ಕೆಎಎಸ್ ಅಧಿಕಾರಿ ನಿವಾಸ, ಕಛೇರಿ ಮೇಲೆ ಎಸಿಬಿ ದಾಳಿ- ನಗದು, ಆಭರಣ ವಶ

ಶನಿವಾರ ಮುಂಜಾನೆ ಭ್ರಷ್ಟಾಚಾರ ನಿಗ್ರಹ ದಳ ವಿವಿಧ ಜಿಲ್ಲೆಯ ತಂಡಗಳಿಂದ ಡಾ.ಬಿ.ಸುಧಾರವರಿಗೆ ಸಂಬಂಧಪಟ್ಟ ಮನೆ ಹಾಗೂ ಕಛೇರಿ ಒಳಗೊಂಡಂತೆ ಒಟ್ಟು 6 ಸ್ಥಳಗಳ ಮೇಲೆ ದಾಳಿ ನಡೆಸಿದೆ
ಕೆಎಎಸ್ ಅಧಿಕಾರಿ ನಿವಾಸ, ಕಛೇರಿ ಮೇಲೆ ಎಸಿಬಿ ದಾಳಿ- ನಗದು, ಆಭರಣ ವಶ

ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಪ್ರಸ್ತುತ ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ. ಸುಧಾ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರದ ಕುರಿತಾಗಿ ದೂರು ದಾಖಲಾಗಿದ್ದು, ಈ ಸಂಬಂಧ ನ್ಯಾಯಾಲಯವು ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲು ನಿರ್ದೇಶಿಸಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನ್ಯಾಯಾಲಯದ ನಿರ್ದೇಶನದಂತೆ ಡಾ. ಬಿ ಸುಧಾ ಅವರ ನಿವಾಸ ಹಾಗೂ ಕಛೇರಿಗಳಿಗೆ ಏಕಕಾಲದಲ್ಲಿ ದಾಳಿ ಮಾಡಿದ ಎಸಿಬಿ ತಂಡ ತನಿಖೆ ನಡೆಸಿದೆ.

ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಎಸಿಬಿ, ಸಾರ್ವಜನಿಕರೊಬ್ಬರು ನ್ಯಾಯಾಲಯದಲ್ಲಿ ಡಾ.ಬಿ.ಸುಧಾ ವಿರುದ್ದ ಅಕ್ರಮ ಆಸ್ತಿಗಳ ಗಳಿಕೆ ಮತ್ತು ಅವ್ಯವಹಾರದ ಸಂಬಂಧ ಖಾಸಗಿ ದೂರನ್ನು ದಾಖಲಿಸಿದ್ದು, ನ್ಯಾಯಾಲಯದ ನಿರ್ದೇಶನದಂತೆ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹದಳ ತಿಳಿಸಿದೆ.

ಶನಿವಾರ ಮುಂಜಾನೆಯೇ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ವಿಭಾಗ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ವಿವಿಧ ಜಿಲ್ಲೆಯ ತಂಡಗಳಿಂದ ಡಾ.ಬಿ.ಸುಧಾರವರಿಗೆ ಸಂಬಂಧಪಟ್ಟ ಮನೆ ಹಾಗೂ ಕಛೇರಿ ಒಳಗೊಂಡಂತೆ ಒಟ್ಟು 6 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಸುಧಾ ಅವರ ಬೆಂಗಳೂರು ನಗರದಲ್ಲಿನ ವಾಸದ ಮನೆ, ಇವರಿಗೆ ಸಂಬಂಧಪಟ್ಟ ಯಲಹಂಕದಲ್ಲಿನ ಪ್ಲಾಟ್, ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿ ಸೇರಿದಂತೆ ಬೆಂಗಳೂರು, ಮೈಸೂರು ಹಾಗೂ ಉಡುಪಿಯಲ್ಲಿರುವ ಪರಿಚಿತರ ಮನೆ ಮೇಲೂ ದಾಳಿ ಮಾಡಲಾಗಿದೆ. ಕೆಎಎಸ್‌ ಅಧಿಕಾರಿ ಮನೆಯಿಂದ ಭಾರೀ ಮೊತ್ತದ ನಗದು ಹಾಗೂ ಚಿನ್ನಾಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಡಾ. ಸುಧಾ ಭೂ ಪರಿಹಾರ ನೀಡುವ ವಿಚಾರದಲ್ಲಿ ತಮ್ಮ ಗಂಡ ಮತ್ತು ದಲ್ಲಾಳಿಗಳ ಮೂಲಕ ಲಂಚ ಪಡೆಯುತ್ತಿದ್ದರು, ಹಾಗೂ, ತಮ್ಮ ಸಂಬಳಕ್ಕಿಂತಲೂ ಆದಾಯದ ಮೊತ್ತ ಜಾಸ್ತಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಲಾಗಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com