ಮಾಸ್ಕ್ ಧರಿಸದೇ ಇರುವುದಕ್ಕೆ ತೇಜಸ್ವಿ ಸೂರ್ಯಗೆ ದಂಡ ವಿಧಿಸಿದ್ದೀರಾ? - ಹೈಕೋರ್ಟ್ ಪ್ರಶ್ನೆ

ಉಪಚುನಾವಣೆ ಪ್ರಚಾರದ ಸಂಧರ್ಭದಲ್ಲಿ ಕೋವಿಡ್‌ ಮಾನದಂಡಗಳನ್ನು ಪಾಲಿಸದೆ ಹಲವಾರು ಪ್ರಚಾರಕರು, ಕಾರ್ಯಕರ್ತರು ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಭಾಗಿಯಾಗಿದ್ದರು.
ಮಾಸ್ಕ್ ಧರಿಸದೇ ಇರುವುದಕ್ಕೆ ತೇಜಸ್ವಿ ಸೂರ್ಯಗೆ ದಂಡ ವಿಧಿಸಿದ್ದೀರಾ? - ಹೈಕೋರ್ಟ್ ಪ್ರಶ್ನೆ

ಮಾಸ್ಕ್‌ ಧರಿಸದ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ರಾಜಕೀಯ ನಾಯಕರ, ಚಲನಚಿತ್ರ ತಾರೆಯರ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಕೋವಿಡ್‌ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕೆಂದು ಕೋರಿದ ಲೆಟ್ಸ್ಕಿಟ್‌ ಫೌಂಡೇಶನ್‌ ಅರ್ಜಿಯನ್ನು ಅಭಯ್‌ ಓಕಾ ಹಾಗೂ ಜಸ್ಟೀಸ್‌ ಎಸ್‌ ವಿಶ್ವಜಿತ್ ಶೆಟ್ಟಿ ಅವರನ್ನು ಒಳಗೊಂಡ ದ್ವಿಸದಸ್ಯ ವಿಭಾಗೀಯ ಪೀಠ ಆಲಿಸಿತು.

ಮಾಸ್ಕ್ ಧರಿಸದೇ ಇರುವುದಕ್ಕೆ ತೇಜಸ್ವಿ ಸೂರ್ಯಗೆ ದಂಡ ವಿಧಿಸಿದ್ದೀರಾ? - ಹೈಕೋರ್ಟ್ ಪ್ರಶ್ನೆ
ಬೆಂಗಳೂರು ಕುರಿತ ಅವಹೇಳನಕಾರಿ ಹೇಳಿಕೆ: ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ

ಉಪಚುನಾವಣೆ ಪ್ರಚಾರದ ಸಂಧರ್ಭದಲ್ಲಿ ಕೋವಿಡ್‌ ಮಾನದಂಡಗಳನ್ನು ಪಾಲಿಸದೆ ಹಲವಾರು ಪ್ರಚಾರಕರು, ಕಾರ್ಯಕರ್ತರು ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಭಾಗಿಯಾಗಿದ್ದರು. ಈ ಕುರಿತು ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲ ರಮೇಶ್ ಪುತ್ತಿಗೆ ಅವರ ಮೂಲಕ ಲೆಟ್ಸ್ಕಿಟ್‌ ಫೌಂಡೇಶನ್ ಪ್ರತಿಭಟನಾ ಅರ್ಜಿ ಸಲ್ಲಿಸಿತ್ತು.

ಮಾಸ್ಕ್ ಧರಿಸದೇ ಇರುವುದಕ್ಕೆ ತೇಜಸ್ವಿ ಸೂರ್ಯಗೆ ದಂಡ ವಿಧಿಸಿದ್ದೀರಾ? - ಹೈಕೋರ್ಟ್ ಪ್ರಶ್ನೆ
ಬೆಂಗಳೂರಲ್ಲಿ ಸದ್ಯಕ್ಕಿಲ್ಲ NIA ವಿಭಾಗ: ತೇಜಸ್ವಿ ಸೂರ್ಯಗೆ ಮುಖಭಂಗ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೋವಿಡ್‌ ನಿರ್ವಹಣೆಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನಗಳನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಸಾಮಾಜಿಕ ದೂರ ಕಾಪಡದ ಒಬ್ಬನೇ ಒಬ್ಬ ಪ್ರಸಿದ್ಧ ವ್ಯಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ, ಆದರೆ ಸಾಮಾನ್ಯ ನಾಗರಿಕರಿಂದ ದಂಡ ವಸೂಲಿ ಮಾಡುತ್ತಿದೆ ಎಂದು ಅರ್ಜಿದಾರ ಪರ ವಕೀಲ ನ್ಯಾಯಪೀಠದ ಎದುರು ವಾದ ಮಂಡಿಸಿದ್ದಾರೆ.

ಮಾಸ್ಕ್‌ ಧರಿಸದ ಸಂಸತ್‌ ಸದಸ್ಯ (ತೇಜಸ್ವಿ ಸೂರ್ಯ) ಹಾಗೂ ಇತರೆ ರಾಜಕೀಯ ನಾಯಕರಿಂದ ದಂಡ ಸಂಗ್ರಹಿಸಿದ್ದೀರಾ? ನೀವು ಯಾವ ಸಂದೇಶಗಳನ್ನು ನೀಡಲು ಬಯಸುತ್ತೀರಿ ಎಂದು ಕೋರ್ಟ್‌ ಕೇಳಿದೆ.

