ಕರ್ನಾಟಕ: 8477 ಹೊಸ ಕೋವಿಡ್‌ ಪ್ರಕರಣ ದಾಖಲು

ರಾಜ್ಯದಲ್ಲಿ ಕರೋನಾ ಸೋಂಕಿನಿಂದ ಇದುವರೆಗೂ 10,283 ಮಂದಿ ಅಸುನೀಗಿದ್ದಾರೆ.
ಕರ್ನಾಟಕ: 8477 ಹೊಸ ಕೋವಿಡ್‌ ಪ್ರಕರಣ ದಾಖಲು

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸೆಪ್ಟೆಂಬರ್‌ 9ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 8477 ಹೊಸ ಕರೋನಾ ಪ್ರಕರಣಗಳು ಕಂಡು ಬಂದಿದೆ. ಬೆಂಗಳೂರಿನಲ್ಲಿ 3788 ಹೊಸ ಪ್ರಕರಣಗಳು ಕಂಡು ಬಂದಿವೆ.

ರಾಜ್ಯದಲ್ಲಿ ಒಟ್ಟು ಕರೋನಾ ಪೀಡಿತರ ಸಂಖ್ಯೆ 7,43,848 ತಲುಪಿದ್ದು, ಇವರಲ್ಲಿ 6,20,008 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಸಕ್ರಿಯವಾಗಿರುವ 1,13,538 ಪ್ರಕರಣಗಳಲ್ಲಿ, 939 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ರಾಜ್ಯದಲ್ಲಿ ಕರೋನಾ ಸೋಂಕಿನಿಂದ ಇದುವರೆಗೂ 10,283 ಮಂದಿ ಅಸುನೀಗಿದ್ದಾರೆ.

October 15.pdf
download

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com