ಚಲನಚಿತ್ರ ನಟರು ಸಾಮಾಜಿಕ ಕಾರ್ಯಕರ್ತರಾಗುವ ಸಾಮರ್ಥ್ಯ ಹೊಂದಿಲ್ಲ - ಚೇತನ್

ಯಶಸ್ವಿ ಚಲನಚಿತ್ರ ನಟನಾಗಲು, ಸ್ವಲ್ಪ ಪ್ರತಿಭೆ, ಸ್ವಲ್ಪ ಕಠಿಣ ಪರಿಶ್ರಮ, ಮತ್ತು ಸಾಕಷ್ಟು ಅದೃಷ್ಟ ಬೇಕು. ಆದರೆ, ಉತ್ತಮ ಸಾಮಾಜಿಕ ಕಾರ್ಯಕರ್ತರಾಗಲು, ದೊಡ್ಡ ಪ್ರಮಾಣದಲ್ಲಿ ಕಾಳಜಿ, ಆಲೋಚನೆ, ನೈತಿಕತೆ ಮತ್ತು ಧೈರ್ಯ ಅಗತ್ಯವಿದೆ
ಚಲನಚಿತ್ರ ನಟರು ಸಾಮಾಜಿಕ ಕಾರ್ಯಕರ್ತರಾಗುವ ಸಾಮರ್ಥ್ಯ ಹೊಂದಿಲ್ಲ - ಚೇತನ್

;ಸಾಮಾಜಿಕ ಕಾರ್ಯಕರ್ತರಾಗಲು ಚಲನಚಿತ್ರ ನಟರು ಬಯಸುವುದಿಲ್ಲವಾದ್ದರಿಂದ ಪ್ರಮುಖ ವಿಷಯಗಳ ಬಗ್ಗೆ ಅವರು ಚರ್ಚಿಸಲು ಬಯಸದೆ ಮೌನವಹಿಸುತ್ತಾರೆ ಎಂದು ಕನ್ನಡದ ಚಲನಚಿತ್ರ ತಾರೆ, ಸಾಮಾಜಿಕ ಹೋರಾಟಗಾರ ಚೇತನ್‌ ಹೇಳಿದ್ದಾರೆ.

ಚಲನಚಿತ್ರ ನಟರು ಸಾಮಾಜಿಕ ಕಾರ್ಯಕರ್ತರಾಗುವ ಸಾಮರ್ಥ್ಯ ಹೊಂದಿಲ್ಲ - ಚೇತನ್
ಆನ್ಲೈನ್ ಜೂಜಿಗೆ ಜಾಹಿರಾತು: ಸ್ಟಾರ್ ನಟರ ವಿರುದ್ಧ ಪ್ರಶ್ನೆಯೆತ್ತಿದ ಚೇತನ್

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜಕೀಯ ಆಗುಹೋಗುಗಳಿಗೆ, ಸಾಮಾಜಿಕ ಸಮಸ್ಯೆಗಳಿಗೆ ಚಲನಚಿತ್ರ ತಾರೆಯರು ಸಾಕಷ್ಟು ಸ್ಪಂದಿಸದೆ ಇರುವುದರ ಕುರಿತಂತೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿ ಸ್ವತಃ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡಿರುವ ಚೇತನ್‌ ತನ್ನ ಸಹವರ್ತಿಗಳ ಮೌನದ ವಿರುದ್ಧ ಮಾತೆತ್ತಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿರುವ ಚೇತನ್‌, “ಚಲನಚಿತ್ರ ನಟರು ಪ್ರಮುಖ ವಿಷಯಗಳ ಬಗ್ಗೆ ಮೌನವಾಗಿರುತ್ತಾರೆ, ಏಕೆಂದರೆ ಅವರು 'ಸಾಮಾಜಿಕ ಕಾರ್ಯಕರ್ತʼ ಆಗಲು ಬಯಸುವುದಿಲ್ಲ” ಎಂದಿದ್ದಾರೆ.

ಚಲನಚಿತ್ರ ನಟರು ಸಾಮಾಜಿಕ ಕಾರ್ಯಕರ್ತರಾಗುವ ಸಾಮರ್ಥ್ಯ ಹೊಂದಿಲ್ಲ - ಚೇತನ್
ದಲಿತ ವಕೀಲನ ಕೊಲೆಗೆ ಕಾರಣವಾದ ಬ್ರಾಹ್ಮಣ್ಯ ಭಯೋತ್ಪಾದನೆಯನ್ನು ವಿರೋಧಿಸಿ – ನಟ ಚೇತನ್

ʼʼಯಶಸ್ವಿ ಚಲನಚಿತ್ರ ನಟನಾಗಲು, ಸ್ವಲ್ಪ ಪ್ರತಿಭೆ, ಸ್ವಲ್ಪ ಕಠಿಣ ಪರಿಶ್ರಮ, ಮತ್ತು ಸಾಕಷ್ಟು ಅದೃಷ್ಟ ಬೇಕು. ಆದರೆ, ಉತ್ತಮ ಸಾಮಾಜಿಕ ಕಾರ್ಯಕರ್ತ ಆಗಲು, ದೊಡ್ಡ ಪ್ರಮಾಣದಲ್ಲಿ ಕಾಳಜಿ, ಆಲೋಚನೆ, ನೈತಿಕತೆ ಮತ್ತು ಧೈರ್ಯ ಅಗತ್ಯವಿದೆ. ಚಲನಚಿತ್ರ ನಟರು ಉತ್ತಮ ಸಾಮಾಜಿಕ ಕಾರ್ಯಕರ್ತರಾಗುವ ಸಾಮರ್ಥ್ಯವನ್ನು ಹೊಂದಿಲ್ಲ, reel ಮತ್ತು real ಪ್ರತ್ಯೇಕವಾಗಿ ಇಡಬೇಕು ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದ ಮಟ್ಟಿಗೆ ಸಾಮಾಜಿಕ, ರಾಜಕೀಯ ಹೋರಾಟದಲ್ಲಿ ತೊಡಗಿರುವ ನಟ ಚೇತನ್‌, ಮಹಿಳಾ ಹಕ್ಕು, ದೀನ-ದಲಿತರ ದೌರ್ಜನ್ಯಗಳ ವಿರುದ್ಧ ದನಿಯೆತ್ತುತ್ತಲೇ ಬಂದಿರುವ ಚೇತನ್‌, ತಮ್ಮ ಹೋರಾಟಗಳ ಮೂಲಕವೇ ಹೆಚ್ಚು ಸುದ್ದಿಯಲ್ಲಿದ್ದಾರೆ.

ಚಲನಚಿತ್ರ ನಟರು ಸಾಮಾಜಿಕ ಕಾರ್ಯಕರ್ತರಾಗುವ ಸಾಮರ್ಥ್ಯ ಹೊಂದಿಲ್ಲ - ಚೇತನ್
ಸಾವರ್ಕರ್ 'ಮಹಾನ್' ಅಲ್ಲ, 'ದೇಶಭಕ್ತ' ಅಲ್ಲ; ನಟ ಚೇತನ್

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com