ಗಜೇಂದ್ರಗಡದ- ಹುಲ್ಲುಗಾವುಲು ಕಾಡಲ್ಲಿ ಮಖ್ಮಲ್ ಇರುವೆ ಅನುಕರಣೆ ಜೇಡ ಪತ್ತೆ

ಮಖ್ಮಲ್ ಇರುವೆಗಳ ತಲೆ ಮತ್ತು ಎದೆ ಭಾಗವು ಸ್ಪಷ್ಟವಾಗಿ ಬೆರ್ಪಟ್ಟಿದ್ದು ಈ ಸೂಕ್ಷ್ಮ ದೈಹಿಕ ವ್ಯತ್ಯಾಸ ಮತ್ತು ಕಾಲುಗಳ ರಚನೆಯಿಂದ ಮಾತ್ರ ಮಖ್ಮಲ್ ಅನುಕರಣೆ ಜೇಡವನ್ನು ಸ್ಪಷ್ಟವಾಗಿ ಗುರುತಿಸಬಹುದು
ಗಜೇಂದ್ರಗಡದ- ಹುಲ್ಲುಗಾವುಲು ಕಾಡಲ್ಲಿ ಮಖ್ಮಲ್ ಇರುವೆ ಅನುಕರಣೆ ಜೇಡ ಪತ್ತೆ

ಮಖ್ಮಲ್ ಇರುವೆ (ವೆಲ್ವೇಟ್ ಆ್ಯಂಟ): ಮ್ಯೂಟಿಲಿಡೇ ಕುಟುಂಬಕ್ಕೆ ಸೇರಿದ ಮ್ಯೂಟಿಲ್ಲಾ ಪ್ರಭೇದದ ಮಖ್ಮಲ್ ಇರುವೆ ಜಿಲ್ಲೆಯ ಶುಷ್ಕ ಹುಲ್ಲುಗಾವಲಿನ ಕಾಡುಗಳಲ್ಲಿ ಸಾಮಾನ್ಯವಾಗಿ ಹಂಚಿಕೆಯಾಗಿದ್ದು ಇವುಗಳ ಗಾತ್ರ ೬ ಮಿ.ಮಿ ಯಿಂದ ೨೦ ಮಿ.ಮಿ ಇರುತ್ತದೆ. ಇದರ ಆವಾಸದಲ್ಲೆಲ್ಲಾ ಮಖ್ಮಲ್ ಅನುಕರಣೆ ಜೇಡದ ಇರುವಿಕೆಯು ಪ್ರಥಮಬಾರಿಗೆ ದಾಖಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೊಯ್ನೋಪ್ಟೆಕ್ಟೈ‌ಸ್ ಪಲ್ಚೇರ್ ಹಗಲಲ್ಲಿ ಚಟುವಟಿಕೆಯಿಂದಿರುವ ಹೆಣ್ಣು ಮಖ್ಮಲ್ ಇರುವೆಯನ್ನು ಅನುಕರಿಸುವ ( ವೆಲ್ವೇಟ್ ಆ್ಯಂಟ ಮಿಮಿಕ್ ಸ್ಪೈಡರ್) ಕೋರಿನ್ನಿಡೇ ಕುಟುಂಬಕ್ಕೆ ಸೇರಿದ ವಿರಳಜೇಡ ಪ್ರಭೇದವಾಗಿದ್ದು ಗಜೇಂದ್ರಗಡದ ಬೆಟ್ಟದ ಶುಷ್ಕ ಅರಣ್ಯದಲ್ಲಿ ದಾಖಲಾಗಿದೆ. ಪರಿಸರ ಪ್ರಿಯರಾದ ಸಂಗಮೇಶ ಕಡಗದ, ಚಂದ್ರು ರಾಠೋಡ, ಶರಣು ಗೌಡರ, ಅನಿಲ ತಳವಾರ, ರಾಜು ಹಗ್ಗದ, ಮಲ್ಲಿಕಾರ್ಜುನ ಪಾಟೀಲ, ಚಂದ್ರು ಚವಡಿ ಮತ್ತು ಮಂಜುನಾಥ ಕಡಿವಾಲ ಇವರು ಚಾರಣಮಾಡುವಾಗ ಈ ಜೇಡವನ್ನು ಮಂಜುನಾಥ ಎಸ್ ನಾಯಕ ಇವರ ಮಾರ್ಗದರ್ಶನದಲ್ಲಿ ಪತ್ತೆಹಚ್ಚಿದ್ದಾರೆ. ಈ ಪ್ರಭೇದ ಜೇಡಗಳ ಹಂಚಿಕೆ ಶುಷ್ಕರಣ್ಯಗಳಲ್ಲಿ ಸಾಮಾನ್ಯವಾಗಿದ್ದು ಇವು ಯಾವಾಗಲು ಮಖ್ಮಲ್‌ಇರುವೆಯ ಆವಾಸಗಳಲ್ಲಿಯೇ ಬದುಕುತ್ತವೆ.

