ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್‌ ಸಂಪತ್‌ ರಾಜ್‌ ಬಂಧನ

ಗಲಭೆಯ ವೇಳೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್‌ ಠಾಣೆಗಳನ್ನೂ ಕೂಡಾ ಸುಟ್ಟು ಹಾಕಲಾಗಿತ್ತು. ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರೆ, ಗಲಭೆಯಿಂದ ಹೊಟ್ಟೆಯ ಭಾಗಕ್ಕೆ ಗಾಯವಾಗಿ ಒಬ್ಬರು ಸಾವನ್ನಪ್ಪಿದ್ದರು.
ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್‌ ಸಂಪತ್‌ ರಾಜ್‌ ಬಂಧನ

ದೇವರ ಜೀವನಹಳ್ಳಿ (ಡಿಜೆ ಹಳ್ಳಿ) ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಬೆಂಗಳೂರಿನ ಮಾಜಿ ಮೇಯರ್‌ ಸಂಪತ್‌ ರಾಜ್‌ ಅವರು ಕೊನೆಗೂ ಪೊಲೀಸ್‌ ಬಲೆಗೆ ಬಿದ್ದಿದ್ದಾರೆ. ಮಂಗಳವಾರ ಮುಂಜಾನೆ ಈ ವಿಚಾರವನ್ನು ಪೊಲೀಸ್‌ ಇಲಾಖೆಯ ಮೂಲಗಳು ದೃಢಪಡಿಸಿವೆ.

ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್‌ ಸಂಪತ್‌ ರಾಜ್‌ ಬಂಧನ
ಡಿಜೆ ಹಳ್ಳಿ ಸಿದ್ದರಾಮಯ್ಯ ಭೇಟಿ: ಅಪರಾಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಆಗ್ರಹ
ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್‌ ಸಂಪತ್‌ ರಾಜ್‌ ಬಂಧನ
DJ ಹಳ್ಳಿ: ಹಿಂದೂ-ಮುಸ್ಲಿಂ ಗಲಭೆಯಲ್ಲ, ಎರಡು ನಾಯಕತ್ವಕ್ಕಾಗಿ ನಡೆದ ಗಲಭೆ- ನಳಿನ್ ಕುಮಾರ್ ಕಟಿಲ್

ಡಿಜೆ ಹಳ್ಳಿ ಮುನಿಸಿಪಾಲ್‌ ವಾರ್ಡ್‌ನ ಕಾರ್ಪೊರೇಟರ್‌ ಆಗಿರುವ ಸಂಪತ್‌ ರಾಜ್‌ ಅವರು ಈ ಹಿಂದೆ ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ ಎಂಬ ಕಾರಣ ನೀಡಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಆಸ್ಪತ್ರೆಯಿಂದ ಪರಾರಿಯಾಗಿ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡಿಕೊಂಡಿದ್ದರು. ಇವರಿಗೆ ಆಸ್ಪತ್ರೆಯಿಂದ ಪರಾರಿಯಾಗಲು ಸಹಾಯ ಮಾಡಿದ್ದಕ್ಕಾಗಿ ಹಾಗೂ ಪರಾರಿಯಾದ ನಂತರ ಆಶ್ರಯ ನೀಡಿದ ಹಿನ್ನೆಲೆಯಲ್ಲಿ ರಿಯಾಜುದ್ದೀನ್‌ ಎಂಬಾತನನ್ನು ಕೂಡಾ ಪೊಲೀಸರು ಈ ಹಿಂದೆ ಬಂಧಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆಗಸ್ಟ್‌ 11ರಂದು ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರ ಪುಲಿಕೇಶಿನಗರದಲ್ಲಿರುವ ಮನೆಗೆ ಬೆಂಕಿ ಹಚ್ಚಿ ನಗರವೇ ಬೆಚ್ಚಿ ಬೀಳುವಂತಹ ಗಲಭೆ ಸೃಷ್ಟಿಸಿದ ಕಾರಣಕ್ಕೆ ಅವರನ್ನು ಪೊಲೀಸರು ಹುಡುಕುತ್ತಿದ್ದರು. ಶಾಸಕರ ಸಂಬಂಧಿ ನವೀನ್‌ ಎಂಬಾರ ಇಸ್ಲಾಂ ಧರ್ಮವನ್ನು ಅವಹೇಳನ ಮಾಡಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ ಕಾರಣಕ್ಕೆ ಈ ಗಲಭೆ ಉಂಟಾಗಿತ್ತು ಎಂದು ಮೊದಲು ಬಿಂಬಿಸಲಾಗಿತ್ತು.

ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್‌ ಸಂಪತ್‌ ರಾಜ್‌ ಬಂಧನ
ಡಿಜೆ ಹಳ್ಳಿ ಪ್ರಕರಣ: ಬಿಜೆಪಿ–ಕಾಂಗ್ರೆಸ್‌ಗೆ ಎಚ್.ಡಿ ಕುಮಾರಸ್ವಾಮಿ ಬಹಿರಂಗ ಪತ್ರ
ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್‌ ಸಂಪತ್‌ ರಾಜ್‌ ಬಂಧನ
ಬೆಂಗಳೂರು ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಪರಾರಿ -ಪೊಲೀಸ್

ಗಲಭೆಯ ವೇಳೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್‌ ಠಾಣೆಗಳನ್ನೂ ಕೂಡಾ ಸುಟ್ಟು ಹಾಕಲಾಗಿತ್ತು. ಈ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರೆ, ಗಲಭೆಯಿಂದ ಹೊಟ್ಟೆಯ ಭಾಗಕ್ಕೆ ಗಾಯವಾಗಿ ಒಬ್ಬರು ಸಾವನ್ನಪ್ಪಿದ್ದರು.

ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್‌ ಸಂಪತ್‌ ರಾಜ್‌ ಬಂಧನ
ಸದನದಲ್ಲಿ ಕಾವೇರಿದ ಬೆಂಗಳೂರು ಗಲಭೆ ಚರ್ಚೆ

ತನಿಖೆಯ ನಂತರ ಕಾಂಗ್ರೆಸ್‌ ಮುಖಂಡರ ನಾಯಕತ್ವ ವಿಚಾರ ಗಲಭೆಯ ಮೂಲ ಕಾರಣ ಎಂದು ಸ್ಪಷ್ಟವಾಗಿತ್ತು. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳು ತಮ್ಮ ಪಕ್ಷದ ವತಿಯಿಂದ ಸತ್ಯ ಶೋಧನಾ ವರದಿಯನ್ನು ತರಿಸಿಕೊಂಡು ಪರಸ್ಪರ ಕಚ್ಚಾಡಿಕೊಂಡಿದ್ದವು.

ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್‌ ಸಂಪತ್‌ ರಾಜ್‌ ಬಂಧನ
NIAಗೆ ವರ್ಗವಾಗುತ್ತಾ ಬೆಂಗಳೂರು ಗಲಭೆ ಪ್ರಕರಣ..?
ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್‌ ಸಂಪತ್‌ ರಾಜ್‌ ಬಂಧನ
ಬೆಂಗಳೂರು ಗಲಭೆ: ದಲಿತ vs ಮುಸ್ಲಿಂ ಆಯಾಮ ನೀಡಿದ ಬಿಎಲ್ ಸಂತೋಷ್‌ಗೆ ಜ಼ಮೀರ್ ಕ್ಲಾಸ್

ಗಲಭೆ ನಡೆಸಲು ಸಂಚು ರೂಪಿಸಿ, ಶಾಸಕರನ್ನು ರಾಜಕೀಯವಾಗಿ ಮುಗಿಸಲು ಪಿತೂರಿ ನಡೆಸಿದ್ದಾರೆ ಎಂದು ಸಂಪತ್‌ ರಾಜ್‌ ಅವರ ಮೇಲೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಆರೋಪ ಹೊರಿಸಿದ್ದಾರೆ.

ಇನ್ನು ಈ ಪ್ರಕರಣದಿಂದ ಪಾರಾಗಲು ಸಂಪತ್‌ ರಾಜ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಪಕ್ಷವನ್ನು ಸೇರುವ ನಿರ್ಧಾರವನ್ನು ಮಾಡಿದ್ದಾರೆ ಎಂಬ ಕುರಿತು ಕೂಡಾ ಸುದ್ದಿಗಳು ಪ್ರಸಾರವಾಗಿದ್ದವು.

ಡಿಜೆ ಹಳ್ಳಿ ಗಲಭೆ: ಮಾಜಿ ಮೇಯರ್‌ ಸಂಪತ್‌ ರಾಜ್‌ ಬಂಧನ
ಬೆಂಗಳೂರು ಗಲಭೆ ಮತ್ತು ಉತ್ತರವಿಲ್ಲದ ಸಾಲುಸಾಲು ಪ್ರಶ್ನೆಗಳು!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com