ಮಾಸ್ಕ್ ಧರಿಸದೇ ಇರುವುದಕ್ಕೆ ತೇಜಸ್ವಿ ಸೂರ್ಯಗೆ ದಂಡ ವಿಧಿಸಿದ್ದೀರಾ? - ಹೈಕೋರ್ಟ್ ಪ್ರಶ್ನೆ
ತೇಜಸ್ವಿ ಸೂರ್ಯ ವಿರುದ್ಧ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ HM ವೆಂಕಟೇಶ್

ತೇಜಸ್ವಿ ಸೂರ್ಯ ಅವರ ಮೆರವಣಿಗೆಯು ಚಿಕ್ಕಜಾಲಾ ಟೋಲ್‌ಗೇಟ್‌ನಿಂದ ಮಲ್ಲೇಶ್ವರಂ ವರೆಗೆ ಸಾಗಿದೆ. ಈ ಸಂಧರ್ಭದಲ್ಲಿ ಅವರು ಸಾಮಾಜಿಕ ಅಂತರವನ್ನು ಉಲ್ಲಂಘಿಸಿಲ್ಲ, ತೇಜಸ್ವಿಯ ಚಿತ್ರವನ್ನು ಎಲ್ಲಿ ಸೆರೆ ಹಿಡಿಯಲಾಗಿದೆ ಎಂದು ಸರ್ಕಾರ ಪರ ವಕೀಲ ವಿಕ್ರಮ್‌ ಹುಯಿಲ್‌ಗೋಲ್‌ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸೆಪ್ಟೆಂಬರ್ 29 ರಂದು ನಡೆದ ರ್ಯಾಲಿಯ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಮಾಸ್ಕ್‌ ಧರಿಸಿದ್ದರು ಎಂದು ಪೊಲೀಸ್ ಉಪ ಆಯುಕ್ತರು (ಅಪರಾಧ) ಹೇಗೆ ಹೇಳಬಹುದು ಎಂದು ನ್ಯಾಯಪೀಠ ಆಶ್ಚರ್ಯಪಟ್ಟಿದೆ. ರ್ಯಾಲಿಯು ಚಿಕ್ಕಜಲಾ ಟೋಲ್ ಗೇಟ್‌ನಿಂದ ಪ್ರಾರಂಭವಾಗಿ ಮಲ್ಲೇಶ್ವರಂ ವರೆಗೆ ಪ್ರಯಾಣಿಸಿದೆ ಎಂದು ಡಿಸಿಪಿ (ಈಶಾನ್ಯ) ಕಳುಹಿಸಿದ ಇನ್ಪುಟ್ ಆಧರಿಸಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ ಎಂದು ಸರ್ಕಾರಿ ವಕೀಲ ವಿಕ್ರಮ್ ಹುಯಿಲ್ಗೋಲ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ಮಾಸ್ಕ್ ಧರಿಸದೇ ಇರುವುದಕ್ಕೆ ತೇಜಸ್ವಿ ಸೂರ್ಯಗೆ ದಂಡ ವಿಧಿಸಿದ್ದೀರಾ? - ಹೈಕೋರ್ಟ್ ಪ್ರಶ್ನೆ
ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರಬಿಂದು: ತೇಜಸ್ವಿ ಸೂರ್ಯ

ಚಿತ್ರಗಳಲ್ಲಿ ಸಂಸದ ತೇಜಸ್ವಿ ಸೂರ್ಯ ಮಾಸ್ಕ್‌ ಧರಿಸದಿರುವುದು ಕಂಡು ಬಂದಿದ್ದಾಗಿಯೂ ಪೊಲೀಸರು ಮಾಸ್ಕ್‌ ಧರಿಸಿರುವುದಾಗಿ ಹೇಗೆ ಹೇಳುತ್ತಾರೆ ಎಂದು ಕೋರ್ಟ್‌ ಪ್ರಶ್ನಿಸಿದೆ. ಅಲ್ಲದೆ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಚುನಾವಣಾ ರ್ಯಾಲಿಗಳನ್ನು ನಡೆಸಲು ಎಷ್ಟು ಅನುಮತಿಗಳನ್ನು ನೀಡಲಾಗಿದೆ ಎಂಬುದರ ಬಗ್ಗೆ ನ್ಯಾಯಪೀಠ ರಾಜ್ಯ ಸರ್ಕಾರವನ್ನು ಕೇಳಿದೆ. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ನವೆಂಬರ್ 9 ರಂದು ಈ ವಿಷಯವನ್ನು ನಿಗದಿಪಡಿಸಿದೆ.

ಮಾಸ್ಕ್ ಧರಿಸದೇ ಇರುವುದಕ್ಕೆ ತೇಜಸ್ವಿ ಸೂರ್ಯಗೆ ದಂಡ ವಿಧಿಸಿದ್ದೀರಾ? - ಹೈಕೋರ್ಟ್ ಪ್ರಶ್ನೆ
ಮುಳುವಾದ ತೇಜಸ್ವಿ ಸೂರ್ಯ ʼಮಹಿಳಾ ವಿರೋಧಿʼ ಟ್ವೀಟ್;‌ ಟ್ವಿಟ್ಟರ್‌ನಿಂದಲೇ ಮುಕ್ತಿ ಕೊಡಿಸಿದ ಕೇಂದ್ರ ಸರಕಾರ

ತೇಜಸ್ವಿ ಸೂರ್ಯ ಮಾಸ್ಕ್‌ ಧರಿಸದೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವುದು ಇದೇ ಮೊದಲಲ್ಲ. ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ಬೆಂಗಳೂರಿಗೆ ಮೊದಲ ಬಾರಿ ಬಂದಾಗಲೂ ಮಾಸ್ಕ್‌ ಧರಿಸದೆ ಸಭೆಯಲ್ಲಿ ಪಾಲ್ಗೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com