ನರಸಪುರ: ಹಿಂಸಾರೂಪಕ್ಕೆ ತಿರುಗಿದ ಖಾಸಗಿ ಕಂಪೆನಿಯ ವೇತನ ವ್ಯತ್ಯಯ ವಿಚಾರ

ನರಸಪುರದಲ್ಲಿ ರೂ. 2900 ಕೋಟಿಗಳ ಹೂಡಿಕೆ ಹಾಗೂ 10,000 ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿದ ಕಾರಣಕ್ಕಾಗಿ ಕರ್ನಾಟಕ ಸರ್ಕಾರ 43 ಎಕರೆ ಭೂಮಿಯನ್ನು ವಿಸ್ಟ್ರಾನ್‌ ಕಂಪೆನಿಗೆ ನೀಡಿತ್ತು.
ನರಸಪುರ: ಹಿಂಸಾರೂಪಕ್ಕೆ ತಿರುಗಿದ ಖಾಸಗಿ ಕಂಪೆನಿಯ ವೇತನ ವ್ಯತ್ಯಯ ವಿಚಾರ

ಬೆಂಗಳೂರಿನ ಸಮೀಪದ ನರಸಹಳ್ಳಿ ಬಳಿಯಿರುವ ಐಫೋನ್‌ ತಯಾರಿಕಾ ಘಟಕ ವಿಸ್ಟ್ರಾನ್‌ ನ ಕಾರ್ಮಿಕರು, ಬೆಳ್ಳಂಬೆಳಗ್ಗೆ ಕಚೇರಿಯ ಗಾಜುಗಳನ್ನು ಪುಡಿಗಟ್ಟಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಸರಿಯಾದ ವೇತನ ನೀಡದೇ ಇರುವ ಕಾರಣಕ್ಕಾಗಿ ಕಾರ್ಮಿಕರು ಈ ರೀತಿ ನಡೆದುಕೊಂಡಿದ್ದಾರೆಂದು ಹೇಳಲಾಗಿದೆ. ಸ್ಥಳಕ್ಕೆ ವೇಮಗಲ್‌ ಪೊಲೀಸ್‌ ಠಾಣೆಯ ಸಿಬ್ಬಂದಿ ದೌಡಾಯಿಸಿದ್ದು, ಹೆಚ್ಚಿನ ಭದ್ರತೆಗಾಗಿ ಕೋಲಾರದಿಂದ ಪೊಲೀಸ್‌ ಪಡೆಯನ್ನು ಕರೆಯಿಸಿಕೊಳ್ಳಲಾಗಿದೆ.

ಮೂಲಗಳ ಪ್ರಕಾರ ಸುಮಾರು 2000 ಜನರಿರುವ ಕಂಪೆನಿಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ವೇತನ ವ್ಯತ್ಯಯದ ಕುರಿತು ಅಸಮಾಧಾನದಿಂದ ಇದ್ದರು. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅವರ ಅಸಮಾಧಾನವು ಸ್ಫೊಟಗೊಂಡಿದ್ದು, ಕಚೇರಿಯ ಗಾಜುಗಳನ್ನು ಪುಡಿಗಟ್ಟಿ, ಕಾರುಗಳಿಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಸಿಬ್ಬಂದಿಗಳು ಮಾಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ


ಸಿಬ್ಬಂದಿಯೋರ್ವರು ಹೇಳಿರುವ ಪ್ರಕಾರ, ಕೆಲಸ ನೀಡುವ ಸಂದರ್ಭದಲ್ಲಿ 21 ಸಾವಿರ ರೂ. ಸಂಬಳ ಕೊಡುತ್ತೇವೆಂದು ಹೇಳಿ ನಂತರ ಕೇವಲ 15 ಸಾವಿರ ಮಾತ್ರ ನೀಡಿದರು. ನಂತರ ಅದು 12 ಸಾವಿರಕ್ಕೆ ಇಳಿಯುತು. ಇದು ಎಂಜಿನಿಯರಿಂಗ್‌ ಪದವೀಧರರ ಕಥೆಯಾದರೆ, ಇತರರಿಗೆ ಕೇವಲ 8 ಸಾವಿರ ರೂ. ವೇತನ ನೀಡಲಾಗುತ್ತಿತ್ತು. ಕಳೆದ ತಿಂಗಳು ಕೆಲಸ ಮಾಡಿದ್ದಕ್ಕಾಗಿ ಕೆಲವು ಕಾರ್ಮಿಕರಿಗೆ ಕೇವಲ ರೂ. 500 ವೇತನ ನೀಡಿದ್ದು ಕೆರಳಿಸಿದೆ.

ನರಸಪುರದಲ್ಲಿ ರೂ. 2900 ಕೋಟಿಗಳ ಹೂಡಿಕೆ ಹಾಗೂ 10,000 ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿದ ಕಾರಣಕ್ಕಾಗಿ ಕರ್ನಾಟಕ ಸರ್ಕಾರ 43 ಎಕರೆ ಭೂಮಿಯನ್ನು ವಿಸ್ಟ್ರಾನ್‌ ಕಂಪೆನಿಗೆ ನೀಡಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com