ಉಪಚುನಾವಣೆ ಬಹಿರಂಗ ಪ್ರಚಾರ ಮುಕ್ತಾಯ: ಬಿಬಿಎಂಪಿಯಿಂದ ಸಿದ್ದತಾ ಕಾರ್ಯ ಆರಂಭ

ಕರೋನಾ ಇರುವ ಮತದಾರು ಬಂದ್ರೆ ಅವರಿಗೂ ಪಿಪಿಇ ಕಿಟ್ ಗಳನ್ನ ಧರಿಸಿ‌ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ಅವರು ತಿಳಿಸಿದ್ದಾರೆ.
ಉಪಚುನಾವಣೆ ಬಹಿರಂಗ ಪ್ರಚಾರ ಮುಕ್ತಾಯ: ಬಿಬಿಎಂಪಿಯಿಂದ ಸಿದ್ದತಾ ಕಾರ್ಯ ಆರಂಭ

ಆರ್ ಆರ್ ನಗರ ಚುನಾವಣೆಯ ಹಿನ್ನಲೆ ಇಂದು ಸಂಜೆ ಆರು ಗಂಟೆಗೆ ಚುನಾವಣಾ ಪ್ರಚಾರ ಅಂತ್ಯವಾಗಾಲಿದ್ದು ಚುನಾವಣೆಗೆ ಬೇಕಾದ ಸಕಲ ಸಿದ್ದತೆಗಳನ್ನು ಚುನಾವಣಾ ಅಧಿಕಾರಿಗಳು ಮಾಡಿಕೊಂಡಿದ್ದಾರೆ.

ಚುನಾವಣಾ ವೇಳೆ ಅಹಿತಕರ ಘಟನೆ ನಡೆಯದಂತೆ ಪೋಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಆರ್ ಆರ್ ನಗರ ಚುನಾವಣೆ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಕಳೆದ ಒಂದು ತಿಂಗಳಿನಿಂದಲೂ ಅಬ್ಬರದ ಪ್ರಚಾರವನ್ನು ರಾಜಕೀಯ ಪಕ್ಷಗಳು ಮಾಡುತ್ತಿದೆ.

ಹೀಗಾಗಿ ಚುನಾವಣೆಗೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು, ಚುನಾವಣೆ ಸಂಧರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಿಲು ಬಿಬಿಎಂಪಿ ಸಾಕಷ್ಟು ಕ್ರಮ ಕೈಗೊಂಡಿದೆ ಎಂದು ಪತ್ರಿಕಾಗೊಷ್ಟಿಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ. ಪೋಲೀಸ್ ಕಮಿಷನರ್ ಕಮಲ್‌ ಪಂಥ್ ಕೂಡಾ ಪತ್ರಿಕಾಗೋಷ್ಟಿಯಲ್ಲಿ ಭಾಗಿಯಾಗಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪತ್ರಿಕಾ ಗೋಷ್ಟಿಯಲ್ಲಿ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್ ಮಾತನಾಡಿ ಆರ್ ಆರ್ ಚುನಾವಣೆಯಲ್ಲಿ ಪ್ರಚಾರದ ಅವಧಿ ಇಂದು ಸಂಜೆ 6 ಗಂಟೆಗೆ ಮುಗಿಯುತ್ತಿದ್ದು, 6 ಗಂಟೆಯ ನಂತರ ಯಾವುದೇ ಮತಪ್ರಚಾರ ಮಾಡುವಂತಿಲ್ಲ.ಒಂದು ವೇಳೆ ಮತಪ್ರಚಾರ ಮಾಡಿದ್ದೇ ಆದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು.‌ ಆರ್ ಆರ್ ನಗರ ಸ್ಥಳೀಯರನ್ನ ಹೊರತು ಪಡಿಸಿ‌ ಬೇರೆಯಡೆಯಿಂದ ಜನರು ಯಾರು ಬರಬಾರದು. ಈಗಾಗಲೇ ಆರ್ ಆರ್ ನಗರದಲ್ಲಿ 8 ಹೆಚ್ಚಳ ವಾರ್ಡ್ ಗಳಿದ್ದು ಅವುಗಳಿಗೆ ತಕ್ಕಂತೆ 9 ತಂಡ ರಚಿಸಲಾಗಿದೆ. 39 ಜನರ ಮಾರ್ಷಲ್ಸ್ ಗಳ ತಂಡವನ್ನ ಕೂಡ ರಚಿಸಲಾಗಿದೆ. 56 ಸೆಕ್ಟರ್ ಆಫಿಸರ್ಸ್ ಇರುತ್ತಾರೆ. ಈಗಾಗಲೇ ಹೆಚ್ಚಿನ ವಾಹನ ತಪಾಸಣೆ ಮಾಡಲಾಗುತ್ತಿದೆ. ಹೆಚ್ಚಿ‌ನ ಜನಸಂದಣಿ ಇರುವ ಕಡೆ ಅಗತ್ಯ ಕ್ರಮವಹಿಸಲಾಗುತ್ತಿದ್ದು 144 ಸೆಕ್ಷನ್‌ ಜಾರಿಯಲ್ಲಿರುತ್ತದೆ ಎಂದಿದ್ದಾರೆ.

