DYSP ಗಣಪತಿ ಆತ್ಮಹತ್ಯೆ ಪ್ರಕರಣ: ಕೆ ಜೆ ಜಾರ್ಜ್‌ ನಿರಪರಾಧಿ ಎಂದ ಹೈಕೋರ್ಟ್‌

ಮಾಜಿ ಸಚಿವ ಜಾರ್ಜ್‌ ಅವರ ವಿರುದ್ದ ದಾಖಲಾಗಿದ್ದ ಎಲ್ಲಾ ದೂರುಗಳು ಮತ್ತು ಜಾರಿಯಲ್ಲಿದ್ದ ವಿಚಾರಣೆಯನ್ನು ರದ್ದುಗೊಳಿಸಿ ಹೈಕೋರ್ಟ್‌ ತೀರ್ಪು ನೀಡಿದೆ.
DYSP ಗಣಪತಿ ಆತ್ಮಹತ್ಯೆ ಪ್ರಕರಣ: ಕೆ ಜೆ ಜಾರ್ಜ್‌ ನಿರಪರಾಧಿ ಎಂದ ಹೈಕೋರ್ಟ್‌

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಹೈಕೋರ್ಟ್‌ ಕೆ ಜೆ ಜಾರ್ಜ್‌ ಅವರನ್ನು ನಿರಪರಾಧಿ ಎಂದು ಘೋಷಿಸಿದೆ. ಈ ಹಿಂದೆಯೇ ಸಿಬಿಐ ಕೆ ಜೆ ಜಾರ್ಜ್‌ ಅವರ ವಿರುದ್ದ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಬಿ ರಿಪೋರ್ಟ್‌ ದಾಖಲಿಸಿತ್ತು.

ಜಸ್ಟೀಸ್‌ ಜಾನ್‌ ಮೈಕಲ್‌ ಡಿಕುನ್ಹಾ ಅವರಿದ್ದ ಏಕಸದಸ್ಯಾ ಪೀಠವು ಈ ತೀರ್ಪನ್ನು ನೀಡಿದೆ. “ಈ ಪ್ರಕರಣದಲ್ಲಿ ಕೆ ಜೆ ಜಾರ್ಜ್‌ ಅವರು ನಿರಪರಾಧಿಯಾಗಿದ್ದು, ಅವರ ವಿರುದ್ದ ಸುಳ್ಳು ಆರೋಪಗಳನ್ನು ಹೊರಿಸಲಾಗಿತ್ತು,” ಎಂದು ಜಾರ್ಜ್‌ ಅವರ ವಿರುದ್ದ ದಾಖಲಾಗಿದ್ದ ಎಲ್ಲಾ ದೂರುಗಳು ಮತ್ತು ಜಾರಿಯಲ್ಲಿದ್ದ ವಿಚಾರಣೆಯನ್ನು ರದ್ದುಗೊಳಿಸಿ ಹೈಕೋರ್ಟ್‌ ತೀರ್ಪು ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೆಲವು ವಾರಗಳ ಹಿಂದೆ ಸಿಬಿಐ ನೀಡಿದ ಬಿ ರಿಪೋರ್ಟ್‌ ಅನ್ನು ಪ್ರಶ್ನಿಸಿ ಕೆ ಜೆ ಜಾರ್ಜ್‌ ಅವರ ಕುಟುಂಬಸ್ಥರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಹೈಕೋರ್ಟ್‌ ಆದೇಶ ನೀಡಿರುವುದರಿಂದ ದೂರಿನ ವಿಚಾರಣೆಯು ರದ್ದಾಗಲಿದೆ.

DYSP ಗಣಪತಿ ಆತ್ಮಹತ್ಯೆ ಪ್ರಕರಣ: ಕೆ ಜೆ ಜಾರ್ಜ್‌ ನಿರಪರಾಧಿ ಎಂದ ಹೈಕೋರ್ಟ್‌
ಗಣಪತಿ ಆತ್ಮಹತ್ಯೆಗೆ ಜಾರ್ಜ್ ಕಾರಣರಲ್ಲ, ಡಿಪ್ರೆಶನ್ ಕಾರಣ: ಸಿಬಿಐ ರಿಪೋರ್ಟ್‌

ನಡೆದ ಘಟನೆ ಏನು?

2016 ಜುಲೈ 7ರಂದು ಡಿವೈಎಸ್‌ಪಿ ಗಣಪತಿ ಅವರು ಕೊಡಗಿನ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ, ತಮ್ಮ ಹಿರಿಯ ಅಧಿಕಾರಿಗಳಾದ ಪ್ರಣವ್‌ ಮೊಹಾಂತಿ ಮತ್ತು ಎ ಎಂ ಪ್ರಸಾದ್‌ ಅವರು ಹಾಗೂ ಅಂದಿನ ಗೃಹ ಸಚಿವರಾದ ಕೆ ಜೆ ಜಾರ್ಜ್‌ ಅವರು ತಮಗೆ ಕಿರುಕುಳ ನೀಡಿದ್ದಾಗಿ ಹೇಳಿಕೊಂಡಿದ್ದರು. ಸಂದರ್ಶನದ ನಂತರ ವಿನಾಯಕ ಲಾಡ್ಜ್‌ನ ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

DYSP ಗಣಪತಿ ಆತ್ಮಹತ್ಯೆ ಪ್ರಕರಣ: ಕೆ ಜೆ ಜಾರ್ಜ್‌ ನಿರಪರಾಧಿ ಎಂದ ಹೈಕೋರ್ಟ್‌
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ; ಮತ್ತೆ ವಿಚಾರಣೆ ನಡೆಸಲು ಕೋರ್ಟ್ ಅನುಮತಿ

ಗಣಪತಿಯವರ ಸಾವು, ರಾಜ್ಯಾದ್ಯಂತ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ದ ಕಿಡಿಯನ್ನು ಹೊತ್ತಿಸಿತ್ತು. ಇದರ ರಾಜಕೀಯ ಲಾಭ ಪಡೆಯಲು ಬಿಜೆಪಿಯು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿತ್ತು. ಹೆಚ್ಚಿದ ವಿರೋಧ ಪಕ್ಷದ ಒತ್ತಡದಿಂದ ಜಾರ್ಜ್‌ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಿದ್ದರು. ಈ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿತ್ತು. ಸಿಐಡಿ ಜಾರ್ಜ್‌ ಅವರಿಗೆ ಕ್ಲೀನ್‌ ಚಿಟ್‌ ನೀಡಿತ್ತು.

2017ರಲ್ಲಿ ಸುಪ್ರಿಂ ಕೋರ್ಟ್‌ ಮೊರೆ ಹೋಗಿದ್ದ ಗಣಪತಿ ಅವರ ತಂದೆಯ ಅರ್ಜಿಯನ್ನು ಪುರಸ್ಕರಿಸಿ, ಈ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ನೀಡಲು ಆದೇಶ ಹೊರಡಿಸಿತ್ತು. ಸಿಬಿಐ ಕೂಡಾ ವಿಸ್ತೃತವಾದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಿ-ರಿಪೋರ್ಟ್‌ ಸಲ್ಲಿಸಿತ್ತು.

Attachment
PDF
Order Copy.pdf
Preview

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com