ಮೆಣಸಿನಕಾಯಿ ಘಾಟು ಈ ಬಾರಿ ಕೆಲವರಿಗೆ ಸ್ವೀಟು

ಇಲ್ಲಿ ಹೆಚ್ಚು ಹಣ ಕೊಟ್ಟು ಕೊಂಡ ಮೆಣಸಿನಕಾಯಿಯನ್ನು ದೊಡ್ಡ ದೊಡ್ಡ ಸಂಸ್ಥೆಗಳಿಗೆ ಮಾರುತ್ತಾರೆ. ಅವು ಬ್ಯ್ರಾಂಡ್ ಗಳಾಗಿ ವಿದೇಶಕ್ಕೆ ಮೆಣಸಿನಕಾಯಿ ಪುಡಿಯಾಗಿ ರಫ್ತಾಗುತ್ತವೆ.
ಮೆಣಸಿನಕಾಯಿ ಘಾಟು ಈ ಬಾರಿ ಕೆಲವರಿಗೆ ಸ್ವೀಟು

ಹೌದು ಈ ಬಾರಿ ಮೆಣಸಿಕಾಯಿ ಬೆಳೆದ ಕೆಲವು ರೈತರಿಗೆ ಲಾಟರಿ ಹೊಡೆದಿದೆ. ಕಳೆದ ವಾರ ಗದಗ್ ಜಿಲ್ಲೆಯ ಸವಡಿ ಗ್ರಾಮದ ರೈತರೊಬ್ಬರು ಒಂದು ಕ್ವಿಂಟಾಲ್ ಗೆ 41,000 ರೂ. ಗಳನ್ನು ಪಡೆದು ಐತಿಹಾಸಿಕ ದಾಖಲೆ ಮಾಡಿದ್ದರು. ಮೊನ್ನೆ ಸೋಮವಾರ ಬ್ಯಾಡಗಿ ಮೆಣಸಿನಕಾಯಿ ಕೇಂದ್ರದಲ್ಲಿ ರೈತರೊಬ್ಬರು 50,111 ಸಾವಿರಕ್ಕೆ ಮಾರಿ ಮತ್ತೊಂದು ದಾಖಲೆ ಮಾಡಿದ್ದಾರೆ.

ಇದು ಏಷಿಯಾ ಖಂಡದಲ್ಲೇ ಮೆಣಸಿನಕಾಯಿಗೆ ಸಿಕ್ಕ ಅತಿ ಹೆಚ್ಚು ದರ ಎನ್ನಬಹುದು. ಈ ಬಾರಿ ಚಳಿ ಹೆಚ್ಚಾಗಿರುವುದರಿಂದ ಹಲವು ಮೆಣಸಿನಕಾಯಿ ಮಾರಾಟಗಾರರು ಬೆಳೆ ನಷ್ಟವಾಗಬಹುದು ಎಂಬ ಭಯದಿಂದ ಬೇಗ ಬೇಗ ಕೀಳತೊಡಗಿದರು. ಗದಗ್ ರೈತರೊಬ್ಬರು ಹೇಳುವ ಪ್ರಕಾರ ಅವರು ತಮ್ಮ ಬೆಳೆಯನ್ನು ಸಂಜೆ 5 ಗಂಟೆಯಿಂದ ಬೆಳಗಿನ 8 ಗಂಟೆಯ ವರೆಗೆ ಬೆಳೆಯನ್ನು ತಾಡಪಾಲಿನಿಂದ ಹೊದಿಸಿ ಚಳಿಯಿಂದ ಕಾಪಿಟ್ಟುಕೊಳ್ಳುತ್ತಿದ್ದರಂತೆ, ಇದರಿಂದ ಕೆಂಪು ಮೆಣಸಿನಕಾಯಿ ತುಸು ಕಂದು ಬಣ್ಣಕ್ಕೆ ತಿರುಗಿದ್ದರಿಂದ ಹೆಚ್ಚು ಬೆಲೆ ಸಿಕ್ಕಿತು ಎಂದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಗದಗ್ ಜಿಲ್ಲೆಯ ಬೆಟಗೇರಿ ಗ್ರಾಮದ ರೈತ ಮಲ್ಲಿಕಾರ್ಜುನ ಬಸಪ್ಪ ಕರಿಬಿಷ್ಠಿ ಅವರಿಗೆ ಈ ಬಂಪರ್ ಬೆಲೆ ದೊರೆತಿದೆ.

