ನೆರೆ ಪರಿಹಾರ: ಕೇಂದ್ರದಿಂದ ರಾಜ್ಯಕ್ಕೆ 577 ಕೋಟಿ ನೆರವು

ನೈಋತ್ಯ ಮಾನ್ಸೂನ್ ಸಮಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ರಾಜ್ಯಗಳಿಗೆ ಕೇಂದ್ರವು ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿದೆ.
ನೆರೆ ಪರಿಹಾರ: ಕೇಂದ್ರದಿಂದ ರಾಜ್ಯಕ್ಕೆ 577 ಕೋಟಿ ನೆರವು

ಈ ವರ್ಷ ಚಂಡಮಾರುತ, ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಅಡಿಯಲ್ಲಿ 4,381.88 ಕೋಟಿ ರೂ. ಹೆಚ್ಚುವರಿ ನೀಡಲು ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ನೇತೃತ್ವದ ಸಮಿತಿ ಅನುಮೋದನೆ ನೀಡಿದೆ.

ನೆರೆ ಪರಿಹಾರ: ಕೇಂದ್ರದಿಂದ ರಾಜ್ಯಕ್ಕೆ 577 ಕೋಟಿ ನೆರವು
ಪ್ರವಾಹ ಪರಿಹಾರ ನೀಡದ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಅಂಫಾನ್‌ ಚಂಡಮಾರುತದಿಂದ ತತ್ತರಿಸಿದ ರಾಜ್ಯಗಳಿಗೆ 2707 ಕೋಟಿ ರುಪಾಯಿಗಳನ್ನು ಮಂಜೂರು ಮಾಡಲಾಗಿದೆ. ಒಡಿಸ್ಸಾಗೆ 128.23 ಕೋಟಿ ಮಂಜೂರಾಗಿದ್ದು, ನಿಸರ್ಗ ಚಂಡಮಾರತದಿಂದ ನಲುಗಿದ ಮಹಾರಾಷ್ಟ್ರಕ್ಕೆ 268.59 ಕೋಟಿ ಮಂಜೂರಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನೈಋತ್ಯ ಮಾನ್ಸೂನ್ ಸಮಯದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಹಾನಿಗೊಳಗಾದ ರಾಜ್ಯಗಳಿಗೆ ಕೇಂದ್ರವು ಹೆಚ್ಚಿನ ಹಣವನ್ನು ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ 577.8 ಕೋಟಿ ರೂ., ಮಧ್ಯಪ್ರದೇಶಕ್ಕೆ 611.61 ಕೋಟಿ ರೂ. ಮತ್ತು ಸಿಕ್ಕಿಂಗೆ 87.84 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. 2020-21 ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು 28 ರಾಜ್ಯಗಳಿಗೆ 15,524 ಕೋಟಿ ಹಣ ಬಿಡುಗಡೆ ಮಾಡಿದೆ.

ನೆರೆ ಪರಿಹಾರ: ಕೇಂದ್ರದಿಂದ ರಾಜ್ಯಕ್ಕೆ 577 ಕೋಟಿ ನೆರವು
ನೆರೆ ಪರಿಹಾರ; ಈ ಬಾರಿಯಾದರೂ ರಾಜ್ಯಕ್ಕೆ ನ್ಯಾಯ ಸಿಗುವುದೇ..?

ರಾಜ್ಯದಲ್ಲಿ ನೆರೆಯಿಂದಾಗಿ ಉಂಟಾದ ನಷ್ಟ ಪ್ರಮಾಣಕ್ಕೆ ಹೋಲಿಸಿದರೆ, ಕೇಂದ್ರ ಬಿಡುಗಡೆ ಮಾಡಿರುವ ಹಣ ಯಾವುದಕ್ಕೂ ಸಾಲುವುದಿಲ್ಲ. ಈಗಾಗಲೇ ಜಿಎಸ್‌ಟಿ, ಸಮರ್ಪಕ ನೆರೆಪರಿಹಾರ ಮೊದಲಾದ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ವಿಪಕ್ಷಗಳು ಟೀಕಿಸುತ್ತಿವೆ. ಅಲ್ಪಪ್ರಮಾಣದ ನೆರೆ ಪರಿಹಾರದ ಮೊತ್ತವೂ ಟೀಕೆಗೆ ಗುರಿಯಾಗುವ ಸಾಧ್ಯತೆ ಇದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com