RR ನಗರದಲ್ಲಿ 45.24%, ಶಿರಾದಲ್ಲಿ 82.31% ಮತದಾನ

ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಎರಡು ವಿಧಾನಸಭಾ ಕ್ಷೇತ್ರಗಳ ಚುನಾವಣೆ ಮುಕ್ತಾಯವಾಗಿದ್ದು, ಶಿರಾದಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಂಡಿದ್ದಾರೆ. ಆರ್‌ ಆರ್‌ ನಗರ ಕ್ಷೇತ್ರದ ಅರ್ಧದಷ್ಟು ಮತದಾರರೂ ಮತದಾನದಲ್ಲಿ ಭಾಗವಹಿಸದಿರುವುದು ನಿರಾಶದಾಯಕ.
RR ನಗರದಲ್ಲಿ 45.24%, ಶಿರಾದಲ್ಲಿ 82.31% ಮತದಾನ

ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಗೆ ಮತದಾನ ಪ್ರಕ್ರಿಯೆ ಮುಗಿದಿದೆ. ನವೆಂಬರ್‌ 10 ರಂದು ಮತ ಎಣಿಕೆ ನಡೆಯಲಿದ್ದು ಫಲಿತಾಂಶ ಹೊರ ಬೀಳಲಿದೆ.

ಜೆಡಿಎಸ್‌ ಶಾಸಕ ಬಿ ಸತ್ಯನಾರಾಯಣ ಅವರ ಸಾವಿನಿಂದ ತೆರವಾದ ಶಿರಾ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಸತ್ಯನಾರಾಣ ಅವರ ಪತ್ನಿ ಸ್ಪರ್ಧಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ನಿಂದ ಕ್ರಮವಾಗಿ ಡಾ. ರಾಕೇಶ್‌ ಗೌಡ ಹಾಗೂ ಮಾಜಿ ಸಚಿವ ಟಿಬಿ ಜಯಚಂದ್ರ ಸ್ಪರ್ಧಿಸಿದ್ದಾರೆ. ಶಿರಾದಲ್ಲಿ ಒಟ್ಟು 15 ಮಂದಿ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ದಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಸಂಜೆ 6 ರ ಒಳಗೆ ಬಂದ ಮತದಾರರಿಗಷ್ಟೇ ಮತ ಚಲಾಯಿಸಲು ಅವಕಾಶ ನೀಡಿದ್ದಾರೆ ಅಧಿಕಾರಿಗಳು. ಸರಿಯಾಗಿ ಸಂಜೆ 6 ರ ವೇಳೆಗೆ ಮತಗಟ್ಟೆಗಳ ಪ್ರವೇಶ ದ್ವಾರವನ್ನು ಮುಚ್ಚಿದ ಅಧಿಕಾರಿಗಳು, ಇವಿಎಂ ಯಂತ್ರಗಳನ್ನು ನಿಗದಿತ ಸ್ಥಳಗಳಿಗೆ ಕೊಂಡು ಹೋದರು.

ಶಿರಾ ಕ್ಷೇತ್ರದಲ್ಲಿ ಬೆಳಿಗ್ಗೆ 9 ರ ಹೊತ್ತಿಗೆ 8.25% ಮತದಾನ ನಡೆದಿದ್ದು, 11 ಗಂಟೆಗೆ 23.63%, 1 ಗಂಟೆಗೆ 44.13% , 3 ಗಂಟೆಗೆ 62.1%, 5 ಗಂಟೆ ವೇಳೆಗೆ 77.34% ಮತದಾನ ಆಗಿದೆ. ಒಟ್ಟು 82.31 % ಮತದಾರರು ಶಿರಾ ಕ್ಷೇತ್ರದಲ್ಲಿ ಮತ ಚಲಾಯಿಸಿದ್ದಾರೆ.

ಕಾಂಗ್ರೆಸ್‌ ಶಾಸಕರಾಗಿದ್ದ ಮುನಿರತ್ನ ರಾಜಿನಾಮೆಯೊಂದಿಗೆ ತೆರವುಗೊಂಡ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮುನಿರತ್ನ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ದಿವಂಗತ ಅಧಿಕಾರಿ ಡಿಕೆ ರವಿಯವರ ಪತ್ನಿ ಕುಸುಮಾ ಕಾಂಗ್ರೆಸ್‌ ಮೂಲಕ ಸ್ಪರ್ಧಿಸಿದ್ದಾರೆ. ಜೆಡಿಎಸ್‌ ವಿ ಕೃಷ್ಣಮೂರ್ತಿಯವರನ್ನು ಕಣಕ್ಕಿಳಿಸಿದೆ. ಒಟ್ಟು 16 ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಚುನಾವಣೆ ಎದುರಿಸಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ಮತದಾನ ಪ್ರಮಾಣ ತೀರಾ ಕಡಿಮೆಯಾಗಿದ್ದು, ಬೆಳಗ್ಗೆ 9 ರ ವೇಳೆಗೆ 6.27% ಮತದಾರರು ಮತ ಚಲಾಯಿಸಿದ್ದಾರೆ. 11 ರ ವೇಳೆಗೆ 14.44%, ಮಧ್ಯಾಹ್ನ 1 ರ ವೇಳೆಗೆ 26.58% ಮತದಾರರು ಮತ ಚಲಾಯಿಸಿದರೆ, 3 ರ ವೇಳೆಗೆ 32.41%, ಸಂಜೆ 5 ರ ವೇಳೆಗೆ 39.15 ಶೇಕಡಾ ಮತದಾರರಷ್ಟೇ ಮತ ಚಲಾಯಿಸಿದ್ದಾರೆ. ಇಡೀ ಆರ್‌ ಆರ್‌ ನಗರದ 45.24% ಮತದಾರರಷ್ಟೇ ತಮ್ಮ ಮತ ಹಕ್ಕು ಚಲಾಯಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com