ಐಎಂಎ ಹಗರಣ; ಹಣ ಪಡೆಯಲು ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

IMA ಸಂಸ್ಥೆಯಲ್ಲಿ ಠೇವಣಿ ಕಳೆದುಕೊಂಡವರು ಡಿಸೆಂಬರ್‌ 24 ರ ಒಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಡಿಸೆಂಬರ್‌ 24 ರ ಬಳಿಕ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಅಧೀಕಾರಿಗಳು ತಿಳಿಸಿದ್ದರು.
ಐಎಂಎ ಹಗರಣ; ಹಣ ಪಡೆಯಲು ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

ಐಎಂಎ ಸಂಸ್ಥೆಯಲ್ಲಿ ಹಣ ಹೂಡಿರುವವರು ತಮ್ಮ ಹಣ ವಾಪಸ್ ಪಡೆಯಲು ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಜನವರಿ 3 ರವರೆಗೆ ವಿಸ್ತರಿಸಲಾಗಿದೆ.

ಐಎಂಎ ಸಂಸ್ಥೆಯಲ್ಲಿ ಹಣ ಹೂಡಿರುವವರ ಬಳಿ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಅಥವಾ ಐಎಂಎ ಸಂಸ್ಥೆಯವರು ನೀಡಿರುವ ಗುರುತಿನ ಚೀಟಿ ಇಲ್ಲದೆಯೂ ಸಹ ತಮ್ಮ ಹಣ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸೆಕ್ಷನ್ 7(3) ರ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ (2004) ರ ಪ್ರಕಾರ ನಿಗದಿಪಡಿಸಿದ ಕೊನೆಯ ದಿನದ ಒಳಗಾಗಿ ಅರ್ಜಿ ಸಲ್ಲಿಸದಿದ್ದರೆ ನಂತರ ಯಾವುದೇ ಕ್ಲೇಮುಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಐಎಂಎ ಪ್ರಕರಣದ ವಿಶೇಷ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ, IMA ಸಂಸ್ಥೆಯಲ್ಲಿ ಠೇವಣಿ ಕಳೆದುಕೊಂಡವರು ಅರ್ಜಿ ಸಲ್ಲಿಸಲು ಆಹ್ವಾನಿಸಿದ್ದ ಅಧಿಕಾರಿಗಳು ನವೆಂಬರ್‌ 25 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದು, ಡಿಸೆಂಬರ್‌ 24 ರ ವೇಳೆಗೆ ಅವಧಿ ಮುಕ್ತಾಯವಾಗಲಿದೆ. ಡಿಸೆಂಬರ್‌ 24 ರ ಬಳಿಕ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದಿದ್ದರು. ಇದೀಗ ಕೊನೆಯ ದಿನಾಂಕವನ್ನು ಮುಂದೂಡಿರುವುದರಿಂದ ಸಂತ್ರಸ್ತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎನ್ನಲಾಗುತ್ತಿದೆ.

ಐಎಂಎ ಹಗರಣ; ಹಣ ಪಡೆಯಲು ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ
IMA ಹಗರಣ: ಹಣ ಕಳೆದುಕೊಂಡವರು ಡಿ. 24 ರೊಳಗೆ ಅರ್ಜಿ ಸಲ್ಲಿಸಲು ಸೂಚನೆ

ಈ ಕುರಿತು ಹೆಚ್ಚಿನ ವಿವರಗಳಿಗೆ ಅರ್ಜಿದಾರರು ಕಾಲ್‌ಸೆಂಟರ್ ಸಂಖ್ಯೆ 080-46885959 ಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಕರೆ ಮಾಡಬಹುದು. ಅಲ್ಲದೆ ವೆಬ್‌ಸೈಟ್ " imaclaims.karnataka.gov.in ಇ ಮೇಲ್ ಮೂಲಕ ಸಂಪರ್ಕಿಸಬಹುದು - splocaima20@gmail.com ವಾಟ್ಸ್‌ಆಪ್ ಸಂಖ್ಯೆ: 7975568880 ಅಥವಾ ಚಾಟ್‌ಬಾಕ್ಸ್ ಲಿಂಕ್ https://ot.v-connect.in/ ಅಥವಾ ಸಮಕ್ಷಮ ಪ್ರಾಧಿಕಾರದ ಕಚೇರಿ, ೨ನೇ ಮಹಡಿ, ಬಿ.ಎಂ.ಟಿ.ಸಿ. ಕಾಂಪ್ಲೆಕ್ಸ್, ಶಾಂತಿನಗರ, ಬೆಂಗಳೂರು-೫೬೦ ೦೨೭ ಇಲ್ಲಿ ಪಡೆಯಬಹುದಾಗಿದೆ ಎಂದು ಐಎಂಎ ತನಿಖೆಯ ವಿಶೇಷ ಅಧಿಕಾರಿಗಳು ತಿಳಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com