ಬಸವಣ್ಣ ಪ್ರತಿಮೆಗೆ ಹಾನಿ: ನಾಗರಿಕರಿಂದ, ರಾಜಕಾರಣಿಗಳಿಂದ ಖಂಡನೆ

ಬಸವಣ್ಣ ಮೂರ್ತಿಯ ಎಡಗೈಯನ್ನು ಶನಿವಾರ ತಡರಾತ್ರಿ ಕಿಡಿಗೇಡಿಗಳು ಮುರಿದಿದ್ದಾರೆ ಎನ್ನಲಾಗಿದ್ದು, ಸುದ್ದಿ ತಿಳಿದ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದ್ದರು.
ಬಸವಣ್ಣ ಪ್ರತಿಮೆಗೆ ಹಾನಿ: ನಾಗರಿಕರಿಂದ, ರಾಜಕಾರಣಿಗಳಿಂದ ಖಂಡನೆ

ಬೆಳಗಾವಿ ಜಿಲ್ಲೆಯ ಬಿಜಗುಪ್ಪಿ ಗ್ರಾಮದಲ್ಲಿರುವ ಬಸವಣ್ಣನವರ ಪ್ರತಿಮೆಗೆ ಕಿಡಿಗೇಡಿಗಳು ಹಾನಿ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ. ಕನ್ನಡನಾಡಿನ ಅಸ್ಮಿತೆಯಂತಿರುವ ಬಸವಣ್ಣರ ಮೂರ್ತಿ ಮೇಲೆ ನಡೆದ ದಾಳಿಯನ್ನು ಯಾವುದೇ ಕಾರಣಕ್ಕೂ ಒಪ್ಪಲಾಗುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆಕ್ರೋಶ ಹೊರಹಾಕಿದ್ದಾರೆ.

ಬಸವಣ್ಣ ಅವರ ಮೂರ್ತಿಯ ಎಡಗೈ ತುಂಡರಿಸಿದ ರೀತಿಯಲ್ಲಿ ಭಾನುವಾರ ಪತ್ತೆಯಾಗಿದ್ದು, ಗ್ರಾಮದಲ್ಲಿ ಉದ್ವಿಘ್ನ ಪರಿಸ್ಥಿತಿ ತಲೆದೋರಿತ್ತು. ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಸಾಕಷ್ಟು ಬಂದೋಬಸ್ತ್‌ ಮಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಸವಣ್ಣ ಮೂರ್ತಿಯ ಎಡಗೈಯನ್ನು ಶನಿವಾರ ತಡರಾತ್ರಿ ಕಿಡಿಗೇಡಿಗಳು ಮುರಿದಿದ್ದಾರೆ ಎನ್ನಲಾಗಿದ್ದು, ಸುದ್ದಿ ತಿಳಿದ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದ್ದರು.

ವಿಷಯ ತಿಳಿದ ತಕ್ಷಣ ಶಾಸಕ ಮಹಾದೇವಪ್ಪ ಯಾದವಾಡ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ''ಗ್ರಾಮಗಳಲ್ಲಿಶಾಂತಿ ಕದಡಲು ಕೆಲ ಸಮಾಜಘಾತಕ ವ್ಯಕ್ತಿಗಳು ಇಂತಹ ಕೃತ್ಯವೆಸಗಿದ್ದಾರೆ. ಅಪರಾಧಿಗಳು ಎಷ್ಟೇ ಬಲಿಷ್ಠವಾಗಿದ್ದರೂ ಸೂಕ್ತ ತನಿಖೆ ಮಾಡಿ ಒಂದು ವಾರದಲ್ಲಿಬಂಧಿಸಿ ಶಿಕ್ಷೆಗೆ ಗುರಿಪಡಿಸಿ'' ಎಂದು ಶಾಸಕ ಯಾದವಾಡ ಪೊಲೀಸ್‌ ಅಧಿಕಾರಿಗಳಿಗೆ ಸೂಚಿನೆ ನೀಡಿದ್ದಾರೆ.

