FDA, SDA ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಯಾವಾಗ ಕೊಡುತ್ತೀರಾ: AAP ಪ್ರಶ್ನೆ

ನಮ್ಮ ಮೂಲ ದಾಖಲೆಗಳನ್ನು ಇಲಾಖೆಗಳಿಗೆ ಕೊಟ್ಟಿದ್ದು ಈ ದಾಖಲಾತಿಗಳು ಇಲ್ಲದೆ ನಮಗೆ ಹೊರಗೂ ಕೆಲಸ ಸಿಗುತ್ತಿಲ್ಲ ಎಂದು ಅಭ್ಯರ್ಥಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
FDA, SDA ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಯಾವಾಗ ಕೊಡುತ್ತೀರಾ: AAP ಪ್ರಶ್ನೆ

2017 ರಲ್ಲಿ ನಡೆದ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಯಲ್ಲಿ 1812 ಮಂದಿ ಉತ್ತೀರ್ಣರಾಗಿದ್ದು, ಇದರಲ್ಲಿ ಒಂದಷ್ಟು ಮಂದಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ಒಂದಷ್ಟು ಮಂದಿಯನ್ನು ಕಳೆದ 3 ವರ್ಷಗಳಿಂದ ಬೀದಿ ಪಾಲು ಮಾಡಲಾಗಿದೆ ಈ ಕೂಡಲೇ ಮಿಕ್ಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಬೀಡಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಆಗ್ರಹಿಸಿದ್ದಾರೆ.

ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಶರತ್ ಖಾದ್ರಿ, 60 ಲಕ್ಷ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಎಲ್ಲಾ ಕಡೆ ಹೇಳಿಕೊಂಡು ತಿರುಗುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ, ಮೊದಲು 1800 ಮಂದಿಗೆ ಕೆಲಸ ಕೊಡಿ ಎಂದು ವ್ಯಂಗ್ಯವಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆದಿದ್ದು, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹತ್ತಿರ ಇರುವ ಅಭ್ಯರ್ಥಿಗಳಿಗೆ ಮಾತ್ರ ಕೆಲಸ ನೀಡಲಾಗಿದೆ, ಪ್ರಮಾಣಿಕ ಅಭ್ಯರ್ಥಿಗಳನ್ನು ಹಣಿಯಲಾಗುತ್ತಿದೆ ಎಂದಿದ್ದಾರೆ.

ಮಾಜಿ ಸೈನಿಕ ಹಾಗೂ ನೊಂದ ಅಭ್ಯರ್ಥಿಗಳ ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ಕೊವಿಡ್-19 ಕಾರಣ ಮುಂದಿಟ್ಟುಕೊಂಡು ಹಣಕಾಸು ಇಲಾಖೆ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಂತೆ ಇಲಾಖೆಗಳಿಗೆ ಆದೇಶ ನೀಡಿದೆ ಎಂದು ಹೇಳಲಾಗುತ್ತಿದೆ ಆದರೆ ಕೆಲವು ಇಲಾಖೆಗಳು ಅಭ್ಯರ್ಥಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿವೆ ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದ್ದಾರೆ.

ಈಗಾಗಲೇ ನಮ್ಮ ಜೊತೆಗಾರರು ಕೆಲಸ ಮಾಡುತ್ತಿದ್ದಾರೆ, ಇದ್ದ ಕೆಲಸವನ್ನು ಬಿಟ್ಟು ಉಪವಾಸ ಮಲಗುವಂತಾಗಿದೆ. ನಮ್ಮ ಸಹಪಾಠಿಗಳು ಈಗಾಗಲೇ ಸೇವಾ ಹಿರಿತನದಲ್ಲಿ ಮುಂದಿದ್ದು ನಮಗೆ ಅನ್ಯಾಯ ಎಸಗಲಾಗಿದೆ ಹಾಗೂ ಈ ಅನ್ಯಾಯದ ವಿರುದ್ದ ದನಿ ಎತ್ತದಂತೆ ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಈ ಅನ್ಯಾಯವನ್ನು ಖಂಡಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಪೋಲೀಸ್ ಹಾಗೂ ಗೃಹ ಇಲಾಖೆಗೆ ಅನುಮತಿ ಕೇಳಿದರೂ ನೀಡುತ್ತಿಲ್ಲ. ತಮಗೆ ಬೇಕಾದ ಇಲಾಖೆಗಳಿಗೆ ಬೇಕಾದಷ್ಟು ದುಡ್ಡು ಬಿಡುಗಡೆ ಮಾಡುತ್ತಿರುವ ಮುಖ್ಯಮಂತ್ರಿಗಳಿಗೆ ಬಡ ಅಭ್ಯರ್ಥಿಗಳ ಕೂಗು ಕೇಳಿಸುತ್ತಿಲ್ಲವೇ ಎಂದು ಕೇಳಿದ್ದಾರೆ.

ಮತ್ತೋರ್ವ ಅಭ್ಯರ್ಥಿ ಆಶಾ ಮಾತನಾಡಿ, ನಮ್ಮ ಮೂಲ ದಾಖಲೆಗಳನ್ನು ಇಲಾಖೆಗಳಿಗೆ ಕೊಟ್ಟಿದ್ದು ಈ ದಾಖಲಾತಿಗಳು ಇಲ್ಲದೆ ನಮಗೆ ಹೊರಗೂ ಕೆಲಸ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಕೆಪಿಎಸ್‌ಸಿಯಿಂದ 01-09-2017 ರಂದು 507 ಎಫ್‌ಡಿಎ ಹಾಗು 551 ಎಸ್‌ಡಿಎ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. 24-11-2017ರಂದು 454 ಎಫ್‌ಡಿಎ, 300 ಎಸ್‌ಡಿಎ ಹೆಚ್ಚುವರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ ಒಟ್ಟಾರೆ 1812 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು.11.03.2018ರಿಂದ 25.02.2018ರವರೆಗೆ ಸದರಿ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. 2019 ಫೆಬ್ರವರಿಯಿಂದ 2019 ಏಪ್ರಿಲ್‌ವರೆಗೆ 1:5 ಆಧಾರದಲ್ಲಿ ದಾಖಲಾತಿ ಪರಿಶೀಲನೆ ನಡೆಸಿ, ನಂತರ 2020 ಜನವರಿಯಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕೆಪಿಎಸ್‌ಸಿಯಿಂದ ಬಿಡುಗಡೆ ಗೊಳಿಸಲಾಗಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com