ವರುಣಾಘಾತದಿಂದ ನಲುಗಿದ ಕಲ್ಯಾಣ ಕರ್ನಾಟಕ

ಭೀಮಾ ನದಿ ಮಟ್ಟ ಹೆಚ್ಚಾಗಿದ್ದು ಅದರ ತೀರದಲ್ಲಿರುವ ಕಲಬುರಗಿ, ಜೇವರ್ಗಿ, ಅಫಜಲಪುರ ಮತ್ತು ಚಿತ್ತಾಪುರ ತಾಲೂಕಿನ ನದಿ ಪಾತ್ರದ ಜನರಿಗೆ ರೆಡ್ ಅಲರ್ಟ್‌ ಘೋಷಿಸಲಾಗಿದ್ದು ಪ್ರವಾಹ ನಿಯಂತ್ರಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ವರುಣಾಘಾತದಿಂದ ನಲುಗಿದ ಕಲ್ಯಾಣ ಕರ್ನಾಟಕ

ಮಹಾರಾಷ್ಟ್ರದ ಉಜ್ಜೈನಿ ಮತ್ತು ವೀರಭಟ್ಕಲ ಜಲಾಶಯದಿಂದ ಭೀಮಾ ನದಿಗೆ ಹೆಚ್ಚು ನೀರು ಹರಿಸಿದ್ದರಿಂದ ಅಂದಾಜು 150 ಗ್ರಾಮಗಳಿಗೆ ಮುಳುಗಡೆ ಭೀತಿ ಎದುರಾಗಿದೆ. ಮಳೆ ಕೊಂಚ ಮಟ್ಟಿಗೆ ನಿಂತಿದೆ ಆದರೂ ಜಲಾಶಯದ ನೀರಿನ ಹರಿವು ಹೆಚ್ಚಾಗಿದ್ದರಿಂದ ಕಲ್ಯಾಣ ಕರ್ನಾಟಕ ನಲುಗಿ ಹೋಗಿದೆ. ಕಳೆದ ನಾಲ್ಕು ದಿನ ಭಾರಿ ಮಳೆಯಾಯಿತು ನಂತರ ಗುರುವಾರ ಬಹುತೇಕ ಭಾಗಗಳಲ್ಲಿ ಮಳೆ ನಿಂತಿದೆ.

ಭೀಮಾ ನದಿ ಮಟ್ಟ ಹೆಚ್ಚಾಗಿದ್ದು ಅದರ ತೀರದಲ್ಲಿರುವ ಕಲಬುರಗಿ, ಜೇವರ್ಗಿ, ಅಫಜಲಪುರ ಮತ್ತು ಚಿತ್ತಾಪುರ ತಾಲೂಕಿನ ನದಿ ಪಾತ್ರದ ಜನರಿಗೆ ರೆಡ್ ಅಲರ್ಟ್‌ ಘೋಷಿಸಲಾಗಿದ್ದು ಪ್ರವಾಹ ನಿಯಂತ್ರಿಸಲು ಜಿಲ್ಲಾಡಳಿತ ಸಜ್ಜಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇತ್ತ ರಾಯಚೂರು ಜಿಲ್ಲೆಯಲ್ಲಿ ಭತ್ತ, ಮೆಣಸಿನಕಾಯಿ ಮತ್ತು ಹತ್ತಿ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಯಾಗಿವೆ. ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು ನಾರಾಯಣಪುರದ ಬಸವ ಸಾಗರ ಹಾಗೂ ಸೊನ್ನಾ ಜಲಾಶಯ ಗಳೂ ಭರ್ತಿಯಾಗಿವೆ.

ಕಲಬುರಗಿಯ ಜಿಲ್ಲೆಯಲ್ಲಿ 1058 ಮನೆಗಳು ಕುಸಿದಿವೆ ಮತ್ತು 518 ಜಾನುವಾರಗಳು ಮೃತಪಟ್ಟಿವೆ ಮತ್ತು ಜಿಲ್ಲಾಡಳಿತವು ಒಟ್ಟು 48 ಗಂಜಿ ಕೇಂದ್ರಗಳನ್ನು ತೆರೆದು 7600 ಜನರಿಗೆ ಸೌಲಭ್ಯ ಒದಗಿಸಿದೆ.

ಹವಾಮಾನ ಇಲಾಖೆಯು ಇನ್ನೂ ಮೂರು ದಿನಗಳು ಮಳೆ ಮುಂದುವರೆಯಬಹುದು ಎಂದು ಮುನ್ಸೂಚನೆ ನೀಡಿದ್ದರಿಂದ ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ.

ರಕ್ಷಣಾ ತಂಡಗಳಿಗೆ ಮೆಚ್ಚುಗೆಯ ಮಹಾಪೂರ:

ಮಳೆ ಮತ್ತು ಪ್ರವಾಹ ಭೀತಿ ಹಾಗೂ ಜಲಾವೃತಗೊಂಡ ಪ್ರದೇಶಗಳಲ್ಲಿ ಎನ್. ಡಿ. ಆರ್. ಎಫ್ ತಂಡ ಮತ್ತು ಎಸ್.ಡಿ. ಆರ್. ಎಫ್ ತಂಡಗಳು ಹಗಲಿರುಳು ಶ್ರಮಿಸುತ್ತಿದ್ದು, ಮೂಲಗಳ ಪ್ರಕಾರ 50 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಎರಡೂ ತಂಡಗಳ ಕಾರ್ಯಕ್ಕೆ ಅನೇಕ ಗ್ರಾಮಗಳಲ್ಲಿ ಅವರ ಅವಿರತ ಪ್ರಯತ್ನ ಹಾಗೂ ಸೇವೆಗೆ ಮೆಚ್ಚುಗೆ ಸಲ್ಲಿಸುತ್ತಿದ್ದಾರೆ. ಭೀಮಾ ತೀರದಲ್ಲಿ ಈಗ ನಿರಾಶ್ರಿತರ ಸಂಖ್ಯೆ 8 ಸಾವಿರಕ್ಕೂ ಹೆಚ್ಚಾಗಿದ್ದು 1.07 ಹೆಕ್ಟರ್ ಬೆಳೆ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.

