KIADBಯು ಕೈಗಾರಿಕೆಗೆಂದು ಸ್ವಾಧೀನಪಡಿಸಿಕೊಂಡಿದ್ದ ಪ್ರದೇಶದಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಿ ಜಮೀನು ದುರ್ಬಳಕೆ ಮಾಡಿದ ISKCON ಕುರಿತು ಪ್ರತಿಧ್ವನಿಯು ಈ ಹಿಂದೆ ವಿಶೇಷ ವರದಿಯನ್ನು ಪ್ರಕಟಿಸಿತ್ತು. ಇಂಡಿಯಾ ಹೆರಿಟೇಜ್ ಥೀಮ್ ಪಾರ್ಕ್ ನಿರ್ಮಾಣ ಮಾಡುತ್ತೇವೆಂದು ಹೇಳಿ ಮಂತ್ರಿ ಡೆವಲಪರ್ಸ್ನೊಂದಿಗೆ ಕೈಜೋಡಿಸಿ ಬರೋಬ್ಬರಿ 41 ಎಕರೆ 6 ಗುಂಟೆ ಜಮೀನಿನಲ್ಲಿ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಮುಂದಾಗಿರುವ ಇಸ್ಕಾನ್ ಸಂಸ್ಥೆಯ ಭೂ ದುರ್ಬಳಕೆ ಕತೆಯ ಮುಂದುವರಿದ ಭಾಗ ಇಲ್ಲಿದೆ.
2007-08ರಲ್ಲಿ ಅಪಾರ್ಟ್ಮೆಂಟ್ನ ನಿರ್ಮಾಣ ಕಾರ್ಯ ಆರಂಭವಾಗಿದೆ. ಸುಮಾರು 2012ರ ವೇಳೆಗೆ ಒಂದು ಅಪಾರ್ಟ್ಮೆಂಟ್ ಮಾತ್ರ ನಿರ್ಮಾಣವಾಗಿದ್ದು, ಸದ್ಯಕ್ಕೆ ಅದರಲ್ಲಿ ಮಾತ್ರ ಜನರು ವಾಸವಿದ್ದಾರೆ. ಉಳಿದಂತೆ ಹಲವು ಜನರು ಅಪಾರ್ಟ್ಮೆಂಟ್ ಖರೀದಿಗೆ ಈಗಾಗಲೇ ಮುಂಗಡ ಹಣ ಪಾವತಿ ಮಾಡಿದ್ದು, ಕಟ್ಟಡ ನಿರ್ಮಾಣ ಕಾರ್ಯ ಮಾತ್ರ ಪೂರ್ಣಗೊಂಡಿಲ್ಲ.
ಅಷ್ಟಕ್ಕೂ, ಈ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದನ್ನು ಮುಂದುವರೆಸಲು ಕಾರಣಕರ್ತರು ಯಾರು? ಯಾವ ಯಾವ ಸಂಸ್ಥೆಗಳ ಮುಖಾಂತರ ಮಂತ್ರಿ ಡೆವೆಲಪರ್ಸ್ಗೆ ಹಣದ ಹೊಳೆ ಹರಿದು ಬಂತು? ಇದರಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಪಾಲೆಷ್ಟು? ಎಂಬೆಲ್ಲಾ ಪ್ರಶ್ನೆಗಳಿಗೆ ಬಿಜೆಪಿ ಯು ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಅವರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಂಪೂರ್ಣ ಅಪಾರ್ಟ್ಮೆಂಟ್ ಕಟ್ಟಿರುವ ಜಾಗವೇ ಕೈಗಾರಿಕಾ ಉದ್ದೇಶಕ್ಕಾಗಿ ಬಳಸತಕ್ಕದ್ದು ಎಂಬ ಅರಿವಿದ್ದರೂ, ತೇಜಸ್ವಿ ಸೂರ್ಯ ಅವರು ಅಪಾರ್ಟ್ಮೆಂಟ್ ಕಟ್ಟಲು ತಮ್ಮಿಂದ ಎಷ್ಟು ಸಹಾಯ ಆಗುತ್ತದೆಯೋ ಅಷ್ಟು ಸಹಾಯ ಮಾಡಿದ್ದಾರೆ. ಇದನ್ನು ಖುದ್ದು ಅವರೇ ಹೇಳಿಕೊಂಡಿದ್ದಾರೆ.
