ಸಂಪುಟ ವಿಸ್ತರಣೆಯೋ, ಪುನರ್‌ರಚನೆಯೋ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು - BSY

ಉಪಚುನಾವಣೆ ಫಲಿತಾಂಶ ಬಳಿಕ ಸಂಪುಟ ವಿಸ್ತರಣೆಯಾಗುವುದೆಂದು ಯಡಿಯೂರಪ್ಪ ಹೇಳಿದ್ದರಿಂದ, ನವೆಂಬರ್‌ 10 ರ ಬಳಿಕ ರಾಜ್ಯ ಬಿಜೆಪಿಯೊಳಗಿನ ರಾಜಕೀಯ ಚಟುವಟಿಕೆಗಳು ತೀವ್ರ ಗರಿಗೆರಿದೆ
ಸಂಪುಟ ವಿಸ್ತರಣೆಯೋ, ಪುನರ್‌ರಚನೆಯೋ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು - BSY

ಸಂಪುಟ ವಿಸ್ತರಣೆ ನಡೆಸಬೇಕೆ ಬೇಡವೇ ಎಂದು ಕೇಂದ್ರ ನಾಯಕರ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಯುತ್ತಿದ್ದು, ಬಿ ಎಸ್‌ ಯಡಿಯೂರಪ್ಪರಿಗೆ ಸವಾಲಾಗುತ್ತಿದೆ. ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆದ ಬಳಿಕ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದೆಂದು ಮುಖ್ಯಮಂತ್ರಿ ಈ ಹಿಂದೆ ಹೇಳಿದ್ದರು. ಇದೀಗ ಎರಡೂ ಕ್ಷೇತ್ರಗಳಲ್ಲಿ ಚುನಾವಣೆ ಮುಗಿದು, ಫಲಿತಾಂಶ ಬಂದಿದ್ದು, ಎರಡರಲ್ಲೂ ಬಿಜೆಪಿ ಜಯಭೇರಿ ಬಾರಿಸಿದ್ದು, ಸಚಿವ ಸ್ಥಾನ ಆಕಾಂಕ್ಷಿತರು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.

ಸಂಪುಟ ವಿಸ್ತರಣೆಯೋ, ಪುನರ್‌ರಚನೆಯೋ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು - BSY
ದೀಪಾವಳಿಗೆ ಸಂಪುಟ ವಿಸ್ತರಣೆಯ ಸಮಾಧಾನವೊ, ಪುನರ್ ರಚನೆಯ ಸಂಭ್ರಮವೊ?

ಹಾಗಾಗಿ ಸಚಿವ ಸಂಪುಟದ ವಿಸ್ತರಣೆಯ ಕುರಿತು ಮಾತನಾಡಿದ ಯಡಿಯೂರಪ್ಪ, ಸಂಪುಟ ವಿಸ್ತರಣೆ ಮಾಡಬೇಕೆ ಅಥವಾ ಮಾಡಬಾರದೇ ಎಂದು ಹೈಕಮಾಮಡ್‌ ನಾಯಕರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದಿದ್ದಾರೆ.

ಸದ್ಯ ಕೇಂದ್ರ ನಾಯಕರು ಬಿಹಾರ ಸರ್ಕಾರ ರಚನೆಯಲ್ಲಿ ನಿರತಾರಗಿದ್ದು, ಬಿಹಾರ ಸರ್ಕಾರ ರಚನೆ ಮುಗಿದ ತರುವಾಯ ನಾನು ಭೇಟಿಯಾಗಿ ಕರ್ನಾಟಕ ಮಂತ್ರಿಮಂಡಲದ ಬಗ್ಗೆ ಚರ್ಚಿಸುತ್ತೇನೆ, ಅದಕ್ಕಾಗಿ ಮತ್ತೆ ದೆಹಲಿಗೆ ಪ್ರವಾಸ ನಡೆಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸಂಪುಟ ವಿಸ್ತರಣೆಯೋ, ಪುನರ್‌ರಚನೆಯೋ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು - BSY
ಉಪಚುನಾವಣೆ ಬಳಿಕ ಮಂತ್ರಿಮಂಡಲ ವಿಸ್ತರಣೆ - ಬಿ ಎಸ್ ಯಡಿಯೂರಪ್ಪ ಸ್ಪಷ್ಟನೆ