ಈಗಾಗಲೇ ಆರ್ ಆರ್ ನಗರದ ವ್ಯಾಪ್ತಿಯ ಸುತ್ತಾಮುತ್ತಾ ಮಧ್ಯ ನಿಷೇಧ‌ ಮಾಡಲಾಗಿದೆ. ಮತದಾನಕ್ಕೆ ಬರುವ ಪ್ರತಿಯೊಬ್ಬರಿಗೂ ಸ್ಕ್ರೀನಿಂಗ್, ಟೆಸ್ಟ್ಂಗ್, ಮಾಡಲಾಗುತ್ತಿದೆ. ಪ್ರತಿಯೊಂದು ಮತದಾನದ ಕೇಂದ್ರಕ್ಕೂ ಆರೋಗ್ಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣೆಗೆ ಸಿಬ್ಬಂದಿಗಳಿಗಾಗಿ 175 ಬಿಎಂಟಿಸಿ ಬಸ್ ಗಳನ್ನ ಅಳವಡಿಕೆ ಮಾಡಿಕೊಳ್ಳಲಾಗಿದೆ. ಇನ್ನು ಕರೋನಾ ಇರುವ ಮತದಾರು ಬಂದ್ರೆ ಅವರಿಗೂ ಪಿಪಿಇ ಕಿಟ್ ಗಳನ್ನ ಧರಿಸಿ‌ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಪೋಲೀಸ್ ಕಮಿಷನರ್ ಕಮಲ್ ಪಂಥ್ 21 ದಿನದ ಚುನಾವಣಾ ಪ್ರಚಾರದ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಆರ್ ಆರ್ ನಗರ ವ್ಯಾಪ್ತಿಯಲ್ಲಿ 678 ಮತಗಟ್ಟೆಗಳಿದ್ದು ಪ್ರತಿಯೊಂದು ಮತಕೇಂದ್ರವನ್ನು ನೋಡಿಕೊಳ್ಳಲು ಅಧಿಕಾರಿಗಳನ್ನು ನೇಮಿಸಲಾಗಿದೆ. ಸೆಕ್ಟರ್ ಮೊಬೈಲ್ ಅಳವಡಿಸಲಾಗಿದ್ದು, 91 ಚೀತಾ ಪೋಲೀಸರು ಕೆಲಸ ನಿರ್ವಹಿಸಲಿದ್ದಾರೆ. 19 ಕೆಎಸ್ಆರ್ ಪಿ ಹಾಗೂ 20 ಸಿಟಿ ಮಹಿಳಾ ಅಧಿಕಾರಿಗಳನ್ನ ನೇಮಿಸಲಾಗಿದೆ. ಇಂದು ಸಂಜೆ 6 ಗಂಟೆಯ ನಂತರ ಯಾರೇ ಸಮಸ್ಯೆಯನ್ನು ಮಾಡಿದರೂ ಕೂಡ ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಂದು ಸಂಜೆ ಆರು ಗಂಟೆಯಿಂದ ನವೆಂಬರ್ 3 ಗಂಟೆಯ ಮಧ್ಯರಾತ್ರಿಯವರೆಗೂ ಮದ್ಯ ನಿಷೇದಿಸಲಾಗಿದೆ ಎಂದಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com