ಕಾಫಿ ಬೆಳೆಗಾರರಿಗೆ ವಂಚನೆ ಆರೋಪ: ಕೆಫೆ ಕಾಫಿ ಡೇ ಮಾಳವಿಕಾ ಸಿದ್ದಾರ್ಥಗೆ ಬಂಧನ ಭೀತಿ

ಚೆಕ್‌ ಅಮಾನ್ಯವಾದ ವಿಚಾರಕ್ಕೆ ಸಂಬಂದಪಟ್ಟಂತೆ 12ಕ್ಕೂ ಹೆಚ್ಚು ದೂರುಗಳು ಮೂಡಿಗೆರೆ ಜೆಎಂಎಫ್‌ಸಿಯಲ್ಲಿ ದಾಖಲಾಗಿದ್ದರೆ, ಚಿಕ್ಕಮಗಳೂರಿನ ಜೆಎಂಎಫ್‌ಸಿಯಲ್ಲಿ ಐದಕ್ಕೂ ದೂರುಗಳು ಹೆಚ್ಚು ದಾಖಲಾಗಿವೆ.
ಕಾಫಿ ಬೆಳೆಗಾರರಿಗೆ ವಂಚನೆ ಆರೋಪ: ಕೆಫೆ ಕಾಫಿ ಡೇ ಮಾಳವಿಕಾ ಸಿದ್ದಾರ್ಥಗೆ ಬಂಧನ ಭೀತಿ

ಕಾಫಿ ಬೆಳೆಗಾರರಿಗೆ 100 ಕೋಟಿ ಬಾಕಿ ಕೊಡದೇ ವಂಚಿಸಿರುವ ಪ್ರಕರಣದಲ್ಲಿ ಸಿದ್ದಾರ್ಥ ಹೆಗ್ಡೆ ಪತ್ನಿ ಮಾಜಿ ಮುಖ್ಯ ಮಂತ್ರಿ ಎಸ್ ಎಂ ಕೃಷ್ಣ ಪುತ್ರಿ ಮಾಳವಿಕ ಸೇರಿದಂತೆ 8 ಮಂದಿಗೆ ಈಗ ಬಂಧನ‌‌ ಭೀತಿ ಎದುರಾಗಿದೆ. ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್‌ನ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಮಾಳವಿಕಾ ಅವರ ಬಂಧನಕ್ಕೆ ಜಾಮೀನುರಹಿತ ವಾರೆಂಟ್‌ ಆದೇಶವನ್ನು ಜಿಲ್ಲೆಯ ಮೂಡಿಗೆರೆ ಜೆಎಂಎಫ್‌ಸಿ ಹೊರಡಿಸಿದೆ.

ಇವರೊಂದಿಗೆ ಜಯರಾಜ್‌ ಸಿ. ಹುಬ್ಳಿ, ಸದಾನಂದ ಪೂಜಾರಿ, ನಿತಿನ್‌ ಬಾಗ್ಮನೆ, ಕಿರೀಟಿ ಸಾವಂತ್‌, ಜಾವಿದ್‌ ಪರ್ವಿಜ್‌ ಅವರ ಬಂಧನಕ್ಕೂ ವಾರಂಟ್ ನೀಡಲಾಗಿದೆ. 300 ಕ್ಕೂ ಅಧಿಕ ಕಾಫಿ ಬೆಳೆಗಾರರಿಗೆ ಸುಮಾರು 100 ಕೋಟಿ ರೂ ಸಿದ್ದಾರ್ಥ ಕಂಪನಿಯು ಬಾಕಿ ಕೊಡಬೇಕಾಗಿತ್ತು. ಈ ವೇಳೆ ಕಂಪನಿಯ ಪರವಾಗಿ ಅನೇಕ ಬೆಳೆಗಾರರಿಗೆ ನೀಡಲಾಗಿದ್ದ ಚೆಕ್ ಕೂಡ ಬೌನ್ಸ್ ಆಗಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಂಪನಿಯ ಪರವಾಗಿ ದಿನಾಂಕ ಅಂತ್ಯ ಗೊಂಡಿರುವ ಚೆಕ್ ಪಡೆದುಕೊಂಡ ಹೊಸ ಚೆಕ್ ಗಳನ್ನೂ ಕೂಡ ನೀಡಲು ಮಾಳವಿಕ ಮತ್ತು ಕಂಪನಿಯ ನಿರ್ದೇಶಕರು ನಿರಾಕರಿಸಿದರು. ಕಂಪನಿ ಧೋರಣೆ ಖಂಡಿಸಿ ಕಾಫಿ ಬೆಳೆಗಾರ ಕೆ ನಂದೀಶ್ ಸೇರಿದಂತೆ 12 ಹೆಚ್ಚು ಮಂದಿ ಚಿಕ್ಕಮಗಳೂರಿನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಮೊರೆ ಹೋಗಿ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿದ್ದರು.

