ಅರಣ್ಯ ಪ್ರದೇಶವನ್ನು ಖಾಸಗಿಯರಿಗೆ ಮಾರುವ ಯತ್ನ ಕೈಬಿಡದಿದ್ದರೆ ನೆಡುತೋಪು ಆಕ್ರಮಣ ಎಚ್ಚರಿಕೆ

ಅಕೇಶಿಯಾ ವಿರೋಧಿ ಹೋರಾಟ ಒಕ್ಕೂಟದ ನಿಯೋಗವು ಪಿಸಿಸಿಎಫ್ ಅವರನ್ನು ಭೇಟಿ ಮಾಡಿ ಮಲೆನಾಡಿನ ಎಪಿಎಂ ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ಮಾರಿದರೆ ಹೋರಾಟವನ್ನು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಈ ಭೂಮಿಯ ಖಾಸಗೀಕರಣದ ಬಗ್ಗೆ ಮುಖ್ಯಮಂತ್ರಿ ಮತ್ತು ಸಂಸದರಾಗಿರುವ ಅವರ ಪುತ್ರ ಆಸಕ್ತಿ ಹೊಂದಿದ್ದಾರೆ ಎಂದು ಅಸಹಾಯಕ ದನಿಯಲ್ಲಿ ಪಿಸಿಸಿಎಫ್ ಮಾತನಾಡಿದಾಗ, ಸಂಘಟನೆಯ ಕಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅರಣ್ಯ ಪ್ರದೇಶವನ್ನು ಖಾಸಗಿಯರಿಗೆ ಮಾರುವ ಯತ್ನ ಕೈಬಿಡದಿದ್ದರೆ ನೆಡುತೋಪು ಆಕ್ರಮಣ ಎಚ್ಚರಿಕೆ

ಅಕೇಶಿಯಾ ವಿರೋಧಿ ಹೋರಾಟ ಒಕ್ಕೂಟದ ವತಿಯಿಂದ ಗುರುವಾರ ಬೆಂಗಳೂರಿನಲ್ಲಿ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್-1) ಸಂಜಯ್ ಮೋಹನ್ ಅವರನ್ನು ಭೇಟಿಯಾಗಿ, ಎಂಪಿಎಂ ನೆಡುತೋಪು ಭೂಮಿ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಅರಣ್ಯ ಭವನದಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಸಂಚಾಲಕ ಪ್ರಮುಖರು ಭಾಗವಹಿಸಿ, ಮುಖ್ಯವಾಗಿ ರಾಜ್ಯದ ಪರಿಸರ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಸುಮಾರು 80 ಸಾವಿರ ಎಕರೆಯಷ್ಟು ಅಪಾರ ಎಂಪಿಎಂ ನೆಡುತೋಪು ಭೂಮಿಯನ್ನು ಖಾಸಗಿಯವರಿಗೆ ನೀಡುವ ಪ್ರಸ್ತಾಪವನ್ನು ಕೂಡಲೇ ಕೈಬಿಟ್ಟು, ಈಗಾಗಲೇ ಗುತ್ತಿಗೆ ಅವಧಿ ಮುಗಿದಿರುವ ಆ ಇಡೀ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಲೆನಾಡಿನ ದಟ್ಟ ಅರಣ್ಯವನ್ನು ನಾಶಪಡಿಸಿ ಅಲ್ಲಿ ಮಾರಕವಾದ ಏಕಜಾತಿ ಅಕೇಶಿಯಾ ಮತ್ತು ನೀಲಗಿರಿ ಬೆಳೆಸಿ ಇಡೀ ಮಲೆನಾಡಿನ ಪರಿಸರ ಮತ್ತು ಜನಜೀವನವನ್ನು ನಲವತ್ತು ವರ್ಷಗಳ ಕಾಲ ನಾಶ ಮಾಡಿದ್ದು ಸಾಕು, ಇನ್ನಾದರೂ ಅಲ್ಲಿ ಸಹಜ ಕಾಡು ಬೆಳೆಯಲು ಅವಕಾಶ ನೀಡಿ. ಅದು ಬಿಟ್ಟು ರಾಜಕಾರಣಿಗಳು ಮತ್ತು ಖಾಸಗೀ ಕಂಪನಿಗಳ ಲಾಭಕ್ಕೆ ಈ ಅಪಾರ ಅರಣ್ಯ ಭೂಮಿಯನ್ನು ಖಾಸಗೀಕರಣ ಮಾಡಲು ಹೊರಟರೆ ಮಲೆನಾಡಿಗರ ತಾಕತ್ತು ಏನೆಂದು ತೋರಿಸಬೇಕಾಗುತ್ತದೆ ಎಂದು ಸಂಘಟನೆ ಸವಾಲು ಹಾಕಿತು.