ಇಷ್ಟೇ ಅಲ್ಲ, ಇನ್ನೂ ಮಳೆಯಾದರೆ ಈ ಸಂಖ್ಯೆ ಹೆಚ್ಚಾಗುವುದು, ಮನೆ ಕಳೆದುಕೊಂಡ ಜನರು ಈಗ ಕರೋನಾ ಹಾಗೂ ಪ್ರವಾಹದಿಂದ ಈಗ ಸಂಕಟ ಅನುಭಸುತ್ತಿದ್ದಾರೆ.

ಅರುಣ ಹೊಳೆಯಣ್ಣವರ, ಬೀದರ ನ ಸಾಮಾಜಿಕ ಕಾರ್ಯಕರ್ತ ಪ್ರತಿದ್ವನಿ ತಂಡ ದ ಜೊತೆ ಮಾತನಾಡಿ, “ಕಳೆದ ವರ್ಷವು ಮಳೆ ಪ್ರವಾಹದಿಂದ ಜನರು ತೊಂದರೆಗೀಡಾದರು ಈಗ ಮತ್ತೆ ಅದೇ ಸ್ಥಿತಿ. ಮೊದಲೆ ಕೋವಿಡಾತಂಕ, ಮಳೆ ಹೆಚ್ಚಾಗಿ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ವರ್ಷ ಬೆಳೆಯೂ ಅಷ್ಟಕ್ಕಷ್ಟೇ, ಹೀಗಾದರೆ ಬದುಕುದಾದರೂ ಹೇಗೆ. ಸರ್ಕಾರಗಳು ಯೋಜನೆಗಳನ್ನು ಹಾಗೂ ಪ್ಯಾಕೇಜ್ ಗಳನ್ನು ಘೋಷಿಸುತ್ತಿವೆ ಆದರೆ ಅವು ಎಷ್ಟರ ಮಟ್ಟಿಗೆ ನಿಜವಾಗಿ ತೊಂದರೆ ಆದವರಿಗೆ ಮುಟ್ಟುತ್ತವೆ ಎನ್ನುವುದನ್ನೂ ಗಮನಿಸುತ್ತಿರಬೇಕು. ಪ್ರವಾಹ ಪೀಡಿತ ಜನರ ಧ್ವನಿ ಸರ್ಕಾರಕ್ಕೆ ಮುಟ್ಟಲಿ ಎಂಬುದು ನಮ್ಮ ಕಳಕಳಿ”, ಎಂದು ಹೇಳಿದ್ದಾರೆ.

ಕಲಬುರಗಿಯ ರೈತ ರಾಚಯ್ಯ ಅವರು, “ಮಳೆ ಕೆಲವು ಭಾಗಗಳಲ್ಲಿ ತಗ್ಗಿದ್ದರೂ, ಅಪಾಯ ಹಾಗೂ ಇನ್ನೂ ತಪ್ಪಿಲ್ಲ. ನದಿಗಳು ಉಕ್ಕುತ್ತಲೇ ಇವೆ. ಈಗಾಗಲೇ ರೈತರು ನಲುಗಿ ಹೋಗಿದ್ದಾರೆ. ಜಲಾಶಯಗಳಿಂದ ಇನ್ನೂ ನೀರು ಬಿಟ್ಟರೆ, ಅಪಾರ ಪ್ರಮಾಣದಲ್ಲಿ ಹೊಲಗದ್ದೆಗಳು ನಾಶವಾಗುವ ಪರಿಸ್ಥಿತಿಯಿದೆ. ಕಳೆದ ಪ್ರವಾಹದ ಹೊಡೆತಕ್ಕೆ ಸಿಕ್ಕವರು ಇನ್ನೂ ಸುಧಾರಿಸಿಕೊಂಡಿಲ್ಲ. ನಮ್ಮ ಭಾಗದಲ್ಲಿ ದಿನಕ್ಕೆ ಕೋವಿಡ್‌ ಪ್ರಕರಣ ಇನ್ನು ಹೆಚ್ಚಾಗಿದ್ದು ಜನರು ತತ್ತರಿಸಿ ಹೋಗಿದ್ದಾರೆ. ಇತ್ತ ನೆರೆ ಭೀತಿಯೂ ಶುರುವಾಗಿದೆ”, ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ನೆರೆ ಪೀಡಿತ ಸ್ಥಳಗಳಿಗೆ ಕಂದಾಯ ಸಚಿವರ ಭೇಟಿ:

ನೆರೆಯಿಂದ ತತ್ತರಿಸಿದ್ದ ಉತ್ತರ ಕರ್ನಾಟಕದ ಪ್ರದೇಶಗಳಿಗೆ ಕಂದಾಯ ಸಚಿವ ಆರ್‌ ಅಶೋಕ್‌ ಭೇಟಿ ನೀಡಿದ್ದಾರೆ. ಮಳೆಯಿಂದಾಗಿ ತತ್ತರಿಸಿದ್ದ ಜನರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com