ಶಿರಾ: ಮತದಾರರನ್ನು ಓಲೈಸಲು ಬಿಜೆಪಿಯಿಂದ ಆಮೀಷ; ಕಾಂಗ್ರೆಸ್‌ನಿಂದ ದೂರು ದಾಖಲು

ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರೆ ಮಾತ್ರ ಕ್ಷೇತ್ರಕ್ಕೆ ಅನುದಾನ ಲಭಿಸುತ್ತದೆ. ಇಲ್ಲದಿದ್ದರೆ ಕ್ಷೇತ್ರಕ್ಕೆ ಅನುದಾನ ಸಿಗುವುದಿಲ್ಲ, ಎಂದು ಬಿಜೆಪಿ ಕಾರ್ಯಕರ್ತರು ಹೇಳಿರುವ ವೀಡಿಯೋವನ್ನು ಕಾಂಗ್ರೆಸ್‌ ಸಾಕ್ಷ್ಯವಾಗಿ ನೀಡಿದೆ
ಶಿರಾ: ಮತದಾರರನ್ನು ಓಲೈಸಲು ಬಿಜೆಪಿಯಿಂದ ಆಮೀಷ; ಕಾಂಗ್ರೆಸ್‌ನಿಂದ ದೂರು ದಾಖಲು

ಶಿರಾ ಉಪಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಪಡುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವಿನ ತೀವ್ರ ಹಣಾಹಣಿಯಲ್ಲಿ ಬಿಜೆಪಿ ಕೂಡಾ ಮತದಾರರಿಗೆ ಆಮೀಷ ಒಡ್ಡಿಯಾದರೂ ಮತವನ್ನು ಪಡೆಯುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಆಮೀಷ ಒಡ್ಡುವ ವೀಡಿಯೋ ಒಂದು ಬಿಡುಗಡೆಯಾಗಿದ್ದು, ಇದರ ವಿರುದ್ದ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಶಿರಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್‌ ಗೌಡ ಅವರು ಮತದಾರರಿಗೆ ಆಮೀಷ ಒಡ್ಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ದೂರು ಸಲ್ಲಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೂರಿನೊಂದಿಗೆ ಈ ಕೆಳಗಿನ ವೀಡಿಯೋವನ್ನು ಕೂಡಾ ಸಾಕ್ಷಿಯಾಗಿ ಸಲ್ಲಿಸಲಾಗಿದೆ.

ಕಾಂಗ್ರೆಸ್‌ ಸಲ್ಲಿಸಿದ ವೀಡಿಯೋದಲ್ಲಿ ವ್ಯಕ್ತಿಯೋರ್ವ ಶಿರಾದಲ್ಲಿ ಮತ ಪ್ರಚಾರ ಮಾಡುವಾಗ, ʼಅರಶಿಣ-ಕುಂಕುಮʼದ ಹೆಸರಿನಲ್ಲಿ ಜನರಿಗೆ ಆಮೀಷ ಒಡ್ಡುತ್ತಿರುವುದು ಕಾಣಿಸುತ್ತಿದೆ. ಮಾತನಾಡುವ ವ್ಯಕ್ತಿಯ ಚಹರೆ ಸ್ಪಷ್ಟವಾಗಿ ಕಾಣಿಸದಿದ್ದರೂ, “ಶಾಸಕ ಪ್ರೀತಂ ಗೌಡ ಹೇಳಿದ ಕಾರಣಕ್ಕೆ ಅರಶಿಣ-ಕುಂಕುಮ ನೀಡುತ್ತಿದ್ದೇವೆ,” ಎಂದು ಹೇಳಿರುವುದು ಸ್ಪಷ್ಟವಾಗಿ ಕೇಳಿಸುತ್ತಿದೆ.

ಇದರೊಂದಿಗೆ, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದರೆ ಮಾತ್ರ ಕ್ಷೇತ್ರಕ್ಕೆ ಅನುದಾನ ಲಭಿಸುತ್ತದೆ. ಇಲ್ಲದಿದ್ದರೆ ಕ್ಷೇತ್ರಕ್ಕೆ ಅನುದಾನ ಸಿಗುವುದಿಲ್ಲ. ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ ಹಾಘಾಗಿ ಕೇವಲ ಬಿಜೆಪಿಗೆ ಮಾತ್ರ ಮತ ನೀಡಬೇಕು ಎಂದು ವೀಡಿಯೋದಲ್ಲಿನ ವ್ಯಕ್ತಿ ಹೇಳುತ್ತಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com