ಸಚಿವ ಸ್ಥಾನ ಸಿಕ್ಕರೆ ಬಿಜೆಪಿ ಸೇರಲು ಸಿದ್ದ – BSP ಉಚ್ಛಾಟಿತ ಶಾಸಕ ಎನ್ ಮಹೇಶ್

ನನಗೆ ಸಚಿವ ಸ್ಥಾನ ನೀಡುವುದಾದರೆ, ಖಂಡಿತಾ ಬಿಜೆಪಿಗೆ ಸೇರಬಹುದು. ಕ್ಷೇತ್ರದ ಅಭಿವೃದ್ದಿಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಿ ಎನ್ನುವ ಒತ್ತಡ ಬರುತ್ತಿದೆ. ಹಾಗಾಗಿ, ಸಚಿವ ಸ್ಥಾನ ಸಿಕ್ಕರೆ ಬಿಜೆಪಿ ಸೇರುವ ನಿರ್ಧಾರಕ್ಕೆ ಬಂದಿದ್ದೇನೆ
ಸಚಿವ ಸ್ಥಾನ ಸಿಕ್ಕರೆ ಬಿಜೆಪಿ ಸೇರಲು ಸಿದ್ದ – BSP ಉಚ್ಛಾಟಿತ ಶಾಸಕ ಎನ್ ಮಹೇಶ್

ಮಾಜಿ ಸಚಿವ ಮತ್ತು ಬಿಎಸ್‌ಪಿ ಉಚ್ಚಾಟಿತ ಕೊಳ್ಳೇಗಾಲದ ಶಾಸಕ ಎನ್. ಮಹೇಶ್ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಬಿಎಸ್‌ಪಿಯಿಂದ ಉಚ್ಚಾಟಿತರಾದ ಬಳಿಕ ತನ್ನ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ಎನ್‌. ಮಹೇಶ್‌ ಬಿಜೆಪಿ ಸೇರುವುದು ಖಚಿತ ಎಂದೇಳಲಾಗುತ್ತಿತ್ತು. ಹೀಗಿರುವಾಗಲೇ "ತನಗೆ ಉತ್ತಮ ಸ್ಥಾನಮಾನ ಸಿಕ್ಕಿದರೆ, ಬಿಜೆಪಿಗೆ ಸೇರುವುದು ಖಂಡಿತ” ಎಂದು ಹೇಳುವ ಮೂಲಕ ಎಲ್ಲಾ ವದಂತಿಗಳಿಗೆ ಎನ್‌. ಮಹೇಶ್‌ ತೆರೆ ಎಳೆದಿದ್ದಾರೆ.