ಮಖ್ಮಲ್ ಇರುವೆ ಅನುಕರಣೆ ಜೇಡಗಳು ನೋಡಲು ಮಖ್ಮಲ್ ಇರುವೆ ಥರಾನೆ ಇರುತ್ತವೆ ಅಷ್ಟೆ ಅಲ್ಲದೆ ಚಲನವಲನವು ಸಹಾ ಇರುವೆಯಂತೆಯೆ ಇರುತ್ತದೆ. ಈ ಜಾತಿಯ ಗಂಡು ಜೇಡಗಳು ಗಾತ್ರವು 3.8 – 6 ಮಿ.ಮಿ ಇದ್ದು ಹೆಣ್ಣು ಜೇಡಗಳ ಗಾತ್ರ 3.95-12 ಮಿ.ಮಿ ಗಾತ್ರ ಇರುತ್ತದೆ. ತಲೆಭಾಗವು ಗಾಢ ಕೆಸರಿ ಬಣ್ಣದಿಂದ ಕೂಡಿದ್ದು ಹೊಟ್ಟೆ ಮತ್ತು ಬೆನ್ನು ತಿಳಿಕೆಸರಿ ಮತ್ತು ಕಪ್ಪು ಬಣ್ಣದಿಂದ ಕುಡಿದ್ದು ಬಿಳಿ ಚುಕ್ಕೆಗಳು ಇದರ ಸೌಂರ‍್ಯವನ್ನು ವೃದ್ಧಿಸಿವೆ. ಇಡಿ ದೆಹವು ಸೂಕ್ಷ್ಮ ರೋಮದಂತ ರಚನೆಗಳನ್ನು ಹೊಂದಿರುತ್ತದೆ. ಮಖ್ಮಲ್ ಇರುವೆಗಳ ತಲೆ ಮತ್ತು ಎದೆ ಭಾಗವು ಸ್ಪಷ್ಟವಾಗಿ ಬೆರ್ಪಟ್ಟಿದ್ದು ಈ ಸೂಕ್ಷ್ಮ ದೈಹಿಕ ವ್ಯತ್ಯಾಸ ಮತ್ತು ಕಾಲುಗಳ ರಚನೆಯಿಂದ ಮಾತ್ರ ಮಖ್ಮಲ್ ಅನುಕರಣೆ ಜೇಡವನ್ನು ಸ್ಪಷ್ಟವಾಗಿ ಗುರುತಿಸಬಹುದು. ಕೊಯ್ನೋಪ್ಟೆಕ್ಟೈ‌ಸ್ ಮಖ್ಮಲ್ ಇರುವೆಗಳನ್ನು ಅನುಕರಿಸುವ ಏಕೈಕ ಕುಲವಾಗಿದ್ದು ಭಾರತದ ಶುಷ್ಕ-ಬಂಡೆಮಿಶ್ರಿತ ಹುಲ್ಲುಗಾವಲಿನಿಂದ ಕೂಡಿದ ಆವಾಸದಲ್ಲಿ ಹಂಚಿಕೆಯಾಗಿವೆ. ಇವು ಪತಂಗ,ಚಿಟ್ಟೆ,ಕAಬಳಿ ಹುಳು,ನೋಣ,ಸೊಳ್ಳೆ ಇನ್ನಿತರ ಸಣ್ಣಪುಟ್ಟ ಕೀಟಗಳನ್ನು ಭಕ್ಷಿಸುವುದರ ಮೂಲಕ ಪರಿಸರ ಆಹಾರ ಸರಪಳೀಯ ಸಮತೋಲನದ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಈ ಜೇಡವು ಭಾರದಲ್ಲಿ 1991 ರಲ್ಲಿ ಪ್ರಥಮಬಾರಿಗೆ ತಮಿಳನಾಡಿನ ಶುಷ್ಕ ಅರಣ್ಯದಲ್ಲಿ ದಾಖಾಲಾಗಿದ್ದು, ನಂತರ ಕರ್ನಾಟದಲ್ಲಿ 2009 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಿರೂರಿನ ಅರಣ್ಯ ಪ್ರದೇಶದಲ್ಲಿ ದಾಖಲಾಸಲಾಯಿತು. ನಂತರ ಇದರ ಹಂಚಿಕೆಯ ಶೋಧ ಮುಂದೆವರೆದು ಮೈಸೂರಿನ ಇಂದ್ರಪ್ರಸ್ತದಲ್ಲಿನ ಡಾ|| ಅಭಿಜಿತ ಇವರ ನೈಸರ್ಗಿಕ ತೋಟದಲ್ಲಿ ದಾಖಲಿಸಲಾಯಿತು. ಇದೆ ಜಾತಿಯ ಜೇಡವು ಇತ್ತಿಚೆಗೆ ಗದಗ ಜಿಲ್ಲೆಯ ರೋಣ ತಾಲೂಕಿನ ಶಾಂತೇಶ್ವರ ಬೆಟ್ಟಶೇಣಿಗಳ ಕಾಡಲ್ಲಿ ಪತ್ತೆಹಚ್ಚಲಾಯಿತು. ಇದು ಜಾಗತಿಕವಾಗಿ ಭಾರತ, ಶ್ರೀಲಂಕಾ, ದಕ್ಷಿಣ ಆಪ್ರೀಕಾ, ತಾಂಜೆನಿಯಾ, ಈಥಿಯೋಪಿಯಾ ಅರಣ್ಯಗಳಲ್ಲಿ ಹಂಚಿಕೆಯಾಗಿದೆ. ಭಾರತದಲ್ಲಿ ತಮಿಳ್ನಾಡು, ಕೆರಳ, ಕರ್ನಾಟಕ, ಆಂದ್ರಪ್ರದೇಶ, ಮಹಾರಾಷ್ಟ್ರದ ಬೆಟ್ಟಗಳಶುಷ್ಕ ಅರಣ್ಯಗಳಲ್ಲಿ ಈ ಪ್ರಭೇಧ ಜೇಡಗಳು ಹಂಚಿಕೆಯಾಗಿವೆ. ಗದಗ ಜಿಲ್ಲೆಗೆ ಸಂಬಧಿಸಿದಹಾಗೆ ಈ ಜೇಡವು ಗಜೇಂದ್ರಗಡ, ಶಾಂತಗೇರಿಯ ಅನಂತಗೀರಿ ಬೆಟ್ಟಶೇಣಿಗಳಿಲ್ಲಿ ದಾಖಲಿಸಲಾಗಿದೆ.

ಮಂಜುನಾಥ ಎಸ್ ನಾಯಕ, ಜೀವ ವೈವಿಧ್ಯ ವಿಜ್ಞಾನಿ ಅವರ ಪ್ರಕಾರ, “ನಾನು ಗಜೇಂದ್ರಗಡ- ವಲಯ ನಾಗೇಂದ್ರಗಡಾ, ಶಾಂತಗೇರಿ, ಮುಶಿಗೇರಿ, ನೆಲ್ಲೂರ-ಪ್ಯಾಟಿ ಬೆಟ್ಟಶ್ರೇಣಿಗಳಲ್ಲಿ ಮತ್ತು ಹುಲ್ಲುಗಾವಲಿನ ಅರಣ್ಯಪ್ರದೇಶದಲ್ಲಿ 6-ವರ್ಷಗಳಿಂದ ವರ್ಷದ ನಾಲ್ಕು ಋತುಗಳಲ್ಲಿ ಸಂಶೋಧನೆಯ ಕಾರ್ಯ ಮಾಡುತ್ತಿದ್ದು ಇಲ್ಲಿಯವರೆಗೆ ಹಲವಾರು ವಿರಳ ಜೇಡ,ದುಂಬಿ,ಇರುವೆ ಮತ್ತು ವಿಶೇಷ ಅಪರೂಪದ ಔಷಧೀಯ ಸಸ್ಯಗಳ ದಾಖಲಿಕರಣ ಮಾಡಲಾಗಿದ್ದು ಇಲ್ಲಿಯ ಜೀವವೈಧ್ಯತೆಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ”.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com