ಕರೋನಾ ಬಳಿಕ ಆರೋಗ್ಯ ವಿಮೆ ಖರೀದಿಯಲ್ಲಿ ಭಾರೀ ಹೆಚ್ಚಳ

ಕರ್ನಾಟಕದಲ್ಲಿ ಸುಮಾರು 43% ಜನರು 1 ಕೋಟಿ ರೂಪಾಯಿಯ ಆರೋಗ್ಯ ವಿಮೆಯನ್ನು ಖರೀದಿಸಿದ್ದಾರೆ. 59% ಜನರು ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮೆಯನ್ನು ಹಾಗೂ 41% ಜನರು ವೈಯಕ್ತಿಕ ಆರೋಗ್ಯ ವಿಮೆಯನ್ನು ಖರೀದಿಸಿದ್ದಾರೆ.
ಕರೋನಾ ಬಳಿಕ ಆರೋಗ್ಯ ವಿಮೆ ಖರೀದಿಯಲ್ಲಿ ಭಾರೀ ಹೆಚ್ಚಳ

ಕರೋನಾ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಹೇರಿ ಸರಿಸುಮಾರು ಆರು ತಿಂಗಳ ಅವಧಿಯಲ್ಲಿ ಆರೋಗ್ಯ ವಿಮೆ ಖರೀದಿಯಲ್ಲಿ ವಿಪರೀತ ಹೆಚ್ಚಳವಾಗಿದೆ. ಕರ್ನಾಟಕದಲ್ಲಿ ವಿಮೆ ಮಾಡಿಸಿಕೊಂಡವರಲ್ಲಿ ಬಹುತೇಕ 40-50 ವರ್ಷದ ಒಳಗಿರುವವರೆಂದು ಇಂಡಿಯನ್‌ ಎಕ್ಸ್ಪ್ರೆಸ್‌ ವರದಿ ಹೇಳುತ್ತದೆ. ಪಾಲಿಸಿ ಬಜಾರ್‌ನ ಇತ್ತೀಚಿನ ಸಮೀಕ್ಷೆಯ ಪ್ರಕಾರ, ಏಪ್ರಿಲ್-ಸೆಪ್ಟೆಂಬರ್‌ನಿಂದ ರಾಜ್ಯದಲ್ಲಿ ವಿಮೆ ಖರೀದಿ 32% ರಿಂದ 54% ಕ್ಕೆ ಏರಿದೆ.

ಟರ್ಮ್‌ ಜೀವ ವಿಮೆಯನ್ನು ಬಯಸುವ ಜನರ ಹೆಚ್ಚಳವನ್ನು ಅಂಕಿ ಅಂಶಗಳು ತೋರಿಸಿವೆ. 2019-20ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, 21% ನಷ್ಟು ಬೆಳವಣಿಗೆ ಕಂಡುಬಂದಿದೆ. ವರದಿಯ ಪ್ರಕಾರ, ಸುಮಾರು 64% ಗ್ರಾಹಕರು 2020 ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ವಿಮಾ ರಕ್ಷಣೆಯನ್ನು ಖರೀದಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಿಮಾ ಖರೀದಿಯ ವಿಷಯದಲ್ಲಿ 42-50 ವಯಸ್ಸಿನವರಲ್ಲಿ ಅತಿ ಹೆಚ್ಚು ಏರಿಕೆ ಕಂಡಿದ್ದು, 2020 ರಲ್ಲಿ 95% ರಷ್ಟು, 31-40 ವರ್ಷ ವಯಸ್ಸಿನವರು 54% ರಷ್ಟು ಪಾಲನ್ನು ಖರೀದಿಸಿದ್ದಾರೆ. ಪ್ರಸ್ತುತ, ಪಾಲಿಸಿ ಬಜಾರ್ ಅಂಕಿ ಅಂಶದ ಪ್ರಕಾರ 67% ಸಂಬಳ ಪಡೆಯುವ ಉದ್ಯೋಗಿಗಳಿಂದ ಮತ್ತು 33% ಸ್ವಯಂ ಉದ್ಯೋಗಿ(self-employed) ವರ್ಗದವರು ವಿಮೆ ತೆಗೆದುಕೊಂಡಿದ್ದಾರೆ. 20% ಜನರು ಆನ್‌ಲೈನ್‌ನಲ್ಲಿ ಇಂಡಿವಿಜ್ಯುಲ್‌ ಪಾಲಿಸಿಗಳನ್ನು ಖರೀದಿಸಿದ್ದಾರೆ ಎಂದು ಅಂಕಿಅಂಶ ತೋರಿಸಿದೆ.

ಕರ್ನಾಟಕದಲ್ಲಿ ಸುಮಾರು 43% ಜನರು 1 ಕೋಟಿ ರೂಪಾಯಿಯ ಆರೋಗ್ಯ ವಿಮೆಯನ್ನು ಖರೀದಿಸಿದ್ದಾರೆ. 59% ಜನರು ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮೆಯನ್ನು ಹಾಗೂ 41% ಜನರು ವೈಯಕ್ತಿಕ ಆರೋಗ್ಯ ವಿಮೆಯನ್ನು ಖರೀದಿಸಿದ್ದಾರೆ. 26-45 ವರ್ಷ ವಯಸ್ಸಿನವರು ಆರೋಗ್ಯ ವಿಮೆಯಲ್ಲಿ ಗರಿಷ್ಠ ಹೂಡಿಕೆ ಮಾಡಿದ್ದಾರೆ, ನಂತರದ ಸ್ಥಾನ 46-60 ವಯಸ್ಸಿನವರು ಎಂದು ಪಾಲಿಸಿಬಜಾರ್.ಕಾಂನ CBO-ಲೈಫ್ ಇನ್ಶುರೆನ್ಸ್ ಸಂತೋಷ್ ಅಗರ್ವಾಲ್ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com