''ಬಿಜಗುಪ್ಪಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಾಮರಸ್ಯದಿಂದ ಬದುಕುತ್ತಿದ್ದೇವೆ. ಕಿಡಿಗೇಡಿಗಳು ಬಸವಣ್ಣನವರ ಪ್ರತಿಮೆ ಭಗ್ನಗೊಳಿಸಿದ ದಿನದಂದೇ ರಾತ್ರಿ ಸಾಲಹಳ್ಳಿ ಗ್ರಾಮದಲ್ಲಿಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಹಿಂದಿನ ಗ್ಲಾಸ್‌ ಒಡೆದಿದ್ದಾರೆ. ಈ ಕೃತ್ಯ ಎಸಗಿದವರನ್ನು ತಕ್ಷಣ ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು'' ಎಂದು ಗ್ರಾಮದ ಮುಖಂಡ ಮಾರುತಿ ಕೊಪ್ಪ ಒತ್ತಾಯಿಸಿದ್ದಾರೆ.

ಬಸವಣ್ಣ ಪ್ರತಿಮೆಗೆ ಹಾನಿ: ನಾಗರಿಕರಿಂದ, ರಾಜಕಾರಣಿಗಳಿಂದ ಖಂಡನೆ
ಜಾತಿಗೆ ಸೀಮಿತವಾದ ಮನುಕುಲದ ಮೇರು ವ್ಯಕ್ತಿ ಬಸವಣ್ಣಈ ಕುರಿತು ಕಟಕೋಳ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದ್ದು, ಒಬ್ಬ ವ್ಯಕ್ತಿಯನ್ನು ವಿಚಾರಣೆಗಾಗಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಭಗ್ನಗೊಂಡಿರುವ ಮೂರ್ತಿಯನ್ನು ತೆರವುಗೊಳಿಸಿದ್ದು, ಬಸವೇಶ್ವರರ ಭಾವಚಿತ್ರವನ್ನು ಕೂಡಿಸಿ ಪೂಜೆ ಸಲ್ಲಿಸಿ ವಾತಾವರಣ ತಿಳಿಗೊಳಿಸಲಾಯಿತು.

''ಬೆಳಗಾವಿ ಜಿಲ್ಲೆಯಲ್ಲಿಯೇ ರಾಮದುರ್ಗ ತಾಲೂಕಿನ ಜನ ಶಾಂತಿ, ಸಾಮರಸ್ಯದಿಂದ ಎಲ್ಲರೂ ನಮ್ಮವರೆ ಎಂಬ ಬಸವಣ್ಣನವರ ತತ್ವದಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ, ಇಂತಹ ಘಟನೆ ಸಂಭವಿಸಿದ್ದು ಖಂಡನೀಯ. ಭಗ್ನಗೊಂಡ ಮೂರ್ತಿಯನ್ನು ಬದಲಾಯಿಸಿ ಒಂದು ತಿಂಗಳಲ್ಲಿಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು'' ಎಂದು ಶಾಸಕ ಮಹಾದೇವಪ್ಪ ಯಾದವಾಡ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಬಸವಣ್ಣ ಪ್ರತಿಮೆಗೆ ಹಾನಿ: ನಾಗರಿಕರಿಂದ, ರಾಜಕಾರಣಿಗಳಿಂದ ಖಂಡನೆ
ಬಡಿವಾರದ ಭಾಷಣಗಳಾಚೆ ಬಸವಣ್ಣ ನಮ್ಮೊಳಗೆ ಉಳಿದಿದ್ದಾನೆಯೇ?

