ಪ್ರವಾಹ ಪರಿಹಾರ ನೀಡದ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ನೆರೆ ಪರಿಹಾರ, ಜಿಎಸ್‌ಟಿ ಸೇರಿದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಿರುವ ಮೊತ್ತವನ್ನು ಇನ್ನೂ ಬಾಕಿಯಿರಿಸಿಕೊಂಡದಕ್ಕೆ ಸಿದ್ದರಾಮಯ್ಯ ಈ ಹಿಂದೆಯೂ ಟೀಕಾಪ್ರಹಾರ ನಡೆಸಿದ್ದರು.
ಪ್ರವಾಹ ಪರಿಹಾರ ನೀಡದ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಹಾನಿ ಅನುಭವಿಸಿದ ಸಂತ್ರಸ್ತರಿಗೆ ಇನ್ನೂ ಪರಿಹಾರ ನೀಡದ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮಳೆ ಮತ್ತು ಪ್ರವಾಹದಿಂದಾಗಿ ಈ ವರ್ಷ ಕಳೆದ ವರ್ಷಕ್ಕಿಂತ ದುಪ್ಪಟ್ಟು ನಷ್ಟ ಸಂಭವಿಸಿದೆ.‌ ಹೀಗಿದ್ದರೂ ರಾಜ್ಯ ಬಿಜೆಪಿ ಸರ್ಕಾರ ಹೆಚ್ಚು ಪರಿಹಾರ ಕೇಳಲು ಹೋಗದೆ ಕಡಿಮೆ ಕೇಳಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. ಮುಖ್ಯಮಂತ್ರಿ ಅವರು ತಕ್ಷಣ ಮರುಸಮೀಕ್ಷೆಗೆ ಆದೇಶಿಸಿ ವೈಜ್ಞಾನಿಕವಾಗಿ ನಷ್ಟದ ಅಂದಾಜು ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರವಾಹ ಪರಿಹಾರ ನೀಡದ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ
ಉತ್ತರ ಕರ್ನಾಟಕ ನೆರೆ: ಕೇಂದ್ರದ ಭೇಟಿಗೆ ಸರ್ವಪಕ್ಷ ನಿಯೋಗ ರೂಪಿಸಲು ಸಿದ್ದರಾಮಯ್ಯ ಆಗ್ರಹ

ಕಳೆದ ವರ್ಷ ಅತಿವೃಷ್ಟಿಯಿಂದ 9,94,556 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.25,518 ಕೋಟಿ ಪರಿಹಾರ ಕೇಳಿದ್ದ ಮುಖ್ಯಮಂತ್ರಿ ಅವರು, ಈ ಬಾರಿ 20,86,703 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ 24,941.73 ಕೋಟಿ ಪರಿಹಾರ ಕೇಳಿರುವುದು ರಾಜ್ಯಕ್ಕೆ ಮಾಡಿರುವ ಅನ್ಯಾಯ ಅಲ್ಲವೇ? ಕಳೆದ ವರ್ಷ ರೂ.25,518 ಕೋಟಿ ಪರಿಹಾರ ಕೇಳಿದರೂ ಕೇಂದ್ರ ಸರ್ಕಾರ ನೀಡಿರುವುದು ರೂ.1652 ಕೋಟಿ ಮಾತ್ರ. ರಾಜ್ಯ ಬಿಜೆಪಿ ಸರ್ಕಾರ ಸಮರ್ಪಕ ಸಮೀಕ್ಷಾ ವರದಿ ಮೂಲಕ ಪ್ರಧಾನಿಗಳ ಮೇಲೆ ಒತ್ತಡ ಹೇರಿದರೆ ಮಾತ್ರ ಹೆಚ್ಚಿನ ಪರಿಹಾರ ಸಿಗಲು ಸಾಧ್ಯ ಎಂದಿದ್ದಾರೆ.

ಪ್ರವಾಹ ಪರಿಹಾರ ನೀಡದ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ
90,000 ಕೋಟಿ ಸಾಲ ಮಾಡಲು ಹೊರಟ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದ ಸಿದ್ದರಾಮಯ್ಯ

ಮಳೆ/ಪ್ರವಾಹ ಬಂದು ಮೂರು ತಿಂಗಳುಗಳಾಗುತ್ತಾ ಬಂದರೂ ಇಲ್ಲಿಯ ವರೆಗೆ 51,812 ಸಂತ್ರಸ್ಥರಿಗೆ ನೀಡಿರುವ ಪರಿಹಾರ ಕೇವಲ ರೂ.36,57,79,972 ಮಾತ್ರ. ಎರಡನೇ ಹಂತದಲ್ಲಿ ಗುರುತಿಸಲಾದ 85,996 ಸಂತ್ರಸ್ತರಿಗೆ 70,70,87,961 ರೂಪಾಯಿ ಪರಿಹಾರ ಇನ್ನಷ್ಟೇ ನೀಡಬೇಕಾಗಿದೆ. ಉಳಿದವರ ಗತಿ ಏನು‌ ಮುಖ್ಯಮಂತ್ರಿಗಳೇ ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನೆರೆ ಪರಿಹಾರ, ಜಿಎಸ್‌ಟಿ ಸೇರಿದಂತೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಬೇಕಿರುವ ಮೊತ್ತವನ್ನು ಇನ್ನೂ ಬಾಕಿಯಿರಿಸಿಕೊಂಡದಕ್ಕೆ ಸಿದ್ದರಾಮಯ್ಯ ಈ ಹಿಂದೆಯೂ ಟೀಕಾಪ್ರಹಾರ ನಡೆಸಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com