ನಾಡ ಹಬ್ಬ ದಸರಾಗೆ ಚಾಲನೆ: ಕರೋನಾ ವಾರಿಯರ್ಸ್‌ಗಳಿಗೆ ಸನ್ಮಾನ

ಮೈಸೂರು ಅರಮನೆಯಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ವಿರಾಜಮಾನಳಾದ ಶ್ರೀ ಚಾಮುಂಡೇಶ್ವರಿ ಮೂರ್ತಿಗೆ ಪುಶ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು.
ನಾಡ ಹಬ್ಬ ದಸರಾಗೆ ಚಾಲನೆ: ಕರೋನಾ ವಾರಿಯರ್ಸ್‌ಗಳಿಗೆ ಸನ್ಮಾನ

ನಾಡ ಹಬ್ಬ ದಸರಾಗೆ ಮೈಸೂರಿನಲ್ಲಿ ಚಾಲನೆ ದೊರೆತಿದೆ. ಕರೋನಾ ಸಂಕಷ್ಟದ ಕಾರಣ ಈ ಬಾರಿ ಸರಳವಾಗಿ ದಸರಾವನ್ನು ಆಚರಿಸಲಾಗುತ್ತಿದೆ. ಜಯದೇವ ಹೃದ್ರೋಗ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಿ ಎನ್ ಮಂಜುನಾಥ್ ಅವರು 410ನೇ ದಸನಾ ಸಂಭ್ರಮಕ್ಕೆ ಚಾಲನೆ ನೀಡಿದ್ದಾರೆ.

ಮೈಸೂರು ಅರಮನೆಯಲ್ಲಿ ಅಲಂಕೃತ ಬೆಳ್ಳಿ ರಥದಲ್ಲಿ ವಿರಾಜಮಾನಳಾದ ಶ್ರೀ ಚಾಮುಂಡೇಶ್ವರಿ ಮೂರ್ತಿಗೆ ಪುಶ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ನಂತರ ಕೋವಿಡ್ ಸಂದರ್ಭದಲ್ಲಿ ಜನ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಆರು ಜನ ಕರೋನಾ ವಾರಿಯರ್ಸ್‌ಗೆ ಸನ್ಮಾನ ಮಾಡಲಾಯಿತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಉದ್ಘಾಟನಾ ಭಾಷಣ ಮಾಡಿದ ಡಾ. ಸಿ ಎನ್‌ ಮಂಜುನಾಥ್‌, ನಾಡಹಬ್ಬವನ್ನು ಉದ್ಘಾಟಿಸಲು ವೈದ್ಯರೊಬ್ಬರನ್ನು ಆಯ್ಕೆ ಮಾಡಿದಕ್ಕಾಗಿ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗೆ ದನ್ಯವಾದ ತಿಳಿಸಿದ್ದಾರೆ. ಇದು ವೈದ್ಯಲೋಕಕ್ಕೆ ಸಂದ ಗೌರವವೆಂದ ಮಂಜುನಾಥ್‌, ಕರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ವಹಿಸಿದ ಕರೋನಾ ವಾರಿವರ್ಸ್‌ಗೆ ನೀಡಿದ ಬಹುದೊಡ್ಡ ಗೌರವ. ವೈಯಕ್ತಿಕವಾಗಿ ನನ್ನ ಜೀವನದಲ್ಲಿ ಸಿಕ್ಕ ಅತಿದೊಡ್ಡ ಗೌರವವೂ ಹೌದು. ಇದು ನನ್ನ ಪಾಲಿಗೆ ಅವಿಸ್ಮರಣೀಯ ಕ್ಷಣ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ, ಸಚಿವರಾದ ಬಿ ಸಿ ಪಾಟೀಲ್‌, ಎಸ್‌ ಟಿ ಸೋಮಶೇಖರ್‌, ಸಂಸದ ಪ್ರತಾಪ ಸಿಂಹ, ಶಾಸಕರಾದ ಎಸ್‌ ಎ ರಾಮದಾಸ್‌, ಹರ್ಷವರ್ಧನ್‌, ಎಲ್‌ ನಾಗೇಂದ್ರ, ಜಿ ಟಿ ದೇವೇಗೌಡ, ಅಡಗೂರು ವಿಶ್ವನಾಥ್‌, ಎನ್‌ ಮಹೇಶ್‌, ಮೇಯರ್‌ ತಸ್ನೀಂ ಮೊದಲಾದ ಪ್ರಮುಖರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಆರು ಮಂದಿ ಕರೋನಾ ವಾರಿಯರ್ಸ್‌ಗೆ ಸನ್ಮಾನ ಮಾಡಲಾಯಿತು.

ಸನ್ಮಾನಿತರು

  1. ರುಕ್ಮಿಣಿ – ಹಿರಿಯ ಶುಶ್ರೂಷಾಧಿಕಾರಿ

  2. ಮರಗಮ್ಮ – ಪೌರಕಾರ್ಮಿಕೆ

  3. ನೂರ್‌ ಜಾನ್‌ – ಆಶಾ ಕಾರ್ಯಕರ್ತೆ

  4. ಕುಮಾರ್‌ ಪಿ – ಪೊಲೀಸ್‌ ಕಾನ್‌ಸ್ಟೆಬಲ್‌

  5. ಅಯೂಬ್‌ ಅಹಮದ್‌ – ಸಮಾಜ ಸೇವಕ

  6. ಡಾ. ನವೀನ್‌ ಟಿ. ಆರ್‌ - ವೈದ್ಯಾಧಿಕಾರಿ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com