ಭಾರೀ ಮಳೆಗೆ ಮನೆಗೆ ನುಗ್ಗಿದ ನೀರು; ಸ್ವಚ್ಛಗೊಳಿಸುವುದರಲ್ಲಿ ಹೈರಾಣಾದ ಜನತೆ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭೀಮಾನದಿಯ ಪ್ರವಾಹ ಹೊಡೆತಕ್ಕೆ ಕಡಬೂರ ಗ್ರಾಮ ತತ್ತರಿಸಿದೆ.
ಭಾರೀ ಮಳೆಗೆ ಮನೆಗೆ ನುಗ್ಗಿದ ನೀರು; ಸ್ವಚ್ಛಗೊಳಿಸುವುದರಲ್ಲಿ ಹೈರಾಣಾದ ಜನತೆ

ಕಳೆದ ವಾರ ಸುರಿದ ಭಾರೀ ಮಳೆಗೆ ಉತ್ತರ ಕರ್ನಾಟಕದ ಹಲವು ಕಡೆ ನೆರೆ ಪರಿಸ್ಥಿತಿ ಉಂಟಾಗಿತ್ತು. ಕಲಬುರಗಿ ಜಿಲ್ಲೆಯ ಕಾಳಗಿ‌ ತಾಲ್ಲೂಕಿನ ತೆಂಗಳಿ ಗ್ರಾಮದಲ್ಲಿ ಅತಿಯಾದ ಮಳೆಯಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಭೀಮಾನದಿಯ ಪ್ರವಾಹ ಹೊಡೆತಕ್ಕೆ ಕಡಬೂರ ಗ್ರಾಮ ತತ್ತರಿಸಿದೆ. ಮನೆಗಳಿಗೆ ಕೆಸರು-ನೀರು ತುಂಬಿದ್ದು, ನೀರು ಇಳಿದ ಮೇಲೆ ಕೆಸರು ತೆಗೆಯುವದರಲ್ಲಿ ಗ್ರಾಮಸ್ಥರು ಹೈರಾಣಾಗಿದ್ದಾರೆ.

ಈ ನಡುವೆ ಸಂತ್ರಸ್ತರಿಗೆ ನಿರ್ಮಿಸಿದ ಗಂಜಿ ಕೇಂದ್ರಗಳಲ್ಲಿ ಊಟ ಸಿಗುತ್ತಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ. ನೆರೆ ಸಂತ್ರಸ್ತರ ಕಷ್ಟ ಆಲಿಸಲು ಮುಖ್ಯಮಂತ್ರಿ ಸ್ಥಳಕ್ಕೆ ಬಾರದಿರುವುದು ಕೂಡಾ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದೆ. ಕರೋನಾ ಕಾರಣವಿಟ್ಟುಕೊಂಡು ಮುಖ್ಯಮಂತ್ರಿ ನೆರೆ ಪರಿಸ್ಥಿತಿ ವೀಕ್ಷಿಸಲು ತೆರಳಿಲ್ಲ ಎನ್ನಲಾಗಿದೆ. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಯಸ್ಸಾಗಿದ್ದರೆ ರಾಜಿನಾಮೆ ಪಡೆದು ಮನೆಯಲ್ಲಿ ಕೂರಲಿ ಎಂದು ನೇರವಾಗಿಯೇ ಮುಖ್ಯಮಂತ್ರಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿರುವ ಗೋವಿಂದ ಖಾರಜೋಳರವರಿಗೆ ಕಲಬುರಗಿಯ ನೆರೆ ಸಂತ್ರಸ್ತರ ಕಷ್ಟ ಆಲಿಸಲು ಕರೋನಾ ಸುಸ್ತು ಕಾಡುತ್ತದೆ. ಚುನಾವಣೆಯಲ್ಲಿ ಭಾಗವಹಿಸಲು ಕರೋನಾ ಸುಸ್ತು ಕಾಡುತ್ತಿಲ್ಲ ಎಂದು ಜನರು ರಾಜಕಾರಣಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com