ಮಂಗಳವಾರ ಹಕ್ಕಿಹಬ್ಬ ಕಾರ್ಯಕ್ರಮ ಉದ್ಘಾಟನೆಗಾಗಿ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ ಆಗಮಿಸಿದ್ದ ಎನ್‌. ಮಹೇಶ್‌ ಬಿಜೆಪಿ ಸೇರುವ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಹೀಗೆಂದರು. "ನಾನೀಗ ಸ್ವತಂತ್ರನು. ನನಗೆ ಸಚಿವ ಸ್ಥಾನ ನೀಡುವುದಾದರೆ, ಖಂಡಿತಾ ಬಿಜೆಪಿಗೆ ಸೇರಬಹುದು. ಕ್ಷೇತ್ರದ ಅಭಿವೃದ್ದಿಗೆ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಿ ಎನ್ನುವ ಒತ್ತಡ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಿಂದ ಬರುತ್ತಿದೆ. ಹಾಗಾಗಿ, ಸಚಿವ ಸ್ಥಾನ ಸಿಕ್ಕರೆ ಬಿಜೆಪಿ ಸೇರುವ ನಿರ್ಧಾರಕ್ಕೆ ಬಂದಿದ್ದೇನೆ"ಎಂದು ಸ್ಪಷ್ಟಪಡಿಸಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ2018ರ ಚುನಾವಣೆಯಲ್ಲಿ ಜೆಡಿಎಸ್‌-ಬಿಎಸ್‌ಪಿ ಮೈತ್ರಿ ಮಾಡಿಕೊಂಡ ಪರಿಣಾಮ ಎನ್‌. ಮಹೇಶ್‌ ಗೆದ್ದು ವಿಧಾನಸಭೆ ಪ್ರವೇಶಿಸಿದರು. ಅಂದು ಕರ್ನಾಟಕದಲ್ಲಿ ಬಿಎಸ್‌ಪಿಯಿಂದ ಗೆದ್ದ ಏಕೈಕ ಶಾಸಕ ಎನ್. ಮಹೇಶ್ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರದಿಂದ ಗೆದ್ದ ಇವರು, ಅಂದಿನ ಸಿಎಂ ಎಚ್‌.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿಶ್ವಾಸಮತಯಾಚನೆ ದಿನ ವಿಧಾನಸಭೆ ಕಲಾಪಕ್ಕೆ ಗೈರಾಗುವ ಮೂಲಕ ಬಿಜೆಪಿಗೆ ಎನ್‌ ಮಹೇಶ್‌ ಪರೋಕ್ಷ ಬೆಂಬಲ ನೀಡಿದ್ದರು. ಈ ಮೂಲಕ ಬಿಎಸ್‌ಪಿ ಜೆಡಿಎಸ್ ಬೆಂಬಲಿಸುವಂತೆ ಜಾರಿ ಮಾಡಿದ್ದ ವಿಪ್ ಉಲ್ಲಂಘನೆ ಮಾಡಿದ ಕಾರಣ ಎನ್‌ ಮಹೇಶ್‌ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು.ಇತ್ತೀಚೆಗೆ ಶಾಸಕ ಎನ್. ಮಹೇಶ್ ಬಿಜೆಪಿ ಸೇರುವ ಮಾಡಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಒಪ್ಪಿಗೆಯೂ ದೊರೆತಿದೆ. ಈ ಸಂಬಂಧ ಎನ್. ಮಹೇಶ್ ಜತೆಗೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಸಚಿವರಾದ ಕೆ. ಗೋಪಾಲಯ್ಯ, ಎಸ್. ಟಿ. ಸೋಮಶೇಖರ್ ಚರ್ಚಿಸಿದ್ದರು ಎನ್ನಲಾಗಿದೆ.

ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಬಿಜೆಪಿ ಒತ್ತು ನೀಡಿದೆ. ದಲಿತ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಎನ್. ಮಹೇಶ್ ಅವರಿಗೆ ಬಲೆ ಬೀಸಿದೆ. ಸಂಕ್ರಾಂತಿ ಬಳಿಕ ಎನ್‌ ಮಹೇಶ್‌ ಬಿಜೆಪಿ ಸೇರಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗಿದೆ.

ಬಿಜೆಪಿ ಸರ್ಕಾರ ರಚನೆಯಲ್ಲಿ ಮಹೇಶ್ ಅವರ ಪಾತ್ರವೂ ಇತ್ತು ಎಂದು ಹೇಳಲಾಗಿತ್ತು. ಅವಿಶ್ವಾಸ ನಿರ್ಣಯದ ವೇಳೆ ಎನ್‌ ಮಹೇಶ್‌ ಅವರಿಗೆ ಹೈಕಮಾಂಡ್‌ ಜೆಡಿಎಸ್‌ ಬೆಂಬಲಿಸುವಂತೆ ಆದೇಶ ಹೊರಡಿಸಿತ್ತು. ಆದರೆ, ಹೈಕಮಾಂಡ್ ಆದೇಶ ಉಲ್ಲಂಘಿಸುವ ಮೂಲಕ ಬಿಜೆಪಿಗೆ ಪರೋಕ್ಷವಾಗಿ ಎನ್‌ ಮಹೇಶ್‌ ಬೆಂಬಲ ನೀಡಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com