ಗದುಗಿನ ಮೆಣಸಿನಕಾಯಿ ವ್ಯಾಪಾರಿಯೊಬ್ಬರ ಪ್ರಕಾರ, “ರೈತರು ತಂದ ಮೆಣಸಿನಕಾಯಿಯನ್ನು ನಾವು ಎಪಿಎಂಸಿ ನಲ್ಲಿ ಆಕ್ಷನ್ ಮಾಡುತ್ತೇವೆ. ದರ ಅವರೇ ನಿಗದಿ ಮಾಡುತ್ತಾರೆ. ಕಳೆದ ಒಂದು ವರ್ಷದಿಂದ ಮೆಣಸಿನಕಾಯಿ ಬೆಳೆದ ಕೆಲವು ರೈತರು ಉತ್ತಮ ಹಣ ಪಡೆದಿದ್ದಾರೆ. ಮುಂದೆಯೂ ಹೀಗೆ ಪಡೆಯಲಿ ಎಂದು ಹಾರೈಸುವೆವು:.

ಈ ವರ್ಷದ ಮೊದಲ ತಿಂಗಳಲ್ಲಿಯೂ ಗದುಗಿನ ರೈತರೊಬ್ಬರು 35 ಸಾವಿರ ಪಡೆದ ದಾಖಲೆ ಮಾಡಿದ್ದರು. ಇದೇ ವರ್ಷದಲ್ಲಿ ಮೂರು ಮೆಣಸಿನಕಾಯಿ ದಾಖಲೆಗಳಾದ ವು, ರೈತರು ಬಾಳು ಬಂಗಾರವಾಯಿತು. ಇದನ್ನು ಕಂಡು ಹಲವು ರೈತರು ಸಂಭ್ರಮಿಸಿದರು. ಕೋವಿಡಾತಂಕದಲ್ಲಿದ್ದ ಜನರ ಮುಖದಲ್ಲಿ ಕೊಂಚ ಮಂದಹಾಸ ಕಂಡಂಗಾಯಿತು.

ಮೆಣಸಿನಕಾಯಿ ಏನು ಮಾಡುತ್ತಾರೆ?

ಇಲ್ಲಿ ಹೆಚ್ಚು ಹಣ ಕೊಟ್ಟು ಕೊಂಡ ಮೆಣಸಿನಕಾಯಿಯನ್ನು ದೊಡ್ಡ ದೊಡ್ಡ ಸಂಸ್ಥೆಗಳಿಗೆ ಮಾರುತ್ತಾರೆ. ಅವು ಬ್ಯ್ರಾಂಡ್ ಗಳಾಗಿ ವಿದೇಶಕ್ಕೆ ಮೆಣಸಿನಕಾಯಿ ಪುಡಿಯಾಗಿ ರಫ್ತಾಗುತ್ತವೆ.

ಬಂಪರ್ ಬೆಲೆ ಪಡೆದ ಹೇಳಿದ ಮಾತಿದು, “ನಾನು ಟೆಂಡರಿಗಿಟ್ಟು ಕುಳಿತಾಗ ಒಮ್ಮೆಲೆ ಬಂದು ನೋಡತೊಡಗಿದರು. ನಾನು ಒಂದು ಕ್ಷಣ ಗಾಬರಿಯಾದೆ ನಂತರ ತಿಳಿಯಿತು, ನಾನು ತಂದ ಮೆಣಸಿನಕಾಯಿಗೆ 50,111 ರೂಪಾಯಿ ನಿಗದಿ ಮಾಡಿದ್ದಾರೆ. ಕೇಳಿದ ಕೂಡಲೇ ಸಂತಸವೆನಿಸಿತು. ಕೋವಿಡ್ ನಿಂತ ವರ್ಷವಿಡಿ ತೊಂದರೆ ಅನುಭಿಸಿದ್ದೆವು. ವರ್ಷದ ಕೊನೆಗೆ ಸಿಹಿ ಸುದ್ದಿ ಸಿಕ್ಕಿತು. ಅಷ್ಟು ಸಾಕು”.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com