Mantri Serenity Home Buyers Forum Bengaluru ಎಂಬ ಫೇಸ್ಬುಕ್ ಪೇಜ್ ಒಂದರಲ್ಲಿ ತೇಜಸ್ವಿ ಸೂರ್ಯ ಅವರ ವೀಡಿಯೋ ಒಂದನ್ನು ಸೆಪ್ಟೆಂಬರ್ 30ರಂದು ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ ಮಂತ್ರಿ ಸೆರೆನಿಟಿ ಅಪಾರ್ಟ್ಮೆಂಟ್ ಕಟ್ಟಲು ತಾನೆಷ್ಟು ಶ್ರಮಪಟ್ಟೆ ಎಂಬುದರ ಕುರಿತು ತೇಜಸ್ವೀ ಸೂರ್ಯ ಅವರೇ ಹೇಳಿಕೊಂಡಿದ್ದಾರೆ.
“ಸರ್ಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ಮಾಡಿ ಅದರಿಂದ ಉಳಿತಾಯ ಮಾಡಿದ ಹಣದಿಂದ ಫ್ಲ್ಯಾಟ್ ಖರೀದಿಸಿದವರು, ಸಣ್ಣ ಪುಟ್ಟ ಉದ್ಯೋಗ ಮಾಡುವವರು, ಮನೆ ಸಿಗಲಿಲ್ಲವಾದರೂ ಬ್ಯಾಂಕಿನಿಂದ ಪಡೆದ ಸಾಲಕ್ಕೆ ಬಡ್ಡಿ ಪಡೆದವರು ಎಲ್ಲರೂ ನನ್ನ ಕಚೇರಿಗೆ ಬಂದಿದ್ದರು. ಸಾವಿರಾರು ಕೋಟಿಯ ಯೋಜನೆ ಇದು. ಇದಕ್ಕೆ ಫಂಡ್ ನೀಡಿದವರು ಯಾರು ಅಂತ ನೋಡಿದರೆ, ಅಜಯ್ ಪಿರಮಾಲ್ ಅವರು. ಅವರು ಅಂಬಾನಿಯ ಬೀಗರು. ಜಮೀನು ಕೊಟ್ಟಿರುವುದು ಯಾರು ಎಂದರೆ, ಇಸ್ಕಾನ್ ಅವರು,” ಎಂಬ ಮಾತುಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಅತ್ಯಂತ ಮಧ್ಯಮ ವರ್ಗದ ಜನರು ಒಂದರಿಂದ ಎರಡು ಕೋಟಿಯಷ್ಟು ಹಣವನ್ನು ಇಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ಮನೆಗಳು ಇನ್ನೂ ಸಂಪೂರ್ಣವಾಗಿಲ್ಲ. ಹಾಗಾಗಿ ಆದಷ್ಟು ಶೀಘ್ರದಲ್ಲಿ ಹಣ ಬಿಡುಗಡೆ ಮಾಡಬೇಕು ಎಂದು ಅಜಯ್ ಪಿರಮಾಲ್ ಅವರ ಬಳಿ ಕೇಳಿಕೊಂಡೆ. ಅವರು ತಕ್ಷಣ ಒಪ್ಪಿದರು. ನಂತರ SBIನಿಂದ ಬರಬೇಕಿದ್ದ ಬಾಕಿ ಹಣವನ್ನು ನೀಡಬೇಕೆಂದು ನಿರ್ಮಲಾ ಸೀತಾರಾಮನ್ ಅವರಲ್ಲಿ ಕೇಳಿಕೊಂಡಾಗ ಅವರು ಕೂಡಾ ತಕ್ಷಣವೇ ಸ್ಪಂದಿಸಿದ್ದಾರೆ. ಮಾತನಾಡಿದ ಎರಡು ಮೂರು ದಿನಗಳಲ್ಲಿಯೇ ಎಲ್ಲಾ ಬಾಕಿ ಹಣ ಮಂತ್ರಿ ಡೆವೆಲಪರ್ಸ್ಗೆ ತಲುಪಿದೆ, ಎಂದು ತೇಜಸ್ವಿ ಅವರು ಎದೆಯುಬ್ಬಿಸಿಕೊಂಡು ಹೇಳಿದ್ದಾರೆ.