ಕಾಫಿ ಬೆಳೆಗಾರರಿಗೆ ವಂಚನೆ ಆರೋಪ: ಕೆಫೆ ಕಾಫಿ ಡೇ ಮಾಳವಿಕಾ ಸಿದ್ದಾರ್ಥಗೆ ಬಂಧನ ಭೀತಿ
ಸಾಲದ ಬೃಹತ್ ಪಿರಮಿಡ್ ಮೇಲಿತ್ತು ಸಿದ್ಧಾರ್ಥ ಕಟ್ಟಿದ ಕೆಫೇ ಕಾಫಿ ಡೇ

ನ್ಯಾಯಾಲಯವು ಈಗ ಮಾಳವಿಕ ಸೇರಿದಂತೆ 8 ಜನರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ. ಇದರಿಂದಾಗಿ ಮಾಳವಿಕಗೆ ಬಂಧನ ಭೀತಿ ಎದುರಾಗಿದೆ. ಚೆಕ್‌ ಅಮಾನ್ಯವಾದ ವಿಚಾರಕ್ಕೆ ಸಂಬಂದಪಟ್ಟಂತೆ 12ಕ್ಕೂ ಹೆಚ್ಚು ದೂರುಗಳು ಮೂಡಿಗೆರೆ ಜೆಎಂಎಫ್‌ಸಿಯಲ್ಲಿ ದಾಖಲಾಗಿದ್ದರೆ, ಚಿಕ್ಕಮಗಳೂರಿನ ಜೆಎಂಎಫ್‌ಸಿಯಲ್ಲಿ ಐದಕ್ಕೂ ದೂರುಗಳು ಹೆಚ್ಚು ದಾಖಲಾಗಿವೆ.

ಕಾಫಿ ಬೆಳೆಗಾರರಿಗೆ ವಂಚನೆ ಆರೋಪ: ಕೆಫೆ ಕಾಫಿ ಡೇ ಮಾಳವಿಕಾ ಸಿದ್ದಾರ್ಥಗೆ ಬಂಧನ ಭೀತಿ
ಕೆಫೆ ಕಾಫಿ ಡೇ ಖಾತೆಯಿಂದ 2 ಸಾವಿರ ಕೋಟಿ ರೂಪಾಯಿ ʼನಾಪತ್ತೆʼ!?

ಕಳೆದ ವರ್ಷ ಜುಲೈನಲ್ಲಿ ಸಿದ್ದಾರ್ಥ ಅವರು ಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹಾಗಿ ಆತ್ಮಹತ್ಯೆ ಮಾಡಿಕೊಂಡದ್ದರು. ಕಾಫಿ ಡೇ ಸಂಸ್ಥೆಯಲ್ಲಿ ಹಣದ ಅವ್ಯವಹಾರವೂ ನಡೆದಿತ್ತೆಂಬುದರ ಕುರಿತಾಗಿ ತನಿಖಾ ಸಂಸ್ಥೆಗಳು ವರದಿಯನ್ನೂ ನೀಡಿದ್ದವು. ಈಗ ಸಿದ್ದಾರ್ಥ ಕುಟುಂಬಕ್ಕೆ ಹೊಸ ಕಂಟಕ ಎದುರಾಗಿದ್ದು, ಇದರ ವಿರುದ್ದ ಹೈಕೋರ್ಟ್‌ ಮೆಟ್ಟಿಲೇರುವ ನಿರ್ಧಾರ ಮಾಡಿದ್ದಾರೆಂದು ವರದಿಯಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com