ಕಾಂಗ್ರೆಸ್‌ ಮುಖಂಡರಿಂದ ಖಂಡನೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ವಿಧಾನಪರಿಷತ್‌ನ ವಿರೋಧ ಪಕ್ಷದ ಮುಖಂಡ ಎಸ್.ಆರ್.ಪಾಟೀಲ್ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಈಶ್ವರ ಖಂಡ್ರೆ, ಬಿಜಗುಪ್ಪಿಯಲ್ಲಿ ವಿಶ್ವಗುರು ಬಸವೇಶ್ವರರ ಪ್ರತಿಮೆ ಭಗ್ನ ಮಾಡಿರುವುದು ಅಕ್ಷಮ್ಯ. ಇಡೀ ಮನುಕುಲಕ್ಕೆ ಮಾನವತೆಯ ಸಂದೇಶ ಸಾರಿದ ಸಮ ಸಮಾಜದ ಪರಿಕಲ್ಪನೆ ಕಟ್ಟಿಕೊಟ್ಟ 12ನೇ ಶತಮಾನದ ಕ್ರಾಂತಿಪುರುಷ ಬಸವೇಶ್ವರರು ಜಗತ್ತಿಗೆ ಆದರ್ಶರಾಗಿದ್ದಾರೆ. ಇಂಗ್ಲೆಂಡ್‌ನಲ್ಲಿಯೂ ಬಸವಣ್ಣನವರ ಪ್ರತಿಮೆ ಸ್ಕಾಪಿಸಿ ಗೌರವಿಸಲಾಗಿದೆ. ಇಂತಹ ಮಹಾಮಹಿಮರ ಪ್ರತಿಮೆ ಭಗ್ನಗೊಳಿಸಿರುವುದು ನಿಜಕ್ಕೂ ದುರ್ದೈವ. ಕಿಡಿಗೇಡಿಗಳನ್ನು ಪತ್ತೆ ಮಾಡಿ ಸರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಎಲ್ಲ ಪ್ರತಿಮೆಗಳ ಬಳಿ ಸಿಸಿ ಟಿವಿ ಕ್ಯಾಮರಾ ಅಳವಡಿಸುವ ಕಾರ್ಯ ಆಗಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್‌ ಮುಖಂಡ ಎಸ್‌ ಆರ್‌ ಪಾಟೀಲ್‌ ಕೂಡಾ ದುಷ್ಕೃತ್ಯವನ್ನು ಖಂಡಿಸಿದ್ದು, ಬೆಳಗಾವಿಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನ ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ. ಶಾಂತಿ ಕದಡಲು ಸಮಾಜಘಾತಕ ದುಷ್ಟಶಕ್ತಿಗಳು ಇಂತಹ ಕೃತ್ಯವೆಸಗಿದ್ದಾರೆ. ಈ ಪ್ರಕರಣವನ್ನು ಮುಖ್ಯಮಂತ್ರಿ ಹಾಗೂ ಗೃಹಸಚಿವ ಬೊಮ್ಮಾಯಿ ರವರು ಗಂಭೀರವಾಗಿ ಪರಿಗಣಿಸಿ, ಈ ದುಷ್ಕೃತ್ಯ ಎಸಗಿದವರನ್ನು ತಕ್ಷಣವೇ ಬಂಧಿಸಿ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಕೂಡಾ ಬೆಳಗಾವಿ ಕೃತ್ಯವನ್ನು ಖಂಡಿಸಿದ್ದು “ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿರುವ ಜಗಜ್ಯೋತಿ ಬಸವಣ್ಣನವರ ಪ್ರತಿಮೆಯನ್ನು ಭಗ್ನ ಮಾಡಿರುವುದು ಅತ್ಯಂತ ಅಕ್ಷಮ್ಯ. ಬಿ.ಎಸ್ ಯಡಿಯೂರಪ್ಪನವರು ಕೂಡಲೆ ತನಿಖೆಗೆ ಆದೇಶಿಸಿ ಇಂತಹ ಕೃತ್ಯವೆಸಗಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸುತ್ತೇನೆ” ಎಂದು ಟ್ವೀಟ್‌ ಮಾಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com