ಹಿರಿಯ ಕಲಾವಿದ ಎಚ್ ಜಿ ಸೋಮಶೇಖರ್ ರಾವ್ ಇನ್ನಿಲ್ಲ

ಲೇಖಕರಾಗಿಯೂ ಸೋಮಶೇಖರ್ ಅವರು ಜನಪ್ರಿಯರು. ಅಂಕಣ ಬರಹಗಳೂ ಸೇರಿದಂತೆ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಹಿರಿಯ ಕಲಾವಿದ ಎಚ್ ಜಿ ಸೋಮಶೇಖರ್ ರಾವ್ ಇನ್ನಿಲ್ಲ
ಫೋಟೋ: ಪ್ರಗತಿ ಅಶ್ವತ್ಥ ನಾರಾಯಣ

ರಂಗಭೂಮಿ, ಸಿನಿಮಾ, ಕಿರುತೆರೆ ನಟ ಎಚ್.ಜಿ.ಸೋಮಶೇಖರ್ ರಾವ್ (86) ಇಂದು ಮಧ್ಯಾಹ್ನ ಅಗಲಿದ್ದಾರೆ. ಚಿತ್ರದುರ್ಗ ಅವರ ಹುಟ್ಟೂರು. ಸೋಮಶೇಖರ್ ರಾವ್ ಮೂಲತಃ ಹವ್ಯಾಸಿ ರಂಗಭೂಮಿ ಕಲಾವಿದ. ಭಾರತ ಹಾಗೂ ಪಾಶ್ಚಿಮಾತ್ಯ ದೇಶಗಳ ಹತ್ತಾರು ಜನಪ್ರಿಯ ರಂಗಕೃತಿಗಳ ಕನ್ನಡ ಅವತರಣಿಕೆಗಳ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇವರು ಕ್ಯಾಮರಾ ಎದುರಿಸಿದ ಮೊದಲ ಸಿನಿಮಾ ‘ಹೃದಯ ಸಂಗಮ’ (1972). ಸಾವಿತ್ರಿ, ಪ್ರೇಮ, ಕಾಮನಬಿಲ್ಲು, ನಾಳೆಗಳನ್ನು ಮಾಡುವವರು, ಆಕ್ಸಿಡೆಂಟ್, ಸುಂದರ ಸ್ವಪ್ನಗಳು, ಮಿಥಿಲೆಯ ಸೀತೆಯರು, ಹರಕೆಯ ಕುರಿ, ತಾಯಿ ಸಾಹೇಬ ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳು, ಹಲವು ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿದ್ದಾರೆ. ‘ಹರಕೆಯ ಕುರಿ’ ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿಗೆ (1992-93) ಪಾತ್ರರಾಗಿದ್ದಾರೆ.

ಲೇಖಕರಾಗಿಯೂ ಅವರು ಜನಪ್ರಿಯರು. ಅಂಕಣ ಬರಹಗಳೂ ಸೇರಿದಂತೆ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಸೋಮಣ್ಣನ ಸ್ಟಾಕ್‌ನಿಂದ’ ಅವರ ಅನುಭವ ಕಥಾನಕ. ಸೋಮಶೇಖರ ರಾವ್ ಕೆನರಾ ಬ್ಯಾಂಕ್‌ನಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com