಹೇಳಿದ್ದಾರೆ.

ಈ ಕುರಿತಾಗಿ ಪ್ರತಿಧ್ವನಿಯೊಂದಿಗೆ ಮಾತನಾಡಿದ ಮರಿಸ್ವಾಮಿ ಅವರು, ಈ ಪ್ರಕರಣದ ಕುರಿತು ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

“ನೇಮಕಾತಿ ಆದೇಶ ದೊರಕಿದೆ. ಕೋರ್ಟ್‌ ನೀಡಿರುವ ಆದೇಶದ ಕುರಿತಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ನನ್ನ ನೇಮಕಾತಿಯ ವಿರುದ್ದ ಯಾರಾದರೂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಸಲ್ಲಿಸಲಿ, ಅದನ್ನು ಕೊರ್ಟ್‌ನಲ್ಲಿಯೇ ನೋಡಿಕೊಳ್ಳುತ್ತೇವೆ,” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಪ್ರತೀ ಬಾರಿಯೂ ನೇಮಕಾತಿಗೆ ಇರುವಂತಹ ನಿಯಮಾವಳಿ ಹಾಗೂ ಆದೇಶಗಳನ್ನು ಉಲ್ಲಂಘಿಸುತ್ತಲೇ ಇದೆ. ಈ ಉಡಾಫೆ ಪ್ರವೃತ್ತಿಗೆ ಕೊನೆಯಿಲ್ಲದಂತಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com