ಸ್ವಚ್ಚತೆಯ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಿದ ಬಿಬಿಎಂಪಿ ಸಿಬ್ಬಂದಿ

ಹೊಸಕೆರೆ ಹಳ್ಳಿ ಮಾತ್ರವಲ್ಲದೆ ಹೇರೋಹಳ್ಳಿ, ಪಟ್ಟಾಭಿರಾಮ ನಗರ, ಮಹಾಲಕ್ಷ್ಮಿ ಪುರಂ ಸೇರಿದಂತೆ ಹಲವಾರು ವಾರ್ಡುಗಳಲ್ಲಿ ಪೌರ ಕಾರ್ಮಿಕರು, ಬಿಬಿಎಂಪಿ ಮಾರ್ಷಲ್‌ಗಳು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.
ಸ್ವಚ್ಚತೆಯ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಿದ ಬಿಬಿಎಂಪಿ ಸಿಬ್ಬಂದಿ

ಬೆಂಗಳೂರು ನಗರವನ್ನು ನಿರ್ಮಲವಾಗಿಡಲು ಬಿಬಿಎಂಪಿ ಸಾಕಷ್ಟು ಪ್ರಯತ್ನಿಸುತ್ತಿದೆ. ಆದರೆ ನಾಗರಿಕರ ಸಹಕಾರವೂ ಸಾಕಷ್ಟು ಸಿಗದ ಕಾರಣ ಹಲವಾರು ಪ್ರದೇಶಗಳಲ್ಲಿ ತ್ಯಾಜ್ಯಗಳು ರಾಶಿಯಾಗಿದ್ದು, ನಗರದ ಅಂದಗೆಡಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಬಿಬಿಎಂಪಿ ನಾಗರಿಕರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ಪೌರ ಕಾರ್ಮಿಕರು, ಬಿಬಿಎಂಪಿ ಮಾರ್ಷಲ್‌ಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ವಾರ್ಡ್ ನಂ.161 ಹೊಸಕೆರೆಹಳ್ಳಿ ಕೆರೆಕೋಡಿ ಬಸ್ ನಿಲ್ದಾಣದ ಬಳಿ ಕಸ-ತ್ಯಾಜ್ಯಗಳು ವಿಪರೀತ ಶೇಖರಣೆಯಾಗಿದ್ದು, ಪ್ರದೇಶದ ಸೌಂದರ್ಯವನ್ನು ಹಾಳುಗೆಡವಿತ್ತು. ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯ ನಿವಾಸಿಗಳು ದೂರು ನೀಡಿದ್ದರು. ದೂರನ್ನು ಪರಿಗಣಿಸಿದ ಬಿಬಿಎಂಪಿ ಆ ಸ್ಥಳವನ್ನು ಸ್ವಚ್ಛ ಗೊಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಬಿಎಂಪಿ ಘನತಾಜ್ಯ ನಿರ್ವಹಣೆ ವಿಶೇಷ ಆಯುಕ್ತರು ಈ ಕುರಿತು ಸ್ಪಷ್ಟಪಡಿಸಿದ್ದು, ವಾರ್ಡ್ ನಂ.161 ಹೊಸಕೆರೆಹಳ್ಳಿ ಕೆರೆಕೋಡಿ ಬಸ್ ನಿಲ್ದಾಣದ ಬಳಿ ಸ್ವಚ್ಛಗೊಳಿಸುವಂತೆ ಸ್ಥಳೀಯ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ, ಬಿಬಿಎಂಪಿ ಪೌರಕಾರ್ಮಿಕರು ಆ ಸ್ಥಳವನ್ನು ಸ್ವಚ್ಚಗೊಳಿಸಿದರು. ಅಲ್ಲಿ ಸುಂದರವಾದ ರಂಗೋಲಿ ಬಿಡಿಸಿ, ಆ ಸ್ಥಳವನ್ನು ಅಂದಗೊಳಿಸಿದರು. ಮಾರ್ಷಲ್ ಗಳು ಅಲ್ಲಿ ಗಲೀಜು ಮಾಡದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು ಎಂದು ಹೇಳಿದ್ದಾರೆ.

ಹೊಸಕೆರೆ ಹಳ್ಳಿ ಮಾತ್ರವಲ್ಲದೆ ಹೇರೋಹಳ್ಳಿ, ಪಟ್ಟಾಭಿರಾಮ ನಗರ, ಮಹಾಲಕ್ಷ್ಮಿ ಪುರಂ ಸೇರಿದಂತೆ ಹಲವಾರು ವಾರ್ಡುಗಳಲ್ಲಿ ಪೌರ ಕಾರ್ಮಿಕರು, ಬಿಬಿಎಂಪಿ ಮಾರ್ಷಲ್‌ಗಳು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

ಅಲ್ಲದೆ, ತ್ಯಾಜ್ಯ ವಿಂಗಡಿಸದೇ ಅನಧಿಕೃತವಾಗಿ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ಬಿಬಿಎಂಪಿ ಯು ನಿಷೇಧಿಸಿದೆ. ನಿಯಮ ಉಲ್ಲಂಘನೆ ದಂಡನಾರ್ಹ ಎಂದು ಬಿಬಿಎಂಪಿ ಘನತಾಜ್ಯ ನಿರ್ವಹಣೆ ವಿಶೇಷ ಆಯುಕ್ತರು ಎಚ್ಚರಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com