ವ್ಯಾಪಕ ಖಂಡನೆಗೆ ಒಳಗಾಗುತ್ತಿರುವ ʼವೀರಶೈವ ಲಿಂಗಾಯಿತ ಅಭಿವೃದ್ದಿ ನಿಗಮʼ

ಜಾತಿಯಾಧಾರಿತ ನಿಗಮ ರಚನೆಯ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವ್ಯಂಗ್ಯ, ಟೀಕೆಗೆ ಯಡಿಯೂರಪ್ಪ ಸರ್ಕಾರದ ನೂತನ ನಿರ್ಧಾರ ಗುರಿಯಾಗಿದೆ
ವ್ಯಾಪಕ ಖಂಡನೆಗೆ ಒಳಗಾಗುತ್ತಿರುವ ʼವೀರಶೈವ ಲಿಂಗಾಯಿತ ಅಭಿವೃದ್ದಿ ನಿಗಮʼ

ವೀರಶೈವ ಲಿಂಗಾಯಿತ ಅಭಿವೃದ್ದಿ ನಿಗಮ ರಚನೆಗೆ ಮುಂದಾಗಿರುವ ಬಿ. ಎಸ್ ಯಡಿಯೂರಪ್ಪ ರವರ ನಿರ್ಧಾರದ ವಿರುದ್ಧ ಹಿಂದುಳಿದ ವರ್ಗಗಳ ಸಂಘಟನೆಗಳಿಂದ, ಸಾಮಾಜಿಕ ಜಾಲತಾಣ ಬಳಕೆದಾರರಿಂದ ವ್ಯಾಪಕ ಖಂಡನೆ ಎದುರಾಗಿದೆ.

ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಜನರಿಗಿಂತಲೂ ಅತಿ ಹೆಚ್ಚು ಹಿಂದೆ ಉಳಿದಿರುವ ಸಮುದಾಯಗಳೂ ಇವೆ. ಅಂತಹ ಸಮುದಾಯಗಳನ್ನು ಗುರುತಿಸಿ ಅವರಿಗೆ ಅಭಿವೃದ್ಧಿ ನಿಗಮ ರಚನೆ ಮೀಸಲಾತಿ ಹಲವಾರು ಮೂಲ ಸೌಕರ್ಯಗಳನ್ನು ಒದಗಿಸದೆ ಮೇಲ್ವರ್ಗದ ಜನರ ಓಲೈಕೆಗೆ ಮುಂದಾಗುತ್ತಿರುವುದು ರಾಜ್ಯದ ಹಿಂದುಳಿದ ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈಗಾಗಲೇ ಒಕ್ಕಲಿಗ ಸಮುದಾಯದ ಜನರು ನಮಗೂ ಅಭಿವೃದ್ದಿ ನಿಗಮ ರಚನೆ ಮಾಡಬೇಕು ಎಂದು ರಾಜ್ಯದಲ್ಲಿ ಬಿ .ಎಸ್ ಯಡಿಯೂರಪ್ಪ ರಿಗೆ ಒತ್ತಡವನ್ನು ಹೇರುತ್ತಿದ್ದಾರೆ. ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಸಹ ಯಡಿಯೂರಪ್ಪರ ನಡೆಗೆ ವಿರೋಧ ವ್ಯಕ್ತಪಡಿಸಿದ್ದು, ಜಾತಿಗೊಂದು ಅಭಿವದ್ಧಿ ನಿಗಮ ಮಾಡಿದರೆ ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಕುರುಬ ಸಮುದಾಯ, ಹಾಲುಮತ ಕುರುಬ ಸಮುದಾಯ ಹೀಗೆ ಹಲವಾರು ಹಿಂದುಳಿದ ವರ್ಗಗಳ ಸಮುದಾಯದ ಜನರು ನಮಗೂ ಅಭಿವೃದ್ದಿ ನಿಗಮ ರಚನೆ ಮಾಡಬೇಕು ಬಿಗಿಪಟ್ಟು ಹಿಡಿದಿವೆ. ಹಿಂದುಳಿದ ರಾಜ್ಯದ ಹಿಂದುಳಿದ ಜನರಿಗೆ ಯಡಿಯೂರಪ್ಪ ಯಾವ ರೀತಿ ಉತ್ತರಿಸಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಯಡಿಯೂರಪ್ಪರವರು ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದು ಆ ಜನಾಂಗದ ವರ್ಗದ ಜನರಿಗೆ ಅಭಿವೃದ್ಧಿ ನಿಗಮ ರಚನೆ ಮಾಡಿದ್ದಾರೆ ರಾಜ್ಯದಲ್ಲಿ ಎಲ್ಲಾ ಸಮುದಾಯದವರು ಇವರಿಗೆ ಮತ ಹಾಕಿ ಈ ರಾಜ್ಯದ ಮುಖ್ಯಮಂತ್ರಿ ಮಾಡಿಲ್ಲವೇ ? ಇದನ್ನು ಅರ್ಥ ಮಾಡಿಕೊಳ್ಳದೆ ಕೇವಲ ಒಂದು ಸಮುದಾಯದ ಜನರ ಒಲೈಕೆಗಾಗಿ ಮುಖ್ಯಮಂತ್ರಿಗಳು ಇಂತಹ ನಿರ್ಧಾರ ಮಾಡಿರುವುದು ರಾಜ್ಯದ ಹಿಂದುಳಿದ ಜನರಿಗೆ ದೊಡ್ಡ ಮೋಸವನ್ನು ಎಸಗಿದ್ದಾರೆ ಎಂದು ಹಿಂದುಳಿದ ಸಮುದಾಯದ ಸಂಘಟನೆಗಳ ಮುಖ್ಯ ಆರೋಪ.

ಈ ಹಿಂದೆಯೂ ಯಡಿಯೂರಪ್ಪ ರಾಜ್ಯದ ಮಠ ಮಾನ್ಯಗಳಿಗೆ ಸಾಕಷ್ಟು ಅನುದಾನ ಹರಿಸಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಯಡಿಯೂರಪ್ಪರಿಗೆ ಮಠಗಳನ್ನು ಬಿಟ್ಟು ಬೇರೆ ವರ್ಗದ ಜನರು ಕಣ್ಣಿಗೆ ಕಾಣುತ್ತಿಲ್ಲ ಎಂಬ ಆರೋಪದ ಕೂಗುಗಳು ಸಾಕಷ್ಟು ಕೇಳಿಬಂದಿದ್ದವು. ಈಗಲೂ ಕೂಡಾ ಅಂತಹ ತಪ್ಪುಗಳನ್ನೇ ಬಿ.ಎಸ್.ಯಡಿಯೂರಪ್ಪರವರು ಮಾಡುತ್ತಿರುವುದು ಜಾತಿಯ ರಾಜಕಾರಣವೆಂಬ ಆಪಾದನೆಗಳು ಕೇಳಿಬರುತ್ತಿವೆ .

ಈಗಾಗಲೇ ಜಾತಿಗೊಂದು ನಿಗಮ ರಚನೆಯ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವಾರು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವ್ಯಂಗ್ಯ, ಟೀಕೆಗೆ ಯಡಿಯೂರಪ್ಪ ಸರ್ಕಾರದ ನೂತನ ನಿರ್ಧಾರ ಗುರಿಯಾಗಿದೆ.

ಜಾತಿಯಾಧಾರಿತ ನಿಗಮಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ಕೆಲವು ಅನಿಸಿಕೆಗಳು

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com