ಡಾ. ಸುಧಾ ಅಕ್ರಮ ಆಸ್ತಿ ಆರೋಪ: ಭಾರೀ ಮೊತ್ತದ ಚಿನ್ನಾಭರಣ - ನಗದು ವಶ

ಭ್ರಷ್ಟಾಚಾರದ ಕುರಿತ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕೆಎಎಸ್‌ ಅಧಿಕಾರಿ ಡಾ. ಸುಧಾ ಅವರ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯಲ್ಲಿ ಪತ್ತೆಯಾದ ದಾಖಲೆಗಳು, ಚಿನ್ನಾಭರಣ ಹಾಗೂ ಬ್ಯಾಂಕ್‌ ಖಾತೆಯ ವಿವರಗಳನ್ನು ಎಸಿಬಿಯ ಪೊಲೀಸ್ ಮಹಾನಿರೀಕ್ಷಕರಾದ ಚಂದ್ರಶೇಖರ್‌ ಅವರು ಪ್ರತಿಧ್ವನಿಗೆ ನೀಡಿದ್ದಾರೆ.
ಡಾ. ಸುಧಾ ಅಕ್ರಮ ಆಸ್ತಿ ಆರೋಪ: ಭಾರೀ ಮೊತ್ತದ ಚಿನ್ನಾಭರಣ - ನಗದು ವಶ

ಡಾ. ಬಿ ಸುಧಾ ವಿರುದ್ದ ಅಕ್ರಮ ಆಸ್ತಿಗಳ ಗಳಿಕೆ ಸಂಬಂಪಟ್ಟಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸುಧಾ ಅವರಿಗೆ ಸೇರಿದೆನ್ನಲಾದ ಹಲವಾರು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕುರಿತು ಪತ್ರಕಾಗೋಷ್ಟಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು, ಬೆಂಗಳೂರು, ಮೈಸೂರು ಹಾಗೂ ಉಡುಪಿ ಜಿಲ್ಲೆಯ ಒಟ್ಟು 7 ಸ್ಥಳಗಳಲ್ಲಿ ಎಸಿಬಿಯ 6 ವಿವಿಧ ತಂಡಗಳಿಂದ ಶೋಧನೆ ಕಾರ್ಯವನ್ನು ಕೈಗೊಳ್ಳಲಾಗಿತ್ತು. ಶೋಧನಾ ವೇಳೆಯಲ್ಲಿ ಅನುಮಾನಸ್ಪದ ಚರ ಮತ್ತು ಸ್ಥಿರಾಸ್ತಿಗಳು ಪತ್ತೆಯಾಗಿದ್ದು ಅವುಗಳ ಬಗ್ಗೆ ತನಿಖೆ ಮುಂದುವರೆಯುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸುಧಾ ಮತ್ತು ಅವರ ಕುಟುಂಬ ಸದಸ್ಯರು ಹಾಗು ಅವರಿಗೆ ಪರಿಚಯವಿರುವ ಇತರೆ ವ್ಯಕ್ತಿಗಳ ಹೆಸರಿನಲ್ಲಿರುವ ಸುಮಾರು 200ಕ್ಕೂ ಹೆಚ್ಚು ಸ್ವತ್ತಿಗೆ ಸಂಬಂಧಪಟ್ಟ ದಾಖಲಾತಿಗಳು, ಆಸ್ತಿಗಳ ಕ್ರಯ ಪತ್ರಗಳು, ಜಿಪಿಎ ಪತ್ರಗಳು, ಕೆಲವು ಒಪ್ಪಂದದ ಕರಾರು ಪತ್ರಗಳು ಮತ್ತು ಇತರೆ ದಾಖಲಾತಿಗಳು ದೊರೆತಿದ್ದು ವಶಕ್ಕೆ ಪಡೆದುಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸುಧಾ ಮತ್ತು ಬೇರೆ ವ್ಯಕ್ತಿಗಳ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳ ಸುಮಾರು 50 ಖಾತೆಗಳ ವಿವರಗಳು, ಸುಮಾರು 50 ಕ್ಕೂ ಅಧಿಕ ಚೆಕ್ ಲೀಫ್‌ಗಳು ಅಧಿಕಾರಿಗಳಿಗೆ ದೊರೆತಿದೆ. . ಈ ಬ್ಯಾಂಕ್‌ಖಾತೆಗಳಲ್ಲಿ ಸುಮಾರು 3.5 ಕೋಟಿ ರೂ.ಗಳು ಠೇವಣಿಗಳು ಪತ್ತೆಯಾಗಿದೆ.

ಇನ್ನು ದಾಳಿಯ ವೇಳೆ ಸುಮಾರು 37 ಕೆ.ಜಿ ಚಿನ್ನಾಭರಣಗಳು ಮತ್ತು ಸುಮಾರು 10.5 ಕೆ.ಜಿ ಗಳು ಬೆಳ್ಳಿಯ ವಸ್ತ್ರಗಳು ಪತ್ತೆಯಾಗಿದ್ದು, ರೂ. 36,89,000/- ನಗದು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲೆಗಳ ಪರಿಶೀಲನಾ ಕಾರ್ಯ ಕೈಗೊಂಡಿದ್ದು, ಪ್ರಕರಣದಲ್ಲಿ ತನಿಖೆ ಮುಂದುವರೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಾ. ಸುಧಾ ಅಕ್ರಮ ಆಸ್ತಿ ಆರೋಪ: ಭಾರೀ ಮೊತ್ತದ ಚಿನ್ನಾಭರಣ - ನಗದು ವಶ
ಕೆಎಎಸ್ ಅಧಿಕಾರಿ ನಿವಾಸ, ಕಛೇರಿ ಮೇಲೆ ಎಸಿಬಿ ದಾಳಿ- ನಗದು, ಆಭರಣ ವಶ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com