ದೀಪಾವಳಿ ಪಟಾಕಿ ಮಾರಾಟದ ಮೇಲೂ ಕೋವಿಡ್‌ ಕರಿ ನೆರಳು

ಈ ಬಾರಿ ಶೇ. 60ರಷ್ಟು ಮಾತ್ರ ಪಟಾಕಿ ಮಾರಾಟವಾಗುವ ಸಾಧ್ಯತೆಯಿದೆ ಎಂದು, ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ.
ದೀಪಾವಳಿ ಪಟಾಕಿ ಮಾರಾಟದ ಮೇಲೂ ಕೋವಿಡ್‌ ಕರಿ ನೆರಳು

ಕೋವಿಡ್‌ ಸಂಕಷ್ಟದ ನಡುವೆ ದೀಪಾವಳಿ ಹಬ್ಬದ ತಯಾರಿಯಾಗಿ ಪಟಾಕಿ ಮಾರಾಟಕ್ಕೆ ಸರ್ಕಾರ ನಿಯಮಾವಳಿಗಳನ್ನು ರೂಪಿಸಿದೆ. ನವೆಂಬರ್‌ 1ರಿಂದ 17ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಕೋವಿಡ್‌ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

ಪಟಾಕಿ ಮಾರಾಟ ಮಾಡಲಿಚ್ಚಿಸುವವರು ಇತರ ವಾಣಿಜ್ಯ ಮತ್ತು ವಸತಿ ಪ್ರದೇಶಗಳಿಂದ ದೂರದಲ್ಲಿ ತಮ್ಮ ಅಂಗಡಿಗಲನ್ನು ಕಟ್ಟಿಕೊಳ್ಳಬೇಕು. ಅಧಿಕೃತ ಮಾರಾಟಗಾರರಿಗೆ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುವುದು. ಪಟಾಕಿ ಮಾರಾಟ ಮಾಡಲು ಬಯಸುವವರು, ಸಂಬಂಧಿತ ಅಧಿಕಾರಿಗಳಿಂದ ಪರವಾನಿಗೆಯನ್ನು ಪಡೆದಿರಬೇಕು ಹಾಗೂ ಆ ಪರವಾನಿಗೆಯನ್ನು ತಮ್ಮ ಅಂಗಡಿಯಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಇಡಬೇಕು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪ್ರತೀ ಅಂಗಡಿಗಳಲ್ಲಿ ಗಾಳಿ ಬೀಸುವಂತಿರಬೇಕು. ಮುಚ್ಚಿದ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ. ಗ್ರಾಹಕರು ಆರು ಅಡಿ ಅಂತರವನ್ನು ಕಾಯ್ದುಕೊಳ್ಳಲು ನೆರವಾಗುವಂತೆ ಅಲ್ಲಲ್ಲಿ ಗುರುತು ಮಾಡಿರಬೇಕು. ಒಂದೇ ಬಾರಿಗೆ ಹೆಚ್ಚಿನ ಜನರು ಅಂಗಡಿಯೊಳಗೆ ಮುಗಿ ಬೀಳದಂತೆ ಮಾರಾಟಗಾರರು ಎಚ್ಚರವಹಿಸಬೇಕು.

ಪ್ರತೀ ಗ್ರಾಹಕರಿಗೂ ಸ್ಯಾನಿಟೈಸರ್‌ ವ್ಯವಸ್ಥೆಯನ್ನು ಮಾರಾಟಗಾರರೇ ಮಾಡಬೇಕು. ಇದರೊಂದಿಗೆ ಅಂಗಡಿಯನ್ನು ಪ್ರತಿದಿನ ಸ್ಯಾನಿಟೈಸ್‌ ಮಾಡುವ ಹೊಣೆಯನ್ನು ಕೂಡಾ ಅವರೇ ಹೊತ್ತುಕೊಳ್ಳಬೇಕಾಗಿದೆ. ಮಾಸ್ಕ್‌ ಕಡ್ಡಾಯವಾಗಿ ಧರಿಸತಕ್ಕದ್ದು, ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಬಾರಿಯ ದೀಪಾವಳಿ ಹಬ್ಬದಲ್ಲಿ ಪಟಾಕಿಗಳ ಮಾರಾಟ ಕಡಿಮೆಯಾಗುವ ಸಂಕಷ್ಟವನ್ನು ಮಾರಾಟಗಾರರು ಎದುರಿಸಬೇಕಾದ ಅನಿವಾರ್ಯತೆಯಿದೆ. 2018ರ ನಂತರ ಸುಪ್ರಿಂಕೋರ್ಟ್‌ ಹೊರಡಿಸಿದ್ದ ಕೆಲ ನಿಯಮಗಳಿಂದ ನಗರ ಪ್ರದೇಶದಲ್ಲಿ ಪಟಾಕಿ ಮಾರಾಟ ಕಡಿಮೆಯಾಗಿತ್ತು. ಈಗ ಕೋವಿಡ್‌ ನಿಯಮಾವಳಿಗಳ ಕಾರಣದಿಂದ ಈ ಬಾರಿ ಶೇ. 60ರಷ್ಟು ಮಾತ್ರ ಪಟಾಕಿ ಮಾರಾಟವಾಗುವ ಸಾಧ್ಯತೆಯಿದೆ ಎಂದು, ಮಾರಾಟಗಾರರು ಅಳಲು ತೋಡಿಕೊಂಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com