ಅರಣ್ಯ ಪ್ರದೇಶವನ್ನು ಖಾಸಗಿಯರಿಗೆ ಮಾರುವ ಯತ್ನ ಕೈಬಿಡದಿದ್ದರೆ ನೆಡುತೋಪು ಆಕ್ರಮಣ ಎಚ್ಚರಿಕೆ
ಎಂಪಿಎಂ ಹೆಸರಲ್ಲಿ ಮಲೆನಾಡಿನ ಕಾಡು ನುಂಗುವ ಹುನ್ನಾರಕ್ಕೆ ಆಕ್ರೋಶ

ಮುಖ್ಯವಾಗಿ ಪಿಸಿಸಿಎಫ್ ಅವರು, ಈ ಭೂಮಿಯ ಖಾಸಗೀಕರಣದ ಬಗ್ಗೆ ಮುಖ್ಯಮಂತ್ರಿ ಮತ್ತು ಸಂಸದರಾಗಿರುವ ಅವರ ಪುತ್ರ ಆಸಕ್ತಿ ಹೊಂದಿದ್ದಾರೆ ಎಂದು ಅಸಹಾಯಕ ದನಿಯಲ್ಲಿ ಮಾತನಾಡಿದಾಗ, ಸಂಘಟನೆಯ ಕಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

ಒಂದು ಹಂತದಲ್ಲಿ ಸಂಘಟನೆಯ ನಿಯೋಗಕ್ಕೂ ಮತ್ತು ಪಿಸಿಸಿಎಫ್ ನಡುವೆ ವಾಗ್ವಾದಕ್ಕೂ ಕಾರಣವಾಯಿತು.

ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದರ ಆಸಕ್ತಿಯ ಹಿನ್ನೆಲೆಯಲ್ಲಿ ಎಂಪಿಎಂ ನೆಡುತೋಪು ಪ್ರದೇಶವನ್ನು ಲೀಸ್ ನೀಡುವ ತೀರ್ಮಾನದ ಹಂತದಲ್ಲಿದ್ದೇವೆ, ನೀವೊಮ್ಮೆ ಸಂಸದರೊಂದಿಗೆ ಮಾತನಾಡಿ ಎಂಬ ಪಿಸಿಸಿಎಫ್ ಮಾತುಗಳು ಸಂಘಟನೆಯ ನಿಯೋಗವನ್ನು ಕೆರಳಿಸಿದವು.

ಆಗ, ನಿಯೋಗದ ಕೆ ಟಿ ಗಂಗಾಧರ್, ಕೆ ಪಿ ಶ್ರೀಪಾಲ್, ಡಾ. ರಾಜೇಂದ್ರ ಚೆನ್ನಿ, ಎಚ್ ಬಿ ರಾಘವೇಂದ್ರ, ರಾಜೇಂದ್ರ ಕಂಬಳಗೆರೆ, ಅಖಿಲೇಶ್ ಚಿಪ್ಪಳಿ, ಶಶಿ ಸಂಪಳ್ಳಿ, ಎಂ ಗುರುಮೂರ್ತಿ ಮತ್ತಿತರರು ವಾಗ್ವಾದಕ್ಕಿಳಿದರು.

