ನಾವು ಹಿಂದೂಗಳು, ಕನ್ನಡಿಗರ ಓಟು ಹೋಗುತ್ತದೆಂಬ ಭಯವಿಲ್ಲ; ಬಸನಗೌಡ ಯತ್ನಾಳ್

ಕನ್ನಡಿಗರ ಮತ ನಮ್ಮಿಂದ ಹೋಗುತ್ತವೆ ಅನ್ನುವ ಭಯವಿಲ್ಲ, ನಾವು ಮೊದಲು ಹಿಂದೂಗಳು, ಶಿವಾಜಿ ಮಹರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಅನುಕೂಲ ಮಾಡಬೇಕೆಂದು ನಾನು ಆಗ್ರಹಿಸುತ್ತೇನೆ
ನಾವು ಹಿಂದೂಗಳು, ಕನ್ನಡಿಗರ ಓಟು ಹೋಗುತ್ತದೆಂಬ ಭಯವಿಲ್ಲ; ಬಸನಗೌಡ ಯತ್ನಾಳ್

ನಾವು ಹಿಂದೂಗಳು, ಕನ್ನಡಿಗರ ಓಟು ಕಳೆದುಕೊಳ್ಳುತ್ತೇವೆ ಎಂಬ ಭಯ ನನಗಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿಯ ಅಖಂಡ ಮಹಾರಾಷ್ಟ್ರ ಹೇಳಿಕೆ, ಕರ್ನಾಟಕ ರಾಜ್ಯ ಸರ್ಕಾರದ ಮರಾಠ ಅಭಿವೃದ್ಧಿ ಪ್ರಾಧಿಕಾರದ ಪ್ರಸ್ತಾವಗಳು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಮರಾಠಿ ವಿರೋಧಿ ಪ್ರತಿಭಟನೆಗಳು ವ್ಯಕ್ತವಾಗುತ್ತಿದೆ. ಹಲವಾರು ಕನ್ನಡ ಪರ, ರೈತ ಪರ ಸಂಘಟನೆಗಳು ಡಿಸೆಂಬರ್‌ 5 ರಂದು ಪ್ರತಿಭಟನೆಗೆ ಕರೆ ನೀಡಿದ್ದವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತು ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್, ರೋಲ್ಕಾಲ್‌ ಹೋರಾಟಗಾರರಿಗೆ ಭಯಪಡುವುದಿಲ್ಲ ನಾವು, ಕನ್ನಡಿಗರ ಮತ ನಮ್ಮಿಂದ ಹೋಗುತ್ತವೆ ಅನ್ನುವ ಭಯವಿಲ್ಲ, ನಾವು ಮೊದಲು ಹಿಂದೂಗಳು, ಶಿವಾಜಿ ಮಹರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಅನುಕೂಲ ಮಾಡಬೇಕೆಂದು ನಾನು ಆಗ್ರಹಿಸುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಯತ್ನಾಳ್‌ ಈ ಹೇಳಿಕೆಗೆ ಕನ್ನಡಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರೇನು ಹಿಂದೂಗಳಲ್ಲವೇ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. #ಮರಾಠ_ಅಭಿವೃದ್ಧಿ_ಪ್ರಾಧಿಕಾರ_ನಿಲ್ಲಿಸಿ #StopMarathaDevelopmentAuthority ಎಂಬ ಹ್ಯಾಷ್‌ ಟ್ಯಾಗ್‌ ಮೂಲಕ ಕನ್ನಡಿಗರು ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಟ್ವಿಟರ್‌ ಅಭಿಯಾನ ಮಾಡುತ್ತಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com