ಸಿಬಿಐನಿಂದ ವಿನಯ್‌ ಕುಲಕರ್ಣಿ ಬಂಧನ; ಧಾರವಾಡದಲ್ಲಿ ತೀವ್ರ ವಿಚಾರಣೆ

ಸಿಬಿಐ ಅಧಿಕಾರಿಗಳು, ಈ ಪ್ರಕರಣದ ತನಿಖಾಧಿಕಾರಿಯಾಗಿದ್ದ ಚೆನ್ನಕೇಶವ ಅವರಿಗೆ ಕೂಡಾ ಸಮನ್ಸ್‌ ನೀಡಿದ್ದಾರೆ.
ಸಿಬಿಐನಿಂದ ವಿನಯ್‌ ಕುಲಕರ್ಣಿ ಬಂಧನ; ಧಾರವಾಡದಲ್ಲಿ ತೀವ್ರ ವಿಚಾರಣೆ

2016ರಲ್ಲಿ ನಡೆದ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯ ಯೊಗೀಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಸಚಿವ ವಿನಯ್‌ ಕುಲಕರ್ಣಿಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಧಾರವಾಡದ ಸಬ್‌ಅರ್ಬನ್‌ ಪೊಲೀಸ್‌ ಠಾಣೆಯಲ್ಲಿ ಸತತ ಐದು ಗಂಟೆಗಳಿಂದ ಅವರ ವಿಚಾರ ನಡೆಯುತ್ತಿದೆ.

ಜೂನ್‌ 15, 2016ರಂದು ಯೊಗೀಶ್‌ಗೌಡ ಗೌಡರ್‌ ಅವರನ್ನು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ಸಂದರ್ಭದಲ್ಲಿ ಕೊಲೆಗೈಯಲಾಗಿತ್ತು. ಯೊಗೀಶ್‌ ಗೌಡ ಅವರ ಅಣ್ಣ ಗುರುನಾಥಗೌಡ ಅವರ ದೂರಿನ ಆಧಾರದ ಮೇಲೆ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನು ಕೂಡಾ ನಾಶಪಡಿಸಲಾಗುತ್ತಿದೆ ಎಂದು ಗುರುನಾಥ ಅವರು ಆರೋಪಿಸಿದ್ದರು.

ಯೊಗೀಶ್‌ಗೌಡ ಗೌಡರ್‌
ಯೊಗೀಶ್‌ಗೌಡ ಗೌಡರ್‌

ಅಂದಿನ ಕಾಂಗ್ರೆಸ್‌ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ನೀಡಲು ಒಪ್ಪಿರಲಿಲ್ಲ. ಈ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಳೆದ ವರ್ಷ ಸಪ್ಟೆಂಬರ್‌ ತಿಂಗಳಲ್ಲಿ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈಗ ಸಿಬಿಐ ಅಧಿಕಾರಿಗಳು ವಿನಯ್‌ ಕುಲಕರ್ಣಿ ಅವರನ್ನು ಬಂಧಿಸಿದ್ದು, ಇವರೊಂದಿಗೆ ವಿನಯ್‌ ತಮ್ಮ ವಿಜಯ್‌ ಕುಲಕರ್ಣಿ ಅವರನ್ನು ಕೂಡಾ ವಿಚಾರಿಸಲಾಗುತ್ತಿದೆ. ಇವರಿಬ್ಬರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಲ್ಡರ್‌ ಶ್ರೀಪಾಟೀಲ ಅವರನ್ನು ಕೂಡಾ ಮೂರು ತಾಸಿನ ವಿಚಾರಣೆಯ ನಂತರ ಬಿಟ್ಟು ಕಳುಹಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಧಾರವಾಡದ ನ್ಯಾಯಾಲಯಕ್ಕೆ 2020ರ ಮೇ ತಿಂಗಳಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಚಾರ್ಜ್‌ಶೀಟ್‌ನಲ್ಲಿ, ಧಾರವಾಡ, ರಾಮನಗರ, ಮಂಡ್ಯ, ಕೊಡಗು ಮತ್ತು ಬೆಂಗಳೂರು ಮೂಲದ ಎಂಟು ಜನರ ಹೆಸರನ್ನು ನಮೂದಿಸಲಾಗಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com