ಮಲೆನಾಡಿನ ಅರಣ್ಯ ಎಂಬುದು ಸಾರ್ವಜನಿಕ ಆಸ್ತಿಯೇ ವಿನಃ ಮುಖ್ಯಮಂತ್ರಿ ಕುಟುಂಬದ ಆಸ್ತಿಯಲ್ಲ, ನಿಮ್ಮ ಈ ಮಾತು ಕೇಳಿದರೆ ಅರಣ್ಯ ರಕ್ಷಣೆಗಾಗಿಯೇ ಇರುವ ನಿಮ್ಮ ಬಗ್ಗೆಯೇ ಅನುಮಾನಗಳು ಮೂಡತ್ತವೆ. ಸಂಸದರು ಬರಿ ಶಿವಮೊಗ್ಗ ಜಿಲ್ಲೆಯ ಸಂಸದರು. ನೀವು ರಾಜ್ಯದ ಅರಣ್ಯ ಇಲಾಖೆ ಮುಖ್ಯಸ್ಥರು, ನೀವು ಅರಣ್ಯ ಸಂರಕ್ಷಣಾ ಕಾಯಿದೆ ಅನುಸಾರ ಮಾತನಾಡಿ, ಸರ್ಕಾರವೆಂದರೆ ಸಂಸದರೆಂಬ ನಿಮ್ಮ ತಪ್ಪು ತಿಳುವಳಿಕೆ ಬಿಡಿ ಎಂದು ತರಾಟೆಗೆ ತೆಗೆದುಕೊಂಡರು.

ಅರಣ್ಯ ಪ್ರದೇಶವನ್ನು ಖಾಸಗಿಯರಿಗೆ ಮಾರುವ ಯತ್ನ ಕೈಬಿಡದಿದ್ದರೆ ನೆಡುತೋಪು ಆಕ್ರಮಣ ಎಚ್ಚರಿಕೆ
ಕೋಟಿ ಬೆಲೆಬಾಳುವ ಜಮೀನಿನಲ್ಲಿ ಕಾಡು ಬೆಳೆಸಿದ ಪರಿಸರ ಪ್ರೇಮಿ

ಆಗ ಹೋರಾಟಗಾರರ ಆಕ್ರೋಶಕ್ಕೆ ಮಣಿದ ಅಧಿಕಾರಿ, ನಮಗೆ ಅರಣ್ಯ ಭೂಮಿ ಪರವಾಗಿ ಹೋರಾಟ ಇಷ್ಟೊಂದು ತೀವ್ರವಾಗಿ ನಡೆಯುತ್ತಿರುವುದೆ ಗೊತ್ತಿರಲಿಲ್ಲ ಎಂದು ಸಮಜಾಯಿಸಿ ನೀಡಿದರು.

ಆಗ ಹೋರಾಟಗಾರರು, ನೀವು ಅರಣ್ಯ ಭೂಮಿಯನ್ನು ಖಾಸಗಿ ಲಾಬಿಗೆ ಮಣಿದು ಅವರಿಗೆ ಪರಭಾರೆ ಮಾಡುವುದಾದರೆ ನಾವು ಮಲೆನಾಡಿನ ರೈತರು, ಕೂಲಿಕಾರ್ಮಿಕರಿಗೆ ಈಗಿರುವ ನೇಡುತೋಪಿಗೆ ಬೇಲಿ ಹಾಕಿ ಆಕ್ರಮಿಸಿ ಅದನ್ನು ಮಲೆನಾಡಿಗರ ಹಿಡತಕ್ಕೆ ತೆಗೆದುಕೊಳ್ಳಲು ಕರೆ ನೀಡುವುದು ಅನಿವಾರ್ಯವಾಗಲಿದೆ. ಜೊತೆಗೆ ಇಲಾಖೆಯ ಖಾಸಗಿ ಪರ ಲಾಭಿಯ ಬಗ್ಗೆ ನಿಮ್ಮನ್ನೇ ಪಾರ್ಟಿ ಮಾಡಿ ಗೋದಾವರ್ಮನ್ ಪ್ರಕರಣದ ಕುರಿತ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಎಂದೆ ಪ್ರಕರಣ ದಾಖಲು ಮಾಡುವುದಾಗಿ ಹೋರಾಟಗಾರರು ಎಚ್ಚರಿಸಿದರು.ರಾಜಕಾರಣಿ-ಪರಿಸರವಾದಿಗಳ ವಾಗ್ಯುದ್ಧಕ್ಕೆ ಕಾರಣವಾದ ಮಂಕೀ ಪಾರ್ಕ್

