ನೌಕರರಿಗೆ ಸಂಬಳ ಕೊಡಲು ಸಾರಿಗೆ ಇಲಾಖೆಯಲ್ಲಿ ದುಡ್ಡಿಲ್ಲ – ಲಕ್ಷ್ಮಣ ಸವದಿ

ಲಾಕ್‌ಡೌನ್‌ ವೇಳೆಯಲ್ಲೂ ಎರಡು ತಿಂಗಳ ಸಂಬಳ ಕೊಟ್ಟಿದ್ದೇವೆ. ಶೇ.25ರಷ್ಟನ್ನು ಸಾರಿಗೆ ನಿಗಮ ಮತ್ತು ಶೇ. 75ರಷ್ಟು ಸರ್ಕಾರದಿಂದ ಹೊಂದಿಸಿ ಆ ಬಳಿಕ ಮತ್ತೆ 4 ತಿಂಗಳ ವೇತನವನ್ನು ಕೊಟ್ಟಿದ್ದೇವೆ
ನೌಕರರಿಗೆ ಸಂಬಳ ಕೊಡಲು ಸಾರಿಗೆ ಇಲಾಖೆಯಲ್ಲಿ ದುಡ್ಡಿಲ್ಲ – ಲಕ್ಷ್ಮಣ ಸವದಿ

ಸಾರಿಗೆ ಇಲಾಖೆ ನೌಕರರಿಗೆ ಸಂಬಳ ಕೊಡಲು ಬಳಿ ಸಾಕಷ್ಟು ದುಡ್ಡಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿಯೂ ಆಗಿರುವ ಲಕ್ಷ್ಮಣ್‌ ಸವದಿ, ಸಾರಿಗೆ ಇಲಾಖೆ ನೌಕರರಿಗೆ ಸಂಬಳ ಕೊಡಲು ಸದ್ಯ ದುಡ್ಡಿಲ್ಲ, ಆರ್ಥಿಕ ಇಲಾಖೆಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

‘ಇಲಾಖೆಯಲ್ಲಿ 1.30 ಲಕ್ಷ ಸಿಬ್ಬಂದಿ ಇದ್ದಾರೆ. ಅವರಿಗೆ ವೇತನಕ್ಕಾಗಿಯೇ ತಿಂಗಳಿಗೆ ₹ 325 ಕೋಟಿ ಬೇಕಾಗುತ್ತದೆ. ಕೋವಿಡ್–19 ಹಾಗೂ ಲಾಕ್‌ಡೌನ್‌ನಿಂದಾಗಿ ಸಾರಿಗೆ ಇಲಾಖೆಗೆ ಹೆಚ್ಚಿನ ನಷ್ಟವಾಗಿದೆ. ಸಾರಿಗೆ ಇಲಾಖೆ ನಷ್ಟದಲ್ಲಿದೆ. ಲಾಕ್‌ಡೌನ್‌ ವೇಳೆಯಲ್ಲೂ ಎರಡು ತಿಂಗಳ ಸಂಬಳ ಕೊಡಲಾಗಿದೆ. ಶೇ.25ರಷ್ಟನ್ನು ಸಾರಿಗೆ ನಿಗಮ ಮತ್ತು ಶೇ. 75ರಷ್ಟು ಸರ್ಕಾರದಿಂದ ಹೊಂದಿಸಿ ಆ ಬಳಿಕ ಮತ್ತೆ 4 ತಿಂಗಳ ವೇತನವನ್ನು ಕೊಟ್ಟಿದ್ದೇವೆ’ ಎಂದು ಹೇಳಿದ್ದಾರೆ.

‘ಇನ್ನೂ ಕರೋನಾ ಆತಂಕ ನಿವಾರಣೆಯಾಗದೆ ಇರುವುದರಿಂದ, ಸಾರಿಗೆ ಬಸ್‌ಗಳಲ್ಲಿ ಸಂಚರಿಸಲು ನಿರೀಕ್ಷಿಸಿದಷ್ಟು ಪ್ರಯಾಣಿಕರು ಬರುತ್ತಿಲ್ಲ. ಇದರಿಂದಾಗಿ, ಈಗ ಸಿಗುತ್ತಿರುವ ವರಮಾನವು ಬಸ್‌ಗಳ ಇಂಧನಕ್ಕೆ ಮಾತ್ರವೇ ಸಾಕಾಗುತ್ತಿದೆ. ಹೀಗಾಗಿ ವೇತನ ಕೊಡಲು ಇಲಾಖೆ ಬಳಿ ಹಣವಿಲ್ಲ. ಆದ್ದರಿಂದ ನೌಕರರಿಗೆ ಸಂಬಳ ಬಿಡುಗಡೆ ಆಗುವುದರಲ್ಲಿ ಸಮಸ್ಯೆ ಆಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಆರ್ಥಿಕ ನೆರವು ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದೆವು. ಆದರೆ, ಪ್ರಸ್ತಾವ ತಿರಸ್ಕೃತವಾಗಿದೆ. ಹಣ ಕೊಡುವುದು ಕಷ್ಟವಿದೆ ಎಂದು ಆರ್ಥಿಕ ಇಲಾಖೆಯೂ ಹೇಳಿದೆ. ಹಾಗಾಗಿ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಲಿದ್ದು, ಕೆಲವೇ ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ಭರವಸೆ ಇದೆ ಎಂದು ಲಕ್ಷ್ಮಣ್‌ ಸವದಿ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com