ಸಾರಿಗೆ ನೌಕರರು – ಸರ್ಕಾರದ ನಡುವಿನ ಸಂಧಾನ ವಿಫಲ; ಮುಷ್ಕರ ಮುಂದುವರೆಸಲು ನಿರ್ಧಾರ

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವವರೆಗೂ ನಮ್ಮ ಮುಷ್ಕರ ವಾಪಾಸ್‌ ಪಡೆಯಲಾಗುವುದಿಲ್ಲ ಎಂದು ಚಂದ್ರಶೇಖರ್‌ ಮುಷ್ಕರನಿರತ ನೌಕರರ ಮುಂದೆ ಘೋಷಣೆ ಮಾಡಿದ್ದಾರೆ.
ಸಾರಿಗೆ ನೌಕರರು – ಸರ್ಕಾರದ ನಡುವಿನ ಸಂಧಾನ ವಿಫಲ; ಮುಷ್ಕರ ಮುಂದುವರೆಸಲು ನಿರ್ಧಾರ

ಕಳೆದ ಮೂರು ದಿನಗಳಿಂದ ಮುಷ್ಕರ ಕೈಗೊಂಡಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಹಾಗೂ ಸರ್ಕಾರದ ನಡುವಿನ ಗೊಂದಲ ಮತ್ತೆ ಮುಂದುವರೆದಿದೆ. ವಿಕಾಸ ಸೌಧದದಲ್ಲಿ ನಡೆದ ಸಂಧಾನ ಸಭೆಯ ನಂತರ ಅಕ್ಕಪಕ್ಕದಲ್ಲಿ ನಿಂತು ಮಾಧ್ಯಮದವರೊಂದಿಗೆ ಮಾತನಾಡಿದ ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್‌ ಅವರು, ನಿರ್ಧಾರ ಸಕಾರಾತ್ಮಕವಾಗಿರಲಿದೆ ಎಂದಿದ್ದರು.

“ಆರನೇ ವೇತನ ಆಯೋಗ ಜಾರಿ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. ʼNot Issued Not Collcted’ ಪ್ರಕರಣಗಳನ್ನು ತೆಗೆದು ಹಾಕುವ ಭರವಸೆ ನೀಡಿದ್ದಾರೆ. ಘಟಕ ವ್ಯಾಪ್ತಿಯಲ್ಲಿ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗುವುದು. ತರಭೇತಿ ಅವಧಿಯನ್ನು ಎರಡು ವರ್ಷದಿMದ ಒಂದು ವರ್ಷಕ್ಕೆ ಇಳಿಸಲಾಗಿದೆ. ಕೋವಿಡ್‌ನಿಂದ ನಿಧನರಾದ ಸಾರಿಗೆ ನೌಕರರ ಕುಟುಂಬದವರಿಗೆ 30 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಸರ್ಕಾರ ಭರವಸೆ ನೀಡಿದೆ,” ಎಂದು ಚಂದ್ರಶೇಖರ್‌ ಅವರು ಹೇಳಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ನಂತರ ಫ್ರೀಡಂ ಪಾರ್ಕಿಗೆ ತೆರಳಿದ ನೌಕರರ ನಿಯೋಗ, ತನ್ನ ನಿರ್ಧಾರವನ್ನು ಬದಲಾಯಿಸಿದೆ. ಮುಷ್ಕರದಲ್ಲಿ ಪಾಲ್ಗೊಂಡಿದ್ದ ನೌಕರರ ಬಳಿ ಸರ್ಕಾರದ ನಿರ್ಧಾರಗಳನ್ನು ಹೇಳಿದ ಚಂದ್ರಶೇಖರ್‌ ಅವರು, ಸರ್ಕಾರಿ ನೌಕರರೆಂದು ಪರಿಗಣಿಸುವುದು ಬಿಟ್ಟು ಬೇರೆ ಅಷ್ಟೂ ಸೌಲಭ್ಯಗಳು ಸಿಗುತ್ತವೆ ಎಂದಾಗ, ಎಲ್ಲಾ ನೌಕರರು ಒಕ್ಕೊರಲಿನಿಂದ ಬೇಡ ಎಂದು ಕೂಗಿದ್ದಾರೆ.

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವವರೆಗೂ ನಮ್ಮ ಮುಷ್ಕರ ವಾಪಾಸ್‌ ಪಡೆಯಲಾಗುವುದಿಲ್ಲ ಎಂದು ಚಂದ್ರಶೇಖರ್‌ ಮುಷ್ಕರನಿರತ ನೌಕರರ ಮುಂದೆ ಘೋಷಣೆ ಮಾಡಿದ್ದಾರೆ. ಈ ಒಪ್ಪಂದ ಯಶಸ್ವಿಯಾಗಿಲ್ಲವೆಂದೂ ಅವರು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್‌ ಸವದಿ ಅವರು, ಫ್ರೀಡಂಪಾರ್ಕ್‌ಗೆ ಹೋದ ನಂತರ ಅವರ ತಲೆಕೆಡಿಸಿ ಒತ್ತಡ ಹಾಕಿದ್ದಾರಾ ಗೊತ್ತಿಲ್ಲ ನನಗೆ. ಇನ್ನೊಂದು ಸುತ್ತಿನ ಮಾತುಕತೆ ನಡೆಸುವ ಕುರಿತು ಯಾವುದೇ ಚರ್ಚೆಯನ್ನು ನಾವು ನಡೆಸಿಲ್ಲ, ಎಂದಿದ್ದಾರೆ.

ಒಟ್ಟಿನಲ್ಲಿ ಸಾರಿಗೆ ನೌಕರರ ಮಷ್ಕರ ಎಂಬ ಹೈಡ್ರಾಮ ಮತ್ತೆ ಮುಂದುವರೆದಿದ್ದು, ಯಾವಾಗ ಈ ಗೊಂದಲಗಳಿಗೆ ಮುಕ್ತಿ ಸಿಗಲಿದೆ ಕಾದುನೋಡಬೇಕಷ್ಟೇ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com