ಅರಣ್ಯ ಪ್ರದೇಶವನ್ನು ಖಾಸಗಿಯರಿಗೆ ಮಾರುವ ಯತ್ನ ಕೈಬಿಡದಿದ್ದರೆ ನೆಡುತೋಪು ಆಕ್ರಮಣ ಎಚ್ಚರಿಕೆ
ರಾಜಕಾರಣಿ-ಪರಿಸರವಾದಿಗಳ ವಾಗ್ಯುದ್ಧಕ್ಕೆ ಕಾರಣವಾದ ಮಂಕೀ ಪಾರ್ಕ್

ಬಳಿಕ ಪರಿಸ್ಥಿತಿಯ ಗಂಭೀರತೆ ಅರಿತ ಪಿಸಿಸಿಎಪ್, ಈ ವಿಷಯವನ್ನು ಅರಣ್ಯ ಸಚಿವರ ಗಮನಕ್ಕೆ ಕೂಡಲೆ ತರುವುದಾಗಿ ಹೇಳಿದರು.

ಎಂಪಿಎಂ ಕಾರ್ಖಾನೆಯ ನೆಪದಲ್ಲಿ ಮಲೆನಾಡಿಗರ ಹಕ್ಕಾದ ಮತ್ತು ಇಡೀ ರಾಜ್ಯದ ಶ್ವಾಸಕೋಶದಂತಿರುವ ಮಲೆನಾಡಿನ ಅರಣ್ಯವನ್ನು ಖಾಸಗೀ ಕಾರ್ಪೊರೇಟ್ ಕಂಪನಿಗಳಿಗೆ ಪರಭಾರೆ ಮಾಡುವ ಪ್ರಯತ್ನಗಳ ವಿರುದ್ಧ ಮಲೆನಾಡಿನಲ್ಲಿ ದೊಡ್ಡ ಮಟ್ಟದ ಪ್ರತಿರೋಧ ಹೋರಾಟ ಭುಗಿಲೇಳಲಿದೆ ಎಂಬ ಎಚ್ಚರಿಕೆಯೊಂದಿಗೆ ಹೋರಾಟಗಾರರು ಮನವಿ ಸಲ್ಲಿಸಿದರು.

ಅರಣ್ಯ ಪ್ರದೇಶವನ್ನು ಖಾಸಗಿಯರಿಗೆ ಮಾರುವ ಯತ್ನ ಕೈಬಿಡದಿದ್ದರೆ ನೆಡುತೋಪು ಆಕ್ರಮಣ ಎಚ್ಚರಿಕೆ
ಆನಂದ ಸಿಂಗ್ ಗೆ ಅರಣ್ಯ ಖಾತೆ! ಪರಿಸರವಾದಿಗಳ ಕಳವಳ! ರಾಜ್ಯ ಸರ್ಕಾರಕ್ಕೂ ಮುಜುಗರ!

ನಿಯೋಗದಲ್ಲಿ ಪ್ರೊ. ಕೃಷ್ಣಮೂರ್ತಿ ಹಿಳ್ಳೋಡಿ, ರವಿ ಹರಿಗೆ, ಮಾಲತೇಶ ಬೊಮ್ಮನಕಟ್ಡೆ, ಮಂಜುನಾಥ ನವುಲೆ, ವೀರೇಶ್, ವಕೀಲ ಕಾಶೀನಾಥ್ ಮತ್ತಿತರರು ಇದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com