ಸಂಸದರು ಈಗಾಗಲೇ, ಹಣ ಪಾವತಿ ಮಾಡಿರುವ ಜನರಿಗೆ ಉಪಕಾರವಾಗುವಂತಹ ಕೆಲಸ ಮಾಡಿದ್ದೇನೋ ಸರಿ. ಆದರೆ, ಕೈಗಾರಿಕೆಗೆಂದು ಮೀಸಲಾದ ಜಾಗವನ್ನು ಈ ರೀತಿ ವಸತಿಗಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ ಎಂಬ ಕುರಿತು ಚಕಾರವೆತ್ತದೇ ಇದ್ದದ್ದು ನಿಜಕ್ಕೂ ಆಶ್ಚರ್ಯಕರ. ಸರ್ಕಾರಕ್ಕೆ ನಕಲಿ ದಾಖಲೆಗಳನ್ನು ನೀಡಿ ಪಡೆದುಕೊಂಡ ಜಮೀನನ್ನು ಸದ್ಬಳಕೆ ಮಾಡದೇ ಇರುವ ಕಾರಣಕ್ಕೆ ಆ ಜಮೀನನ್ನು ನಿರ್ದಿಷ್ಟ ಉಪಯೋಗಕ್ಕಾಗಿ ಬಳಸಿಕೊಳ್ಳುವಂತೆ ನೋಡಿಕೊಳ್ಳಬೇಕಾಗಿದ್ದದ್ದು ಒಬ್ಬ ಸಂಸದರ ಕರ್ತವ್ಯ. ಆದರೆ, ಅಲ್ಲಿ ನಡೆಯುತ್ತಿರುವ ತಪ್ಪನ್ನು ಮುಚ್ಚಿಹಾಕಿ, ಸರ್ಕಾರಕ್ಕೆ ಮೋಸ ಮಾಡಿರುವುದು ಎಷ್ಟು ಸರಿ?
ಅಪೂರ್ಣವಾಗಿಯೇ ಉಳಿದಿದೆ ಕಟ್ಟಡ ನಿರ್ಮಾಣ ಕಾರ್ಯ:
2012ರ ನಂತರ ಮುಂಗಡ ಹಣ ನೀಡಿ ಫ್ಲ್ಯಾಟ್ ಕಾಯ್ದಿರಿಸಿದ ಜನರಿಗೆ ಇಂದಿಗೂ ತಮ್ಮ ʼಕನಸಿನʼ ಮನೆ ಸಿಗಲಿಲ್ಲ. ಸುಮಾರು 80 ಲಕ್ಷದಿಂದ ಒಂದೂವರೆ ಕೋಟಿಯಷ್ಟು ಹಣವನ್ನು ಮುಂಗಡ ಪಾವತಿ ಮಾಡಲಾಗಿದೆ. ಆದರೆ, ಇನ್ನೂ ಅನೇಕರಿಗೆ ಫ್ಲ್ಯಾಟ್ ಹಂಚಿಕೆ ಮಾಡಲೇ ಇಲ್ಲ. ಮುಂದಿನ ವರ್ಷಾಂತ್ಯದ ಒಳಗಾಗಿ ಫ್ಲ್ಯಾಟ್ ನೀಡುವ ಸಾಧ್ಯತೆಗಳಿವೆ ಎಂಬ ಮಾಃಇತಿ ಲಭ್ಯವಾಗಿದೆ.