"ನಾನು ಕೇಂದ್ರ ನಾಯಕತ್ವವನ್ನು ಸಂಪರ್ಕಿಸಲು ದೆಹಲಿಗೆ ಹೋಗಬೇಕಾಗಿದೆ, ಆದರೆ ಬಿಹಾರ ಮುಖ್ಯಮಂತ್ರಿ ಆಯ್ಕೆಯಾದ ಬಳಿಕವೇ ಅವರನ್ನು ಭೇಟಿಯಾಗಲು ಸಾಧ್ಯವಾಗುತ್ತದೆ ಎಂದು ತೋರುತ್ತಿದೆ." ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕ್ಯಾಬಿನೆಟ್ ವಿಸ್ತರಣೆಯಾಗುತ್ತದೆಯೇ ಅಥವಾ ಸಂಪುಟ ಪುನರ್ರಚನೆಯಾಗುತ್ತದೆಯೇ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಸಂಪುಟ ವಿಸ್ತರಣೆಯೋ, ಪುನರ್‌ರಚನೆಯೋ ನಿರ್ಧಾರ ಹೈಕಮಾಂಡ್‌ಗೆ ನಿರ್ಧಾರದ ಮೇಲೆ ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ.

ಸಂಪುಟ ವಿಸ್ತರಣೆಯೋ, ಪುನರ್‌ರಚನೆಯೋ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು - BSY
ವರಿಷ್ಠರು ಓಕೆ ಎಂದರೂ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದೇಕೆ?

ಉಪಚುನಾವಣೆ ಫಲಿತಾಂಶ ಬಳಿಕ ಸಂಪುಟ ವಿಸ್ತರಣೆಯಾಗುವುದೆಂದು ಯಡಿಯೂರಪ್ಪ ಹೇಳಿದ್ದರಿಂದ, ನವೆಂಬರ್‌ 10 ರ ಬಳಿಕ ರಾಜ್ಯ ಬಿಜೆಪಿಯೊಳಗಿನ ರಾಜಕೀಯ ಚಟುವಟಿಕೆಗಳು ತೀವ್ರ ಗರಿಗೆರಿದ್ದವು. ಕಾಂಗ್ರೆಸ್‌ನಿಂದ ಬಿಜೆಪಿ ಬಂದು ಗೆದ್ದ ಮುನಿರತ್ನ ಕೂಡಾ ಸಚಿವ ಸ್ಥಾನ ಆಕಾಂಕ್ಷಿಯೆಂದು ಹೇಳಲಾಗುತ್ತಿದ್ದು, ಸಚಿವ ಸ್ಥಾನಕ್ಕೆ ಪೈಪೋಟಿ ಇನ್ನಷ್ಟು ಹೆಚ್ಚಿದೆ.

ಬಿಜೆಪಿ ಹಿರಿಯ ನಾಯಕರಾದ ಉಮೇಶ್‌ ಕತ್ತಿ ಮೊದಲಾದವರು ಸಂಪುಟ ಸೇರ್ಪಡೆಗೊಳ್ಳುವ ಅವಕಾಶಕ್ಕಾಗಿ ತೀವ್ರವಾಗಿ ಕಾಯುತ್ತಿದ್ದರೆ, ಸರ್ಕಾರ ರಚಿಸಲು ಸಹಾಯ ಮಾಡಿದ ಮಾಜಿ ಕಾಂಗ್ರೆಸ್‌ ಶಾಸಕರೂ ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ. ಇದು ಯಡಿಯೂರಪ್ಪರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

ಸಂಪುಟ ವಿಸ್ತರಣೆಯೋ, ಪುನರ್‌ರಚನೆಯೋ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು - BSY
ಸಂಪುಟ ಸಂಕಟ- CM BSY ಬೆಂಬಲಕ್ಕೆ ನಿಂತ ವರಿಷ್ಠರು 

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com