ಬೆಂಗಳೂರು: ಬೈಕ್ ಸ್ಟಂಟ್ ಮಾಡಿ ಎರಡನೇ ಬಾರಿ ಸಿಕ್ಕಿಬಿದ್ದರೆ ಎರಡು ಲಕ್ಷ ದಂಡ!

ಸ್ಟಂಟ್ ಸವಾರರ ಕಾರಣದಿಂದಾಗಿ ಹೆಚ್ಚುತ್ತಿರುವ ಅಪಘಾತಗಳ ಕುರಿತು ಪೊಲೀಸ್ ಆಯುಕ್ತ ಕಮಲ್ ಪಂತ್ ಅಧ್ಯಕ್ಷತೆ ವಹಿಸಿದ ಸಭೆಯ ಬಳಿಕ ಕಠಿಣ ದಂಡ ವಿಧಿಸುವ ಈ ನಿರ್ಧಾರಗಳು ಬಂದಿದೆ.
ಬೆಂಗಳೂರು: ಬೈಕ್ ಸ್ಟಂಟ್ ಮಾಡಿ ಎರಡನೇ ಬಾರಿ ಸಿಕ್ಕಿಬಿದ್ದರೆ ಎರಡು ಲಕ್ಷ ದಂಡ!

ಬೆಂಗಳೂರಿನಲ್ಲಿ ಬೈಕ್‌ ಸವಾರರು ನಡೆಸುವ ಅಕ್ರಮ ಸ್ಟಂಟ್‌ಗಳನ್ನು ನಿಯಂತ್ರಿಸುವ ಪಣ ತೊಟ್ಟಿರುವ ನಗರ ಸಂಚಾರ ಪೊಲೀಸ್‌ ಪಡೆ, ಬೈಕ್‌ ಸ್ಟಂಟ್‌ ನಡೆಸಿ ಮೊದಲ ಬಾರಿಗೆ ಸಿಕ್ಕಿಬಿದ್ದ ಅಪರಾಧಿಗಳು ಸಿಆರ್‌ಪಿಸಿ ಸೆಕ್ಷನ್ 107 ರ ಅಡಿಯಲ್ಲಿ ಪೊಲೀಸ್ ಆಯುಕ್ತರ ಮುಂದೆ ಮುಚ್ಚಳಿಕೆ ಪತ್ರ ನೀಡಬೇಕಾಗುತ್ತದೆ. ಅಂತೆಯೇ, ಎರಡನೇ ಬಾರಿಗೆ ಸ್ಟಂಟ್‌ಗಳನ್ನು ಮಾಡಿ ಸಿಕ್ಕಿಬಿದ್ದ ಬೈಕ್ ಸವಾರರಿಗೆ ದಂಡವನ್ನು 2 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಮೊದಲು, ಇಂತಹ ಅಪರಾಧಿಗಳಿಗೆ ನ್ಯಾಯಾಲಯದಲ್ಲಿ 2000 ರೂ. ದಂಡ ವಿಧಿಸಲಾಗುತ್ತಿತ್ತು ಮತ್ತು ಪೊಲೀಸರು ತಮ್ಮ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲು ಶಿಫಾರಸು ಮಾಡಬಹುದಿತ್ತು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗುತ್ತಿತ್ತು. ಅದೇ ರೀತಿ, ಇನ್ನು ಮುಂದೆ ತಮ್ಮ ಬೈಕ್‌ ಸೈಲೆನ್ಸರ್‌ಗಳನ್ನು ಮಾರ್ಪಡಿಸಿ ಎರಡನೇ ಬಾರಿ ಸಿಕ್ಕಿಬಿದ್ದರೆ 50,000 ರೂ.ಗಳ ದಂಡ ವಿಧಿಸಲಾಗುತ್ತದೆ. ಈ ಸೈಲೆನ್ಸರ್‌ಗಳನ್ನು ಮಾರ್ಪಡಿಸುವ ಗ್ಯಾರೇಜ್ ಮಾಲೀಕರಿಗೆ ಕೂಡಾ ದಂಡ ವಿಧಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ತಿಳಿಸಿದೆ.

ಪೊಲೀಸರು ಇಂತಹ 28 ಬೈಕ್ ಸ್ಟಂಟರ್‌ಗಳನ್ನು ಹಿಡಿದಿದ್ದಾರೆ ಮತ್ತು ತಲಾ 2 ಲಕ್ಷ ರೂ.ಗಳ ಬಾಂಡ್‌ಗೆ ಸಹಿ ಹಾಕಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ನಾಲ್ಕು ಗ್ಯಾರೇಜ್ ಮಾಲೀಕರನ್ನೂ ಕೂಡಾ ಸಿಆರ್‌ಪಿಸಿ ಸೆಕ್ಷನ್ 110 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

“ಸ್ಟಂಟ್ ಮತ್ತು ಡ್ರ್ಯಾಗ್ ರೇಸಿಂಗ್‌ ನಡೆಸಿದ 48 ಬೈಕ್ ಸವಾರರನ್ನು ಹಿಡಿದು ಐಪಿಸಿ (ಇಂಡಿಯನ್ ದಂಡ ಸಂಹಿತೆ) ಸೆಕ್ಷನ್ 279 (ವೇಗದ ಮತ್ತು ನಿರ್ಲಕ್ಷ್ಯದ ಚಾಲನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವುಗಳಲ್ಲಿ, ಜನಸಂದಣಿಯ ಸ್ಥಳಗಳಲ್ಲಿ ಸಾಹಸ ಪ್ರದರ್ಶಿಸುವ ಮೂಲಕ ಇತರರ ಪ್ರಾಣವನ್ನು ಪಣಕ್ಕಿಟ್ಟಿದ್ದಕ್ಕಾಗಿ 28 ಮಂದಿಯನ್ನು ಸಿಆರ್‌ಪಿಸಿಯ ಸೆಕ್ಷನ್ 107 ರ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಸಂಚಾರ ಪೊಲೀಸ್ ಜಂಟಿ ಆಯುಕ್ತ ರವಿಕಾಂತ ಗೌಡ ತಿಳಿಸಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಈ ಸ್ಟಂಟ್ ಸವಾರರ ಕಾರಣದಿಂದಾಗಿ ಹೆಚ್ಚುತ್ತಿರುವ ಅಪಘಾತಗಳ ಕುರಿತು ಪೊಲೀಸ್ ಆಯುಕ್ತ ಕಮಲ್ ಪಂತ್ ಅಧ್ಯಕ್ಷತೆ ವಹಿಸಿದ ಸಭೆಯ ಬಳಿಕ ಕಠಿಣ ದಂಡ ವಿಧಿಸುವ ಈ ನಿರ್ಧಾರಗಳು ಬಂದಿದೆ.

ಇದಕ್ಕೂ ಮೊದಲು, ಟ್ರಾಫಿಕ್ ಪೊಲೀಸರು ಮಾರ್ಪಡಿಸಿದ, ದೊಡ್ಡ ಶಬ್ದಗಳನ್ನು ಉಂಟುಮಾಡುವ ಸೈಲೆನ್ಸರ್ ವಿರುದ್ಧ ದಾಳಿ ನಡೆಸಿದರು. ಮೋಟಾರು ವಾಹನ ಕಾಯ್ದೆಯ ಪ್ರಕಾರ, ವಾಹನದ ಸೈಲೆನ್ಸರ್ 80 ಡೆಸಿಬಲ್ ಶಬ್ದವನ್ನು ಉತ್ಪಾದಿಸಿದರೆ ಅದು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಪರಿಗಣಿಸಲಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com