ವಾಣಿಜ್ಯ ಸಂಸ್ಥೆಗಳಿಗೆ 24×7 ವ್ಯವಹಾರ ನಡೆಸಲು ಅವಕಾಶ ನೀಡಿದ ರಾಜ್ಯ ಸರ್ಕಾರ

ಉದ್ಯೋಗಿಯನ್ನು ದಿನದಲ್ಲಿ ಎಂಟು ಗಂಟೆಗಳ ಮೀರಿ ಕೆಲಸ ಮಾಡಿದರೆ, ಅವರಿಗೆ ಹೆಚ್ಚುವರಿ ದುಡಿಮೆಯ ಭತ್ಯೆ ನೀಡಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.
ವಾಣಿಜ್ಯ ಸಂಸ್ಥೆಗಳಿಗೆ 24×7 ವ್ಯವಹಾರ ನಡೆಸಲು ಅವಕಾಶ ನೀಡಿದ ರಾಜ್ಯ ಸರ್ಕಾರ

ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಜನರನ್ನು ಕೆಲಸಕ್ಕೆ ನೇಮಿಸಿರುವ ಎಲ್ಲಾ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ವರ್ಷದ ಎಲ್ಲಾ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಕ್ರಮವು ಉದ್ಯೋಗ ಸೃಷ್ಟಿಸುವ ಮತ್ತು ಆರ್ಥಿಕ ಬೆಳವಣಿಗೆಯನ್ನು ಇನ್ನಷ್ಟು ವೇಗಗೊಳಿಸುವ ಗುರಿಯನ್ನು ಹೊಂದಿದೆ ರಾಜ್ಯ ಸರ್ಕಾರ ಶನಿವಾರ ತಿಳಿಸಿದೆ.

24×7 ಆಧಾರದ ಮೇಲೆ ಅಂಗಡಿ ಅಥವಾ ವಾಣಿಜ್ಯ ಸಂಸ್ಥೆಗಳನ್ನು ತೆರೆದಿಡಬಹುದೆಂದು ಸರ್ಕಾರ ನೀಡಿರುವ ಅನುಮತಿಯನ್ನು ನೌಕರರ ಮೇಲೆ ದೌರ್ಜನ್ಯ ಎಸಗಲು ಬಳಸಬಾರದೆಂಬ ಉದ್ದೇಶಕ್ಕಾಗಿ ನಿಬಂಧನೆಗಳನ್ನೂ ವಿಧಿಸಲಾಗಿದೆ. ದಿನಕ್ಕೆ ಹತ್ತು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವಂತೆ ಯಾವುದೇ ಉದ್ಯೋಗಿಯನ್ನು ಒತ್ತಾಯಿಸಬಾರದು ಎಂದು ರಾಜ್ಯ ಸರ್ಕಾರ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಎಲ್ಲಾ ಉದ್ಯೋಗದಾತರು ಯಾವುದೇ ದಿನದಲ್ಲಿ ಎಂಟು ಗಂಟೆಗಳಿಗಿಂತ ಹೆಚ್ಚು ಮತ್ತು ವಾರದಲ್ಲಿ ನಲವತ್ತೆಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಲು ಒತ್ತಾಯಿಸಬಾರದು. ಹೆಚ್ಚುವರಿ ದುಡಿಮೆ ಸೇರಿದಂತೆ ಕೆಲಸದ ಅವಧಿಯು ಯಾವುದೇ ದಿನದಲ್ಲಿ ಹತ್ತು ಗಂಟೆಗಳನ್ನು ಮೀರಬಾರದು” ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಎಲ್ಲಾ ಉದ್ಯೋಗಿಗಳಿಗೆ ಕನಿಷ್ಠ ವಾರದಲ್ಲಿ ರಜೆ ಪಡೆಯಲು ಅರ್ಹತೆ ಇದೆ ಎಂದು ಸರ್ಕಾರ ತಿಳಿಸಿದೆ. ಉದ್ಯೋಗಿಯನ್ನು ದಿನದಲ್ಲಿ ಎಂಟು ಗಂಟೆಗಳ ಮೀರಿ ಕೆಲಸ ಮಾಡಿದರೆ, ಅವರಿಗೆ ಹೆಚ್ಚುವರಿ ದುಡಿಮೆಯ ಭತ್ಯೆ ನೀಡಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ.

ಮಹಿಳಾ ಉದ್ಯೋಗಿಗಳನ್ನು ಸಾಮಾನ್ಯ ಸಂದರ್ಭಗಳಲ್ಲಿ ಯಾವುದೇ ದಿನ ರಾತ್ರಿ 8.00 ನಂತರ ಕೆಲಸ ಮಾಡಲು ಅನುಮತಿ ಇಲ್ಲ. ಮಹಿಳಾ ಉದ್ಯೋಗಿಯಿಂದ ಲಿಖಿತ ಒಪ್ಪಿಗೆ ಪಡೆದ ನಂತರ ಉದ್ಯೋಗದಾತರು ಮಹಿಳೆಯ ಘನತೆ, ಗೌರವ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ಕೊಟ್ಟು ರಾತ್ರಿ 8.00 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಕೆಲಸ ಮಾಡಲು ಅವಕಾಶ ನೀಡಬಹುದು ಎಂದು ಸರ್ಕಾರ ಹೇಳಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com