ಕನ್ನಡ ಧ್ವಜ ತೆರವುಗೊಳಿಸಿ ಎಂದು ಮಹಾರಾಷ್ಟ್ರಕ್ಕೆ ಹೋಗಿ ಹೇಳಿ: ಲಕ್ಷ್ಮಣ ಸವದಿ

ಕನ್ನಡ ನೆಲದಲ್ಲಿ ಕನ್ನಡ ಧ್ವಜ ಹಾರಿಸುವುದು ನಮ್ಮ ಹಕ್ಕು. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಕನ್ನಡ ಧ್ವಜ ತೆರವುಗೊಳಿಸಿ ಎಂದು ಮಹಾರಾಷ್ಟ್ರಕ್ಕೆ ಹೋಗಿ ಹೇಳಿ: ಲಕ್ಷ್ಮಣ ಸವದಿ

ಕನ್ನಡ ನೆಲದಲ್ಲಿ ಕನ್ನಡ ಧ್ವಜ ಹಾರಿಸುವುದು ನಮ್ಮ ಹಕ್ಕು. ಅದರಲ್ಲಿ ಯಾವುದೇ ತಪ್ಪಿಲ್ಲ. ಅದನ್ನು ತೆರವುಗೊಳಿಸುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಯವರು ಹೇಳುವುದಿದ್ದರೆ ಮಹಾರಾಷ್ಟ್ರಕ್ಕೆ ಹೋಗಿ ಹೇಳಲಿ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಳಗಾವಿ ಮಹಾನಗರಪಾಲಿಕೆ ಮುಂಭಾಗದಲ್ಲಿ ಹಾರಿಸಿರುವ ಕನ್ನಡ ಧ್ವಜವನ್ನು ಜ.21ರ ಒಳಗೆ ತೆರವುಗೊಳಿಸಬೇಕೆಂದು ಎಂಇಎಸ್‌ನವರು ಗಡುವು ವಿಧಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸವದಿ, ‘ಅವರು ಕಾನೂನು ಮೀರಿ ನಡೆದುಕೊಂಡರೆ ಅಥವಾ ಮಿತಿ ಮೀರಿ ಮಾತನಾಡಿದರೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು’ ಎಂದು ತಿಳಿಸಿದ್ದಾರೆ.

ಕನ್ನಡ ಧ್ವಜ ತೆರವುಗೊಳಿಸಿ ಎಂದು ಮಹಾರಾಷ್ಟ್ರಕ್ಕೆ ಹೋಗಿ ಹೇಳಿ: ಲಕ್ಷ್ಮಣ ಸವದಿ
ನಾವು ಹಿಂದೂಗಳು, ಕನ್ನಡಿಗರ ಓಟು ಹೋಗುತ್ತದೆಂಬ ಭಯವಿಲ್ಲ; ಬಸನಗೌಡ ಯತ್ನಾಳ್

ಮಹರಾಷ್ಟ್ರದ ಗಡಿಭಾಗವಾದ ಬೆಳಗಾವಿಯಲ್ಲಿ ಹಿಂದಿನಿಂದಲೂ ಮರಾಠರು ಕನ್ನಡಿಗರೊಂದಿಗೆ ಒಂದಿಲ್ಲೊಂದು ತಂಟೆ ಮಾಡುತ್ತಲೇ ಬರುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿಚಾರದಲ್ಲೂ ಮರಾಠಿಗರು ತಗಾದೆ ತೆಗೆದು ಶಿವಾಜಿ ಪ್ರತಿಮೆ ಸ್ಥಾಪಿಸಲು ಆಗ್ರಹಿಸಿದ್ದರು. ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಯತ್ನಾಲ್‌ ಪಾಟೀಲ್‌ ಮರಾಠಿಗರ ಆಗ್ರಹವಾದ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ ಬಿಜೆಪಿ ಕನ್ನಡಿಗರ ಹಿತಾಸಕ್ತಿಯನ್ನು ತಳ್ಳಿಹಾಕಿ ಮರಾಠಿಗರಿಗೆ ಪ್ರಾಶಸ್ತ್ಯ ನೀಡುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿರುವ ಬೆನ್ನಲ್ಲಿ ಬಿಜೆಪಿ ಹಿರಿಯ ನಾಯಕ ಲಕ್ಷ್ಮಣ ಸವದಿ ಈ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com